ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
ಒಂದು=೧
ಒರ್ವರ್, ಒಬ್ಬರ್, ಒಬ್ಬರು
ಒಬ್ಬೊಬ್ಬರು ಎನ್ನುವಾಗ ಮಾತ್ರ ಓರೊರ್ವರ್, ಓರೊರ್ಬರ್,
ಎರಡು=೨
ಇರ್ವರ್, ಇಬ್ಬರ್, ಇಬ್ಬರು= ಎರಡು ಜನ, ಎರಡು ಮಂದಿ
ಇಬ್ಬಿಬ್ಬರು ಎನ್ನುವಾಗ ಈರಿರ್ವರ್, ಈರಿಬ್ಬರ್, ಈರಿಬ್ಬರು,
ಇರ್ಪತ್ತು, ಇಪ್ಪತ್ತು=೨೦
ಇರ್ನೂಱು, ಇನ್ನೂಱು=೨೦೦
ಇರ್ಚಾಸಿರ=೨೦೦೦
ಮೂಱು=೩
ಮೂರ್ವರ್, ಮೂವತ್ತು=೩೦
ನಾಲ್ಕು=೪
ನಲವತ್ತು=೪೦
ನಾಲ್ವರ್, ನಾಲ್ವರು=೪ ಮಂದಿ
ನಾಲ್ನೂಱು, ನಾನೂಱು=೪೦೦
ನಾಲ್ಸಾಸಿರ, ನಾಲ್ಚಾಸಿರ=೪೦೦೦
ಐದು
ಐವರ್, ಐವರು=೫ ಮಂದಿ
ಐವತ್ತು=೫೦
ಐನೂಱು=೫೦೦
ಐಸಾಸಿರ=೫೦೦೦
ಆಱು=೬
ಅಱುವರ್, ಅಱುವರು=೬ ಮಂದಿ
ಅಱುವತ್ತು=೬೦
ಅಱುನೂಱು=೬೦೦, ಆಱು ನೂಱು
ಏೞು=೭
ಏೞ್ಪತ್ತು, ಎೞ್ಪತ್ತು, ಎಪ್ಪತ್ತು=೭೦
ಏೞ್ನೂಱು, ಏೞು ನೂಱು= ೭೦೦
ಏೞ್ವರ್=೭ ಮಂದಿ
ಏೞ್ಸಾಸಿರ/ಏೞ್ಚಾಸಿರ=೭೦೦೦
ಎಂಟು=೮
ಎಣ್ಬರ್=೮ ಮಂದಿ
ಎಣ್ಣೂಱು=ಎಂಟು ನೂಱು
ಎಣ್ಚಾಸಿರ=೮೦೦೦
ಎಂಬತ್ತು=೮೦
ಒಂಬತ್ತು=೯
ಒಂಬಯ್ನೂಱು=೯೦೦
ಒಂಬಯ್ಸಾಸಿರ=ಒಂಬಯ್ಸಾವಿರ=ಒಂಬತ್ತು ಸಾವಿರ
ಒಂಬದಿಂಬರ್=೯ ಮಂದಿ
ಪತ್ತು, ಹತ್ತು=೧೦
ಪದಿಂಬರ್, ಹದಿಂಬರ್, ಹದಿಂಬರ್= ೧೦ ಮಂದಿ
ನೂಱ್, ನೂಱು=೧೦೦
ನೂರ್ವರ್=೧೦೦ ಮಂದಿ
ಇನ್ನೂರ್ವರ್=೨೦೦ ಮಂದಿ, ಮುನ್ನೂರ್ವರ್=ಮುನ್ನೂಱು ಮಂದಿ ಇತ್ಯಾದಿ
ಸಾಸಿರ, ಸಾವಿರ=೧೦೦೦
ಸಾಸಿರ್ವರ್=೧೦೦೦ ಮಂದಿ,
ಇರ್ಚಾಸಿರ್ವರ್=೨೦೦೦ ಮಂದಿ, ಮೂರ್ಸಾಸಿರ್ವರ್=೩೦೦೦ ಮಂದಿ ಇತ್ಯಾದಿ.
Comments
ಉ: ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
ಉ: ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು