ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ

ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ

ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು
ಆಗೆಲ್ಲಾ ಒಂದು ಕುಟುಂಬವೆಂದರೆ ಕನಿಷ್ಟ ಇಪ್ಪತ್ತೈದು ಜನರಿರುತಿದ್ದರು ಅದೂ ಒಂದೇ ಮನೆಯಲ್ಲಿ. ಅಲ್ಲಿ ಅಜ್ಜ ಅಜ್ಜಿ, ಅಮ್ಮ ಅಪ್ಪ, ಚಿಕ್ಕಮ್ಮ ಚಿಕ್ಕಪ್ಪ ದೊಡ್ಡಪ್ಪ ದೊಡ್ಡಮ್ಮ ಅವರ ಮಕ್ಕಳು, ಇದ್ದರೆ ಅವರ ಮಕ್ಕಳು ಹೀಗೆ . ಊಟದ ಹೊತ್ತಿಗೆ ಎಲ್ಲರೂ ಸಾಲಾಗಿ ಕೂರುತ್ತಿದ್ದರು. ಹೀಗೆ ಅಮ್ಮ ಅವರ ಬಾಲ್ಯದ ನೆನೆಪನ್ನು ಹರಡುತಿದ್ದರೆ ಅ ಸಮಯ ಎಷ್ಟು ಸುಂದರ ಅನ್ನಿಸುತ್ತದೆ.
ಆದರೆ ಈಗಿನ ಕೆಲವು ಅವಿಭಕ್ತ ಕುಟುಂಭಗಳು ನನ್ನ ಕಣ್ಣಾ ಮುಂದೆಯೇ ಕಿತ್ತಾಡಿ ಆಸ್ತಿಗಾಗಿ ಹೊಡೆದಾಡಿ , ಬಡಿದಾಡೊ, ಓರಗಿತ್ತಿಯರ ಕಿತ್ತಾಟಗಳ ನೋಡಿ ಹೊಂದಾಣಿಕೆ ನಿಜವಾಗಲೂ ಸಾಧ್ಯವೇ? ಎಂಬ ಅನುಮಾನ ದಟ್ಟವಾಗತೊಡಗಿವೆ.
ನಾನು ಸೇರಿದ ಕುಟುಂಬವೂ ನಾಲಕ್ಕು ಅಣ್ಣ ತಮ್ಮಂದಿರ ಅನ್ಯೋನ್ಯತೆಯನ್ನು ಹೊಂದಿದಾಗಿತ್ತು ಮೊದಲು . ನಾನು ಕಾಲೇಜಿಗೆ ಹೋಗುವಾಗಲೆಲ್ಲಾ ಅವರ ಅನ್ಯೋನ್ಯತೆಯ ನೋಡಿ ಬಹಳ ಸಂತೋಷಿಸುತ್ತಿದ್ದೆ . ನಂತರದ ದಿನಗಳಲ್ಲಿ ಅವರಲ್ಲಿ ಇಬ್ಬರಿಗೆ ಮದುವೆಯಾಯಿತು ಅವರ ಹೆಂಡತಿಯರೊಳಗೆ ವೈಮನಸ್ಸು ಮೂಡಿತು . ಅಣ್ಣ ತಮ್ಮಂದಿರ ಭಾಂಧವ್ಯವೂ ತುಂಡಾಗುವಷ್ಟು ಸಡಿಲಾದಾಗ ದೂರವಾಗಿರುವುದೇ ಸರಿಯಾದ ದಾರಿ ಎಂದು ಆ ಕುಟುಂಬ ಮೂರು ಮನೆಗಳಾದವು.
ಇದು ನಡೆದದ್ದ್ದು ನಾನು ಆ ಮನೆ ಸೇಉವ ಮುಂಚೆಯೇ.
ನಾನು ಆ ಮನೆ ಸೇರಿದಾಗ ಇದ್ದದ್ದು ಮೂರೇ ಜನ ಅವರ ಅಮ್ಮ ಹಾಗು ಇಬ್ಬರು ಗಂಡು ಮಕ್ಕಳು. ಕೊನೆಯವರು ನನ್ನವರಾದರು . ಕನಿಷ್ಟ ಇರುವ ಜನರೇ ಕೊನೆಯ್ಅವರೆಗೂ ಮುಂದುವರೆಯಲಿ ಎಂದುಕೊಂಡು ನಾನು ಅನುಸರಣೆ ಕಲಿತಿದ್ದರೂ , ಹಳೇಕಾಲದ ಮನ್ಸಿನ ಅತ್ತೆಗೆ ಅದು ಸಹ್ಯವಾಗಲಿಲ್ಲ (ಅದೂ ಅವರ ಮಗನೇ ಆರಿಸಿಕೊಂಡವಳಲ್ಲವೇ ನಾನು?) ಅವರೇ ಹಠ ಮಾಡಿ ನಮ್ಮನ್ನು ದೂರ ಮಾಡಿಕೊಂಡರು ಹೀಗಾಗಿ ಆ ಕುಟುಂಬ ನಾಲ್ಕಾಗಿ ಒಡೆದಿದೆ.

ಈಗಲೂ ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರುತ್ತೇವೆ. ಪ್ರತಿಯೊಬ್ಬ್ಸರ ಮನೆಗಳಲ್ಲ್ಲಿ ಯಾವುದೇ ವಿಶೇಷವಿದ್ದರೂ ಎಲ್ಲರೂ ಅಲ್ಲಿ ಹಾಜಾರು . ಯಾವುದೇ ಪ್ರಮುಖ ನಿರ್ಧಾರಕ್ಕೂ ಎಲ್ಲರ ಅಭಿಪ್ರಾಯ ಮುಖ್ಯ . ಆದರೂ ಅವಿಭಕ್ತ ಕುಟುಂಬಗಳಲ್ಲಿ ಇರುವಂತಹ ಆತ್ಮೀಯತೆ ನಮ್ಮಲ್ಲಿಲ್ಲ ಎನ್ನಿಸುತ್ತದೆ

ಏಕೆ ಈಗಿನವರಲ್ಲಿ ಆ ಹೊಂದಿಕೆ ಕಷ್ಟವಾಗಿದೆಯೇ?
ನಾನು ಈ ಹಿಂದೆ ಹೇಳಿದಂತೆ ಅವಿಭಕ್ತ ಕುಟುಂಬಗಳಲ್ಲಿ ಹೆಂಗಸರಿಗೆ ಸ್ವಾತಂತ್ರವೂ ಕಡಿಮೆ. ಮನೆಯ ಯಜಮಾನನಿಗೆ ಎಲ್ಲ ನಿರ್ಧರಿಸುವ ಹಕ್ಕು ಇರುತ್ತದೆ
ಇದು ನನ್ನ ಅನಿಸಿಕೆ. ಯಾರೂಇದರ ವಿರೋಧಿ ಎಂದು ತಿಳಿಯಬೇಡಿ.

ನಿಮ್ಮ ಅನಿಸಿಕೆಗಳೇನು ?

Rating
No votes yet

Comments