ಆ ಮರ !
ವರ್ಷಗಳ ಹಿಂದೆ ನೆಟ್ಟಿದ್ದ ಗಿಡ
ಇವತ್ತು ಮರ
ಅಕ್ಕರೆಯಿಂದ ನೀರೆರೆದು, ಬೇಲಿ ಹಾಕಿ
ಅದಕ್ಕೊಂದು ಬೋರ್ಡು ಬಿಗಿದು
ಬೀಗಿದ್ದರು
ನಿತ್ಯ ಕಣ್ಣಾಡಿಸಿ, ನೀರು ಹನಿಸಿ
ಮೇಯಲು ಬಂದ ಪಶುಗಳ ಓಡಿಸಿ
ಕಾಯ್ದಿದ್ದರು
ಗಿಡ ಮರವಾಯಿತು
ರಸ್ತೆ ಪಕ್ಕ ಸಮೃದ್ಧವಾಯಿತು
ಕತ್ತೆತ್ತಿ ವಿದ್ಯುತ್ ತಂತಿ
ನೆಕ್ಕಲು ಹೊರಟಿತು
ತೋಳಗಲಿಸಿ ಬೆಳೆದು
ರಸ್ತೆಯ ಮೇಲೆ ಇಣುಕಲು
ಮುಂದಾಯಿತು
ನಿಂತ ಫುಟ್ಪಾತ್ ಉಬ್ಬಿಸಿ
ಕಲ್ಲುಗಳ ಎಬ್ಬಿಸಿ
ನಡೆದವರನ್ನು ಎಡವಿಸಿತು
ನೆಟ್ಟಿದ್ದವರೇ ಬೆಚ್ಚಿದರು
ಕರೆಂಟ್ನವರು ಕವಲು ಕಡಿದರು
ಪಾಲಿಕೆಯವರು ಪಕ್ಕ ಸವರಿದರು
ತುಂಬಿದ ತೋಳುಗಳನ್ನು
ಹೇರಿಕೊಂಡು ಹೋದರು
ಗಿಡವಾಗಿ ನಳನಳಿಸಿದ್ದು
ಮರವಾಗಿ ಬೋಳುಬೋಳು
ಮುತ್ತೈದೆ ವಿಧವೆಯಾದಂತೆ
ಇದ್ದದ್ದು ಇಲ್ಲವಾದಂತೆ
ಆ ರಸ್ತೆಯಲ್ಲೀಗ
ತಂತಿಯನ್ನು ಕೊಂಬೆ ಚುಂಬಿಸುವುದಿಲ್ಲ
ಯಾರೂ ಎಡವಿ ಬೀಳುವುದಿಲ್ಲ
ನಿತ್ಯದ ಪಥಿಕರಿಗೇ
ಮರದ ಗುರುತು ಸಿಗುವುದಿಲ್ಲ
- ಪಲ್ಲವಿ ಎಸ್.
Rating
Comments
ಉ: ಆ ಮರ !
In reply to ಉ: ಆ ಮರ ! by Shashikanth. Birge
ಉ: ಆ ಮರ !
In reply to ಉ: ಆ ಮರ ! by Shashikanth. Birge
ಉ: ಆ ಮರ !
ಉ: ಆ ಮರ !
In reply to ಉ: ಆ ಮರ ! by ಸಂಗನಗೌಡ
ಉ: ಆ ಮರ !
In reply to ಉ: ಆ ಮರ ! by pallavi.dharwad
ಉ: ಆ ಮರ !
ಉ: ಆ ಮರ !
In reply to ಉ: ಆ ಮರ ! by sagar_gv
ಉ: ಆ ಮರ !
ಉ: ಆ ಮರ !
In reply to ಉ: ಆ ಮರ ! by shreedevikalasad
ಉ: ಆ ಮರ !
In reply to ಉ: ಆ ಮರ ! by pallavi.dharwad
ಉ: ಆ ಮರ !
In reply to ಉ: ಆ ಮರ ! by mrsatish
ಉ: ಆ ಮರ !