ಮರಗಳೇಕೆ ಹಣ್ಣನೀಯುವುವು?
ಮನೆ-ಕೈತೋಟಕ್ಕೂ ಒಂದು ದಿನಾಚರಣೆ ಇದೆ ಎಂದು ನನಗೆ ಇವತ್ತು ಹರ್ಷವರ್ಧನರ ಬರಹ ಓದುವವರೆಗೆ ತಿಳಿದಿರಲಿಲ್ಲ. ಅವರು ಉದ್ಧರಿಸಿರುವ ಚೀನೀ ಹೇಳಿಕೆಯ ಜೊತೆಯಲ್ಲೇ ಒಂದೆರಡು ಸುಭಾಷಿತಗಳು ನೆನಪಾದವು. ಅದನ್ನೇ ಇಲ್ಲಿ ಕನ್ನಡಿಸಿ ಬರೆದಿರುವೆ:
ತೊರೆನದಿಗಳು ಕುಡಿಯವು ತಮ್ಮ ನೀರನ್ನು
ಮರಗಳಂತೂ ತಿನ್ನವು ತಮ್ಮ ಹಣ್ಣನ್ನು
ಸುರಿಸದು ಮುಗಿಲು ಮಳೆಯ ನೀರಡಿಕೆಯೆಂದು
ಪರೋಪಕಾರಕೆ ಜೀವ ಸವೆಸುವರು ಸುಜನರು
ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ!
ಮೂಲ:
ಪಿಬಂತಿ ನದ್ಯಃ ಸ್ವಯಮೇವ ನೋದಕಂ
ಸ್ವಯಂ ನ ಖಾದಂತಿ ಫಲಾನಿ ವೃಕ್ಷಃ
ಧಾರಾದರೋ ವರ್ಷತಿ ನಾತ್ಮಹೇತವೇ
ಪರೋಪಕಾರಾಯ ಸತಾಂ ವಿಭೂತಯಃ
ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ
-ಹಂಸಾನಂದಿ
Rating
Comments
ಉ: ಮರಗಳೇಕೆ ಹಣ್ಣನೀಯುವುವು?
In reply to ಉ: ಮರಗಳೇಕೆ ಹಣ್ಣನೀಯುವುವು? by ASHOKKUMAR
ಉ: ಮರಗಳೇಕೆ ಹಣ್ಣನೀಯುವುವು?
In reply to ಉ: ಮರಗಳೇಕೆ ಹಣ್ಣನೀಯುವುವು? by ಸಂಗನಗೌಡ
ಉ: ಮರಗಳೇಕೆ ಹಣ್ಣನೀಯುವುವು?
In reply to ಉ: ಮರಗಳೇಕೆ ಹಣ್ಣನೀಯುವುವು? by anil.ramesh
ಉ: ಮರಗಳೇಕೆ ಹಣ್ಣನೀಯುವುವು?
In reply to ಉ: ಮರಗಳೇಕೆ ಹಣ್ಣನೀಯುವುವು? by ಸಂಗನಗೌಡ
ಉ: ಮರಗಳೇಕೆ ಹಣ್ಣನೀಯುವುವು?
In reply to ಉ: ಮರಗಳೇಕೆ ಹಣ್ಣನೀಯುವುವು? by ASHOKKUMAR
ಉ: ಮರಗಳೇಕೆ ಹಣ್ಣನೀಯುವುವು?
ಉ: ಮರಗಳೇಕೆ ಹಣ್ಣನೀಯುವುವು?