ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??

ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??

Comments

ಬರಹ

ಪ್ರಪಂಚದಲ್ಲಿ ಸುಮಾರು ಶೇ೫೦ಕ್ಕೂ ಹೆಚ್ಚು ಜನ ಇಂದು ಇಂಗ್ಲೀಷನ್ನು ಬಲ್ಲವರಾಗಿದ್ದಾರಂತೆ. ಗಮನಿಸಿ ಈ ಶೇ ೫೦ ಜನದಲ್ಲಿ ತಮ್ಮ ಮಾತೄಭಾಷೆ, ಆಡು ಭಾಷೆ ಬೇರೆಯಾಗಿದ್ದಾರೂ ಉದ್ಯೋಗಕ್ಕಾಗಿ ಇಂಗ್ಲೀಷನ್ನು ಕಲಿತವರೂ ಇದ್ದಾರೆ. ಪ್ರತಿ ದಿನ ಪ್ರತಿ ಕ್ಷಣ ಪ್ರಪಂಚದ ಯಾವುದೇ ಒಂದು ಭಾಗದಲ್ಲಿ ವಿಜ್ಞಾನ, ತಂತ್ರಜ್ಞಾನ ಯಾವುದೇ ಕ್ಷೇತ್ರದಲ್ಲಿ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ತತ್ಸಂಬಂಧೀ ಜ್ಞಾನ ಕಮ್ಮಟಗಳೂ, ಚರ್ಚೆಗಳೂ, ಸಭೆಗಳೂ ನಡೆಯುತ್ತಲೇ ಇರುತ್ತವೆ. ಹಲವಾರು ದೇಶದ ತಂತ್ರಜ್ಞರು, ವೈದ್ಯರು ಭಾಗವಹಿಸುವಂತಹ ಇಂತಹ ಸಭೆಗಳಲ್ಲಿ ಜರ್ಮನಿಯವರೇ ಆದರೂ, ಜಪಾನಿನವರೇ ಆದರೂ ಎಲ್ಲ ಸದಸ್ಯರೂ ಅರ್ಥೈಸಿಕೊಳ್ಳಬೇಕಾದ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ಹಾಗಾಗಿ ಒಂದು ಎಲ್ಲರೂ ಬಲ್ಲ ಒಂದು ಸಾಮಾನ್ಯ ಭಾಷೆ ಅಗತ್ಯವೇ ಆಗಿದೆ.

ಹಾಗಾಗಿ ಇಂದಿನ ಬಹಳ ಕನ್ನಡಿಗರ ಕನಸಿನಂತೆ ಕನ್ನಡದಲ್ಲಿ ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಜಾರಿಗೆ ತಂದರೆ ಅಲ್ಲಿ ಓದಿದವರಿಗೆ ಜಾಗತಿಕ ಮಟ್ಟದಲ್ಲಿ 'information exchange' ಹೇಗೆ ಸಾಧ್ಯ? ಏಕೆಂದರೆ ಅಂತಹ ಸಭೆಗಳಲ್ಲಿ ಆಯಾ ವಿಷಯಗಳ ’technical terms and definitions' ಇತ್ಯಾದಿಗಳನ್ನು ಇಂಗ್ಲೀಷಿನಲ್ಲೇ ಬಳಸಬೇಕಾಗುತ್ತದೆ ಅಲ್ಲವೇ? ಅದು ಬರೀ ಬೇಸಿಕ್ ಇಂಗ್ಲೀಷ್ ಕಲಿತು ಮಾತನಾಡುವುದು ಅಸಾಧ್ಯ. ಅಂತಹ ವ್ಯಕ್ತಿ ಆತನ ಪದವಿ ಶಿಕ್ಷಣವನ್ನೂ ಇಂಗ್ಲೀಷಿನಲ್ಲೇ ಓದಿರಬೇಕಾಗುತ್ತದೆ. ಭಾರತದಲ್ಲಿ ಎಂ.ಬಿ.ಬಿ.ಎಸ್ ಓದಿ ವಿದೇಶದಲ್ಲಿ ಇನ್ನೊಂದು ವಿಷಯ ಕಲಿತು ಬರುವವನಿಗೂ ಆ ಭಾಷೆ ಅಗತ್ಯವಿರುತ್ತದೆ.

ಯಾವುದೇ ಕನ್ನಡಿಗನಿಗೂ ಕನ್ನಡವೇ ವಿಶ್ವ ಭಾಷೆಯಾಗುವುದು ಇಷ್ಟವೇ. ಆದರೆ ಅದು ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವೇ ಎಂದು ಯೋಚಿಸಬೇಕಾಗುತ್ತದೆ.

ಹಾಗಾಗಿ ಸಧ್ಯದ ಪರಿಸ್ಥಿತಿಯಾದ ’ಶಿಕ್ಷಣ, ಉದ್ಯೋಗ ದಲ್ಲಿ ಇಂಗ್ಲೀಷ್, ಉಳಿದಂತೆ ಕನ್ನಡ’ ಮುಂದುವರೆಯುವ ಅನಿವಾರ್ಯತೆ ಇದೆಯೇ?

ನಿಮಗೇನೆನ್ನಿಸುತ್ತದೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet