ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)

ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)

Comments

ಬರಹ

ಹರಿಪ್ರಸಾದ್ ನಾಡಿಗರು ಅಱುಹಿದ ಱಕಾರಕ್ಕೆ ರಕಾರ ಬೞಸಿದ ವಚನಗಳ ಮೂಲರೂಪ ಕೊಡುತ್ತಿದ್ದೇನೆ

ಅಱಿವನಱಿಯದ ಗುರುವು | ಪರಿವನಱಿಯದ ಶಿಷ್ಯ |
ಸಂದೆರಡು ವರ್ಗವಱಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮೂಱಿಟ್ಟರಾಱಕ್ಕು | ಆಱು ಹನ್ನೆರಡಕ್ಕು |
ಹೇಱುವ ಗೊಡ್ಡು ಹಯನಕ್ಕು ಗುರುಕರುಣ |
ತೋಱುವ ದಿನಕೆ ಸರ್ವಜ್ಞ

ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆಱೆವ ಬ್ರಹ್ಮಾಂಡದೊಳಹೊಱಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮೊಱೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

ಹಂದಿ ಚಂದನದ ಸುಗಂಧವನು ಬಲ್ಲುದೆ?
ಒಂದನು ತಿಳಿಯಲಱಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet