ಅಕ್ಕ ಸಮ್ಮೇಳನದಲ್ಲಿ ಏನಾಗಬೇಕು ?

ಅಕ್ಕ ಸಮ್ಮೇಳನದಲ್ಲಿ ಏನಾಗಬೇಕು ?

ಸ್ನೇಹಿತರೆ,
ಇದೇ ತಿಂಗಳ ಕೊನೆಲಿ ಚಿಕ್ಯಾಗೊ ನಗರದಲ್ಲಿ ೫ನೇ ’ಅಕ್ಕ" ಸಮ್ಮೇಳನ ನಡೆಯೋದಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರೋ ಪ್ರತಿಭಾವಂತ ಕನ್ನಡಿಗರೆಲ್ಲ ಒಂದೆಡೆ ಸೇರೊ ಅಪರೂಪದ ಕ್ಷಣ ಅನ್ನಬಹುದು. ಕರ್ನಾಟಕದ ಭವ್ಯ ಇತಿಹಾಸ, ಪರಂಪರೆ, ಸಾಹಿತ್ಯ, ಸಂಗೀತ,, ಹೀಗೆ ಪ್ರತಿಯೊಂದರ ಪ್ರದರ್ಶನಕ್ಕೂ ಅಲ್ಲಿ ಅವಕಾಶವಿರುತ್ತಂತೆ. ತುಂಬಾ ಸಂತೋಷದ ವಿಷಯವೇ.
ಆದ್ರೆ, ಜಗತ್ತಿನ ಅತ್ಯಂತ ಬುದ್ಧಿವಂತ, ಅತ್ಯಂತ ಪ್ರಬುದ್ಧ ಕನ್ನಡಿಗರು ಒಂದೆಡೆ ಸೇರಿ ಬರಿ ಸಾಹಿತ್ಯ - ಸಂಗೀತ ಅಂತ ಕಳಿಬೇಕಾ ಇಲ್ಲವೇ ಅವರೆಲ್ಲರಿಗೂ ಜೀವನದಲ್ಲಿ ಏನೋ ಒಂದು ಆಗಲೂ ಎಲ್ಲ ಅನುಕೂಲ ಮಾಡಿ ಕೊಟ್ಟ ಇ ನಾಡಿನ ನಾಳೆಗಳ ಬಗ್ಗೆ, ಇ ನಾಡನ್ನು ಜಗತ್ತಿನಲ್ಲೇ ಒಂದು ಮಾದರಿ ಅನ್ನುವಂತೆ ಅಭಿವ್ರದ್ಧಿ ಪಡಿಸೋ ಬಗ್ಗೆ, ಇ ನಾಡಿನ ಮಕ್ಕಳಿಗೆ ಒಂದು ಉಜ್ವಲ ಭವಿಷ್ಯ ಕಲ್ಪಿಸೊ ಬಗ್ಗೆ ಅಲ್ಲಿ ಮಾತಾಗಬೇಕಾ?

ನನಗನಿಸೋದು,, ಹಿಂದೊಮ್ಮೆ ರಾಜರಂತೆ ಇ ನಾಡಲ್ಲಿ ಬಾಳಿ ಬದುಕಿದ ನಾವು , ಇವತ್ತು ಹೆಚ್ಚು ಕಮ್ಮಿ ಗುಲಾಮರ ತರಹ ಬದುಕೋದು ಕಲ್ತು ಬಿಟ್ಟಿದಿವಿ. ಇ ನಾಡಿನ ಬಗ್ಗೆ, ಇ ನಾಡಿನ ಭವಿತವ್ಯದ ಬಗ್ಗೆ ದೊಡ್ಡದೊಂದು ಕನಸು ಕಾಣಲು ಹಿಂಜರಿಯುವಂತ ಒಂದು ಹೇಡಿ ಸಮಾಜವನ್ನ ನಾವು ಕಟ್ಟಿಕೊಂಡು ಬಿಟ್ಟಿದಿವಿ. ಹಿಂದೊಮ್ಮೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ನಾವು, ಇವತ್ತು ಹಿಂದಿ ಜನರ ಗುಲಾಮರಾಗಿದ್ದೇವೆ ಹೊರತು ನಮಗೆ ಯಾವ ಸ್ವಾತಂತ್ರ್ಯವೂ ಸಿಕ್ಕಿಲ್ಲ.

ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಪ್ರತಿಯೊಂದು ಮಗೂನೂ ಚಿನ್ನ. ಪ್ರತಿಯೊಂದು ಮಗೂನಲ್ಲೂ ಅದ್ಭುತವಾದ ಪ್ರತಿಭೆ ಅಡಗಿದೆ. ನಮ್ಮ ಮಕ್ಕಳಲ್ಲಿ ಮುಂದಿನ ನೊಬೆಲ್ ಪ್ರಶಸ್ತಿಗಳ್ನ ಗೆಲ್ಲೋರಿದಾರೆ, ಪ್ರಪಂಚವೇ ಬೆರಗಾಗೋಂಥಾ ವೈಜ್ಞಾನಿಕ ಆವಿಷ್ಕಾರಗಳ್ನ ಮಾಡೋರಿದಾರೆ, ಸಾಟಿಯಿಲ್ಲದ ಅರ್ಥಶಾಸ್ತ್ರಪ್ರವೀಣರಾಗೋರಿದಾರೆ...ಕಲಿಕೆಯ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ತುಟ್ಟತುದೀನ ಮುಟ್ಟೋಂಥಾ ಪ್ರಚಂಡರಿದಾರೆ. ಅಂತ ಮಕ್ಕಳು ಅರಳಲು, ಅಚ್ಚರಿಯ ಸಾಧನೆ ಮಾಡಲು ಎಲ್ಲ ಅವಕಾಶವನ್ನು ನಮ್ಮ ನಾಡಿನಲ್ಲೇ ಮಾಡಿ ಕೊಡಬೇಕು.

ಇವತ್ತಿಗೆ ನಮ್ಮ ಹಾದಿಯಲ್ಲಿರುವ ಎಲ್ಲ ಅಡೆ-ತಡೆಗಳನ್ನು ತೊಡೆದು, ಇ ನಾಡಿನ ಬಗ್ಗೆ, ನಾಡಿನ ಮಕ್ಕಳ ಬಗ್ಗೆ, ಅವರ ಭವಿಷ್ಯದ ಬಗ್ಗೆ ಹೊಸತೊಂದು ಕನಸು ಕಾಣಬೇಕು. ಕರ್ನಾಟಕದಲ್ಲಿನ ಕನ್ನಡಿಗ ತನ್ನೆಲ್ಲ ಸಾಧೆನೆಗಳನ್ನು ಮಾಡಲು ಇ ನೆಲವೇ ಅವನಿಗೆ ಅವಕಾಶ ಮಾಡಿ ಕೊಡಬೇಕು.

ಇಂತ ಒಂದು ಕನಸಿಗೂ, ಅಕ್ಕ ಸಮ್ಮೇಳನಕ್ಕೂ ಏನ್ ಸಂಬಂಧ ಅಂತೀರಾ?

ನಾಡಿನ ಭವ್ಯ ಭವಿಷ್ಯದ ಕನಸು ನನಸಾಗಲು ಬೇಕಾಗುವ ಬೌದ್ಧಿಕ ಹಾಗೂ ಆರ್ಥಿಕ ಶಕ್ತಿ ಎರಡು ಇರುವಂತ ಜನರು ಅಕ್ಕ ಸಮ್ಮೇಳನದಲ್ಲಿ ಒಂದೆಡೆ ಸೇರುತ್ತಾ ಇದ್ದಾರೆ. ಅಲ್ಲಿ, ನಾಡ ಪ್ರೇಮಿ ಕನ್ನಡಿಗರೆಲ್ಲ ಸೇರಿ, ಇ ನಾಡಿನ ಬಗ್ಗೆ, ಅದರ ಉಳಿವು, ಬೆಳೆವಿನ ಬಗ್ಗೆ, ಅದು ಸಾಗಬೇಕಾದ ಹಾದಿಯ ಬಗ್ಗೆ ಚರ್ಚೆ ಮಾಡಬೇಕು. ನೀವೆನ್ ಅಂತೀರಾ?

Rating
No votes yet

Comments