ನನ್ನೊಲವಿಗೆ....
ನಾ ಚಿಗುರಾಗುವೆ
ಎನ್ನೊಳಗೆ ಲೀನವಾಗುವ
ಮುಂಜಾವದ ಮಂಜು
ನೀನಾಗಿ ಬರುವೆಯೆಂದು...
ನಾ ಹೂವಾಗುವೆ
ಈ ಪ್ರೀತಿ ಮಧುವ
ಹೀರ ಬರುವ ತುಂಬಿ
ನೀನಾಗಿ ಬರುವೆಯೆಂದು....
ನಾ ಹಣ್ಣಾಗುವೆ
ಈ ರುಚಿಯ ಸವಿಯ ಬರುವ
ಹೆಣ್ಣು ಗಿಳಿ
ನೀನಾಗಿ ಬರುವೆಯೆಂದು...
ನಾ ಮರವಾಗುವೆ
ಎನ್ನಪ್ಪಿ ಬೆಳೆವ
ಲಲಿತ ಲತೆ
ನೀನಾಗಿ ಬರುವೆಯೆಂದು...
ನಾ ಮರದ ಕೊಳಲಾಗುವೆ
ಒಳಗಣ್ಣಿನಿಂದುಸುರಿ ಬರುವ
ಸ್ವರ ನಿನಾದವಾಗಿ
ನೀ ಕಾಣ ಬರುವೆಯೆಂದು....
ನಾ ನಿರುಳ ಶಶಿಯಾಗುವೆ
ನೀ ನಭದಿ ಮಿನುಗುವ
ಧೃವತಾರೆಯಾಗಿ
ಕಾಣಬರುವೆಯೆಂದು.....
ಕಡೆಗೆ
ನಾ ನಾನಾಗುವೆ
ನೀ ನೀನಾಗಿ
ಎನ್ನೆದೆಬಡಿತದ ತಾಳವಾಗಿ
ಇರುವೆಯೆಂದು..ಎಂದೆಂದೂ....
- ಪ್ರಶಾಂತ ಎಂ.ಸಿ.
Rating
Comments
ಉ: ನನ್ನೊಲವಿಗೆ....
ಉ: ನನ್ನೊಲವಿಗೆ....
ಉ: ನನ್ನೊಲವಿಗೆ....