ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

ಶ್ರೀಕಾಂತರವರು "ನಮ್ಮಮೂಗಿನ ನೇರಕ್ಕೆ" ಎಂಬ ತಲೆಬರಹದ http://sampada.net/blog/shreekantmishrikoti/22/08/2008/11064 ಈ ಲೇಖನ ಓದಿದ ಮೇಲೆ ತುಂಬ ದಿನಗಳಿಂದ ನಾನು ತಲೆ ಕೆಡುಸ್ಕೊಂತ ಇದ್ದ ಒಂದು ವಿಷಯದ ಬಗ್ಗೆ ಬರೆಯೂಣ ಅನಿಸುತ್ತಿದೆ....
ನನಗೆ ನಿಮ್ಮಷ್ಟು ಚನ್ನಾಗಿ ಬರೆಯೊಕೆ ಬರಲ್ಲ ಅಂತ ಇಷ್ಟು ದಿನ ಸುಮ್ನೆ ಇದ್ದೆ. ಆದ್ರೆ ಇವತ್ತು ಯಾಕೊ ಬರೆಯೊ ದೈರ್ಯ ಮಾಡ್ತ ಇದಿನಿ... ನಾನು ಮೊದಲ ಸಲ ಬರೀತಾ ಇರೋದ್ರಿಂದ ವ್ಯಾಕರಣ ಅಥವಾ ವಾಕ್ಯ ರಚನೆ ತಪ್ಪು ಅಗೋ ಸಾದ್ಯತೆಗಳಿರೊದ್ರಿಂದ ನಿಮ್ಮಲ್ಲಿ ಕ್ಷಮೆ ಕೆಳ್ತೀನಿ. ತಪ್ಪಿದ್ರೆ ಕ್ಷಮಿಸಿ. ಮನೆಲಿ ಮಕ್ಕಳ ಜೊತೆ ಮಾತೃ ಬಾಷೆಯಲ್ಲಿ ಮತಾಡದೆ ಇರೊ ತಂದೆ ತಾಯಿಗಳು ನಾನು ಬರೀತಿರೊ ವಿಷಯದ subject ಗಳು.

ಈಗಿನ ತಂದೆ ತಾಯಿಗಳಿಗೆ ( ಈ ಹಿಂದೆ ಕೂಡ) ಮಕ್ಕಳು ಇಂಗ್ಲೀಶಲ್ಲಿ ಚನ್ನಾಗೆ ಮತಾಡಬೇಕು, ಇಂಗ್ಲೀಶ್ ಪಂಡಿತರಾಗಬೇಕು ಅನ್ನೊ ಚಪಲ, ಅದರ ಜೊತೆಗೆ ಇಂಗ್ಲೀಶಲ್ಲಿ ಮಾತಡದ್ರೆ ಅದೆನೊ ಒಳ್ಳೆ ಲೆವೆಲ್ಲು ಅನ್ನೊ ನಂಬಿಕೆ. ಅದಕ್ಕೆ ಎನ್ ಮಡ್ತಾರೆ ಅಂದ್ರೆ ಮಗು ಶಾಲೆಲಿ ಇಂಗ್ಲೀಶ್ ಕಲ್ತಿದ್ದು ಸಾಲದು ಅಂತ ಮನೆಗೆ ಬಂದ ಮೆಲೂ ಮಗು ಜೊತೆ ಇಂಗ್ಲೀಶಲ್ಲಿ ಕಿರ್ಚಾಟ ಶುರು ಮಾಡ್ತರೆ. ಇದ್ರಲ್ಲಿ ನನಿಗೆ ಅರ್ಥ ಅಗದೇ ಇರೊ ಕೆಲವು ವಿಷಯ ಅಂದ್ರೆ ಮನೆಲಿ 24 ಗಂಟೆನು ಇಂಗ್ಲೀಶಲ್ಲಿ ಹೆಂಗ್ ಮತಾಡ್ತರೆ ? ನೀವು ತಮಾಶೆ ಅನ್ಕೊಂಡ್ರು ನನ್ಗೆ ಸಿರೀಯಸ್ ಅಗಿ ತಲೆ ತಿನ್ನೊ ಪ್ರಶ್ನೆಗಳು ಇವು. ನಾನು ಕೆಳಗೆ ಟಿಪ್ಪಣಿ ಮಡ್ತಿರೊ ಮಾತುಗಳನ್ನ ಇಂಗ್ಲೀಶ್ ಅಲ್ಲಿ ಹೆಂಗ್ ಮತಾಡ್ತರೆ ..

1) ಮಗುಗೆ ಇಂಗ್ಲೀಶಲ್ಲಿ 'ಜಡೆ' ಹಾಕ್ತಿನಿ ಬಾ ಅಂತ ಹೆಂಗ್ ಹೆಳ್ತಾರೆ ? 'ಜಡೆ' ಗೆ ಎನೊ ಒಂದು ಹೆಳುದ್ರು ಅನ್ಕೊಳನ. 'ಜುಟ್ಟು' ಕಟ್ಕೊ ಅಥವಾ 'ಬ್ಯೆತಲೆ' ತಗಿತಿನಿ ಬಾ ಅಂತ ಹೆಂಗ್ ಹೆಳ್ತಾರೆ ? ಎಲ್ಲದುಕ್ಕು ಒಂದೆ ಇಂಗ್ಲೀಶ್ ಪದ ಬಳಸುದ್ರೆ ಮಕ್ಕಳಿಗೆ ವ್ಯತ್ಯಾಸ ಹೆಂಗ್ ತಿಳಿಯತ್ತೆ ?

2) ಇಂಗ್ಲೀಶಲ್ಲಿ ದೇವರಿಗೆ 'ಮಂಗಳಾರತಿ' ಮಾಡು, 'ಎಡೆ' ಇಡು ಅಥವಾ 'ಗಂದಧ ಕಡ್ಡಿ ಬೆಳಗು' ಅಂತ ಹೆಂಗ್ ಹೆಳ್ತಾರೆ ?

3) ಇನ್ನು 'ಚಕ್ಕಂಬಕ್ಕಳ' ಹಾಕ್ಕೊಂಡು ಕೂರು,'ಈಳಗೆಮಣೆ ತೊಂಗೊಂಡ್ ಬಾ', ಪೂಜೆ ಮುಗಿತು 'ಅಕ್ಷತೆ ಕಾಳು' ಹಾಕು ಈ ಎಲ್ಲ ಮಾತನ್ನು ಇಂಗ್ಲೀಶಲ್ಲಿ ಹೆಂಗ್ ಹೆಳ್ತಾರೆ ?

4) ಇನ್ನು ಊಟದ ವಿಷಯಕ್ಕೆ ಬಂದ್ರೆ 'ತಿಳಿಸಾರು','ಸಾಂಬಾರು','ಪಲ್ಲ್ಯ', 'ಚಟ್ನಿ' ಈ ಎಲ್ಲ ಪದಗಳಿಗು ಇಂಗ್ಲೀಶಲ್ಲೂ ಬೇರೆ ಬೇರೆ ಪದಗಳು ಇದವಾ ? ಅಥವಾ ಎಲ್ಲದುಕ್ಕು ಒಂದೆ ಪದ ಬಳಸುತ್ತರಾ ?

5) ಇಂಗ್ಲೀಶಲ್ಲಿ 'ಹೊಳಿಗೆ', 'ಒಬ್ಬಟ್ಟು','ಪಾಯಸ' ಇವಕ್ಕೆಲ್ಲ ಎನಂತಾರೆ ? 'ಮುದ್ದೆಗೆ' ಅದೆನೊ 'ರಾಗಿ ಬಾಲ್ಸ್' ಅಂತ ಅನ್ನೊದು ಕೆಳದ್ರೆ ಮೈಯಲ್ಲ ಉರಿಯತ್ತೆ.

ಸಾಮನ್ಯವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು ಬರೊದು ಬಾಷೆ. ಅಂದ್ರೆ ಸಂಸ್ಕೃತಿಯನ್ನು ಮುಂದಿನ ತಲೆಮಾರುಗಿ ಉಳಿಸಿಕೊಂಡು ಹೊಗೊ ಜವಬ್ದಾರಿ ಬಾಷೆ ಮೆಲೆ ಇರುತ್ತೆ (ನಾವು ಬಾಷೆ ಬಳಿಸಿದರೆ).

ಇನ್ನೊಂದು ನಾವು ಗಮನಿಸಬೇಕಾದ ಅಂಶ ಅಂದ್ರೆ ಮೇಲೆ ನಾನು ಇಂಗ್ಲೀಶಲ್ಲಿ ಹೆಳೋಕೆ ಬರದೆ ಇರೊ ಅಂತ ಅಥವಾ ಕಷ್ಟ ಅನ್ನಿಸೊ ಅಂತ ಕೆಲವು ಕನ್ನಡ ಪದಗಳ ಉದಾಹರಣೆ ಕೊಟ್ಟಿದಿನಿ. ಅದೆ ರೀತಿ ಕನ್ನಡದಲ್ಲು ಹೆಳೋಕೆ ಬರದೆ ಇರೊ ಅಂತ ಅಥವಾ ಕಷ್ಟ ಅನ್ನಿಸೊ ಅಂತ ಇಂಗ್ಲೀಶ್ ಪದಗಳು ಇದವೆ. ಉದಾಹರಣೆಗೆ ಪಿಜ್ಜಾ, ಬರ್ಗರ್,ಕೋಟು,ಪ್ಯಾಂಟು,ಬೂಟ್ಸ್.. ಇತ್ಯಾದಿ. ಕಾರಣ ಇಷ್ಟೆ "ಯಾವುದು ಸಂಸ್ಕೃತಿಯಲ್ಲಿ ಇರೊಲ್ವೊ ಅದು ಬಾಷೆಯಲ್ಲು ಇರಲ್ಲ".ಅದಕ್ಕೆ ನಾವು ನಮ್ಮ ಬಾಷೆಯಲ್ಲಿ ಮಾತಡಲಿಲ್ಲ ಅಂದ್ರೆ ನಿಧಾನಕ್ಕೆ ನಮ್ಮ ಸಂಸ್ಕೃತಿನೂ ನಶಿಸಿ ಹೊಗತ್ತೆ ಅಥವಾ ಮಹತ್ವ ಕಳೆದುಕೊಳ್ಳುತ್ತೆ.

Rating
No votes yet

Comments