ನಾನು ಉತ್ತಮ ಪುರುಷ

ನಾನು ಉತ್ತಮ ಪುರುಷ

ನಾನು ಉತ್ತಮ ಪುರುಷ
ಹಾಸ್ಯ ಎಂಬುದು ಅಷ್ಟು ಸುಲಭವಾಗಿ ಒಲಿಯುವ ಕಲೆಯಲ್ಲ. ನವಿರಾದ ಹಾಸ್ಯ ತುಂಬಿದ ಮನ ಬಿಚ್ಚಿ ನಗಿಸುವಂತಹ ಹಾಸ್ಯಲೇಖನಗಳು ಬರೆಯುವುದು ನಿಜಕ್ಕೂ ಕಷ್ಟದ ಕೆಲಸ. ಹಿಂದೆ ಅಂದರೆ ಈಗ್ಗೆ ಹತ್ತಾರು ವರ್ಷಗಳ ಕೆಳಗೆ S.P.ರಾಮಾನುಜಂ ಎಂಬ ಹಾಸ್ಯ ಲೇಖಕರು ಬರೆದ ಚುಟುಕಗಳನ್ನು ಓದುತ್ತಿದ್ದೆ. ಅವರು ಯಾವುದೇ ಪುಸ್ತಕ ಹೊರತಂದಿದ್ದು ನನಗೆ ಗೊತ್ತಿಲ್ಲ. ಆದರೆ ಅವರು ರೇಡಿಯೋಗಳಲ್ಲಿ ಅವರ ಕವನಗಳನ್ನು ವಾಚನ ಮಾಡುತ್ತಿದ್ದುದು ಕೇಳಿದ್ದೆ.
ಇತ್ತೀಚೆಗೆ ಅವರ ಹೆಸರೇ ಕೇಳಿ ಬರುತ್ತಿಲ್ಲ . ಅವರು ಈಗ ಬರೆಯುತ್ತಿದ್ದಾರೋ ಇಲ್ಲವೋ ಅದೂ ತಿಳಿದಿಲ್ಲ. ಆದರೆ ಅವರು ಆಕಾಶವಾಣಿಯಲ್ಲಿ ಹೇಳಿದ ಒಂದು ಕವನ ಅಚ್ಚಳಿಯದಂತೆ ನನ್ನ ಮನಸಿನಲ್ಲಿ ಉಳಿದಿದೆ. ಅದು ಹೀಗಿದೆ,
ಅವರು ಅದರ ಸಂದರ್ಭವನ್ನು ವಿವರಿಸಿ ನಂತರ ಈ ಕವನ ಹೇಳಿದರು. ಅವರು ಒಂದು ಹಾಸ್ಯಕವನವಾಚನ ಗೋಷ್ಟಿಯಲ್ಲಿ ಭಾಗವಹಿಸಿದ್ದರು. ಆ ಗೋಷ್ಟಿಗೆ ರಾಮಾನುಜಂ ಅವರ ಪುಟ್ಟ ಮಗನೂ ಬಂದಿದ್ದ. ಗೋಷ್ಟಿ ಮುಗಿದಾಗ ಅವನು ಮುಖ ಬಿಗಿದುಕೊಂಡಿದ್ದನಂತೆ. “ಯಾಕೋ ಮರಿ? ಕೋಪ ಮಾಡಿಕೊಂಡಿದೀಯಲ್ಲ?” ಎಂದು ರಾಮಾನುಜಂ ಕೇಳಿದರು. ಪಕ್ಕದಲ್ಲೇ ಅವರ ಗೆಳೆಯರು ಅನೇಕರು ಇದ್ದರು.
ಆಗ ಮಗ ಮುಖ ದಪ್ಪ ಮಾಡಿಕೊಂಡೇ’ “ಅಪ್ಪಾಇನ್ನುಮುಂದೆ ನೀನು ಈ ಕವಿಗೋಷ್ಟಿಗೆಲ್ಲಾ ಹೋಗಬೇಡಪ್ಪ.” ಎಂದನಂತೆ.
“ಯಾಕೋ ಮರಿ?” ರಾಮಾನುಜಂ ತಿರುಗಿ ಕೇಳಿದರು.
“ಮತ್ತೆ ಜನ ಎಲ್ಲ ಬೇರೆಯವರು ಕವನ ಓದಿದಾಗ seriousಆಗಿ ಕೇಳ್ತಾ ಇದ್ದರು. ನೀನು ಹೇಳಿದಾಗ ಮಾತ್ರ ಜನ ಬಿದ್ದು ಬಿದ್ದು ನಗುತ್ತಿದ್ದರು. ನನಗೆ ಎಷ್ಟು ಅವಮಾನ ಅನ್ನಿಸಿತು ಗೊತ್ತಾ?”
ಈ ಉತ್ತರ ಕೇಳಿದಾಗ ಅವರು ಗೆಳೆಯರೊಂದಿಗೆ, “ನೋಡ್ರಪ್ಪ ಹಾಸ್ಯ ಕವಿ ಗೋಷ್ಟಿ ಎಂದ ಮೇಲೆ ಜನಗಳು ನಗುವ ಹಾಗೆ ಮಾಡೋನೇ great. ನಾನೇ ಉತ್ತಮ ಹಾಸ್ಯ ಬರಹಗಾರನಲ್ಲವೆ?”
ಒಬ್ಬ ಗೆಳೆಯ, “ರಾಮಾನುಜಂ ಇದು ಯಾಕೋ ಅತಿಯಾಯಿತು. ಆತ್ಮಪ್ರಶಂಸೆ ಅಷ್ಟು ಒಳ್ಳೆಯದಲ್ಲ.” ಎಂದರು.
ಆಗ ಅವರು ನಗುತ್ತಾ ಈ ಕೆಳಗಿನ ಸಾಲುಗಳನ್ನು ಹೇಳಿದರಂತೆ.
“ನಾನು ಉತ್ತಮ ಪುರುಷ
ಏನು ಮಾಡಲಿ ವ್ಯಾಕರಣವೇ ಹೇಳಿದೆಯಲ್ಲ.
ನನ್ನ ಮಗನೂ ಒಳ್ಳೆಯವನೇ
ಆದರೂ ಅವನಪ್ಪನಷ್ಟಲ್ಲ
ಏಕೆಂದರೆ ಅವನು ನಾನಲ್ಲವಲ್ಲ.”
ಆತ್ಮ ಪ್ರಶಂಸೆ ಎಂದಾದರು ಅದರಲ್ಲಿ ಎಷ್ಟು ಚೆನ್ನಾಗಿ pun ಮಾಡಿ ಹೇಳಿದ್ದಾರೆ ಎಂದು ಯೋಚಿಸುತ್ತಾ ಅದೇ ಗುಂಗಿನಲ್ಲಿ ಶಾಲೆಗೆ ಹೋದಾಗ ಅಲ್ಲಿ ನನ್ನ ಸಹ ಶಿಕ್ಷಕಿಯೊಬ್ಬರು ಯಾವುದೋ official letter ಬರೆಯಲು ಪ್ರಾರಂಭಿಸಿದ್ದರು. ಅವರು ನನ್ನ ನೋಡಿದಕೂಡಲೇ, “ ಮೇಡಂ, ನನಗೆ ಈ letters ಬರೆಯುವಾಗಲೆಲ್ಲಾ ಒಂದು confusion ಇದ್ದೇ ಇರತ್ತೆಕಣ್ರಿ.” ಎಂದರು.
ನಾನು, “ಏನದು?” ಎಂದು ಕೇಳಿದೆ.
ಅವರು, “ಈ letterಗಳ ‘ಇಂದ’ ಅಡ್ರೆಸ್ ಮೊದಲು ಬರೀಬೇಕಾ ಅಥವಾ ‘ಗೆ’ ಅಡ್ರೆಸ್ ಮೊದಲು ಬರೀಬೇಕಾ ಅಂತ” ಎಂದರು.
ನಾನು ತಕ್ಷಣ,
“ನಾನು ಉತ್ತಮ ಪುರುಷ,
ಎಂದಿಗೂ ನಾನೇ ಮೊದಲಲ್ಲವೇ
ನಂತರವೇ ಯಾರಿದ್ದರೂ
ತೃತಿಯಾ ವಿಭಕ್ತಿ ‘ಇಂದ’ ಆದಮೇಲೇನೇ
ಗೆ, ಇಗೆ, ಇಕ್ಕೆ, ಚತುರ್ಥ ನಂತರವೇ ಅಲ್ಲವೇ?”
ಎಂದೆ. ಅವರು ಮೊದಲು ಕಕ್ಕಾಬಿಕ್ಕಿಯಾಯರೂ ಆಮೆಲೆ ಅರ್ಥವಾದಮೇಲೆ ಅಲ್ಲಿಂದ ಮುಂದಕ್ಕೆ ಅವರಿಗೆ confusion ಬರಲೇ ಇಲ್ಲವಂತೆ!

Rating
No votes yet

Comments