ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಇದೊಂದು ಹಳೆಯ ಫೋಟೊ. ಪಿಯುಸಿಯಲ್ಲಿ ತೆಗೆಸಿಕೊಂಡಿದ್ದು.
ಆಗಿನ ಜೀವೋತ್ಕರ್ಷವೇ ಬೇರೆ. ಎಲ್ಲರದೂ ಉಕ್ಕುವ ವಯಸ್ಸು, ತುಡಿಯುವ ಮನಸ್ಸು. ತರಗತಿಗಳು ಮುಗಿದು, ಎಲ್ಲರೂ ಪರೀಕ್ಷೆಗೆ ಸಿದ್ಧರಾಗುವಾಗ ಬರುವ ಬೀಳ್ಕೊಡುಗೆ ಸಮಾರಂಭದ ದಿನಗಳವು. ಎಷ್ಟೊಂದು ಸಾರಿ ಈ ಬಗ್ಗೆ ಬರೆಯಲು ಕೂತಿದ್ದೇನೆ. ಬರೆಯಲು ಆಗದೇ ಸುಮ್ಮನಾಗಿದ್ದೇನೆ. ಆ ನೆನಪುಗಳನ್ನು ಅಷ್ಟು ಸುಲಭವಾಗಿ, ಸರಳವಾಗಿ ದಾಖಲಿಸುವುದು ಕಷ್ಟ.
ನಾವೊಂದಿಷ್ಟು ಗೆಳತಿಯರಿದ್ದೆವು. ಎಲ್ಲರೂ ಅಷ್ಟೇ ಹುಚ್ಚಿಯರು. ಅಷ್ಟೇ ವ್ಯಾಮೋಹಿಗಳು. ಈ ಕಾಲೇಜು ದಿನಗಳು ಮುಗಿಯುವುದೇ ಇಲ್ಲವೆಂದುಕೊಂಡಿದ್ದೆವು. ಯಾವತ್ತೂ ಹೀಗೇ ಇರುತ್ತೇವೆ ಅಂದುಕೊಂಡಿದ್ದೆವು. ಆಗ ಅಪ್ಪ ನನಗಿನ್ನೂ ಮೊಬೈಲ್ ಕೊಡಿಸಿರಲಿಲ್ಲ. ಆದರೆ, ಮೊದಲ ಬಾರಿ ಸ್ಕೂಟಿ ಕೊಡಿಸಿದ್ದ. ಹರಯದ ವೇಗಕ್ಕೆ ಸ್ಕೂಟಿಯ ಕಿಕ್ ಬೇರೆ ಸೇರಿಕೊಂಡು, ರೂಪಾ ಹೇಳ್ತಾರಲ್ಲ, ಅಂಥ ಕೇರ್ಫ್ರೀ ಜೀವನ ನಡೆಸಿಕೊಂಡು ಆರಾಮವಾಗಿದ್ದೆ.
ಆದರೆ, ಎಷ್ಟು ದಿನ ಹಾಗಿರಲು ಸಾಧ್ಯ? ಆಗಲೇ ಜನವರಿ ಮುಗಿದು ಫೆಬ್ರುವರಿ ಬಂದಾಗಿತ್ತು. ವ್ಯಾಲಂಟೈನ್ಸ್ ಡೇ ಸಂಭ್ರಮವೂ ಮುಗಿದಿತ್ತು. ಇನ್ನೆರಡು ದಿನಗಳಲ್ಲಿ ಬೀಳ್ಕೊಡುವ ಸಮಾರಂಭ. ಅದು ಮುಗಿದರೆ ಕಾಲೇಜು ಜೀವನ ಮುಗಿದಂತೆ. ಮುಂದೇನಿದ್ದರೂ ಪರೀಕ್ಷೆಗೆ ಓದಿಕೊಳ್ಳುವ ಒತ್ತಡ. ಯಾವ ಗೆಳತಿಯೂ ಸಿಗುವುದಿಲ್ಲ. ಮನಸ್ಸಿನ ಮಾತುಗಳನ್ನು ಹೇಳಲಾಗದೇ ಒಳಗೇ ಹುದುಗಿಸಿಕೊಂಡಿರುವ ಗೆಳೆಯರೂ ಸಿಗುವುದಿಲ್ಲ. ಹೋದರೆ ಲೈಬ್ರರಿಗೆ ಹೋಗಬೇಕು. ಹರಟೆ ಹೊಡೆಯಬೇಕೆಂದರೂ ಪರೀಕ್ಷೆಯ ಅಳುಕು.
ಹೀಗಾಗಿ, ಕಾಲೇಜ್ ದಿನದಂದು ಫೋಟೊ ತೆಗೆಸಿಕೊಳ್ಳಲು ನಾವು ನಾಲ್ವರು ಗೆಳತಿಯರು ನಿಶ್ಚಯಿಸಿದೆವು. ಎಲ್ಲರೂ ನಮ್ಮಲ್ಲಿದ್ದ ಅತ್ಯುತ್ತಮ ಡ್ರೆಸ್ ಹಾಕಿಕೊಂಡೆವು. ಸೊಗಸಾಗಿ ಶೃಂಗರಿಸಿಕೊಂಡೆವು. ಎರಡು ಸ್ಕೂಟಿಗಳಲ್ಲಿ ಹಳೆ ಬಸ್ಸ್ಟ್ಯಾಂಡ್ ಕಡೆ ಹೋದೆವು. ಒಬ್ಬರ ಮೇಕಪ್ಪನ್ನು ಇನ್ನೊಬ್ಬರು ಸರಿಪಡಿಸಿ ಫೋಟೊಗೆ ಸಿದ್ಧರಾದೆವು.
ಎರಡು ಫೊಟೊಗಳನ್ನು ತೆಗೆಸಿಕೊಳ್ಳುವ ನಿರ್ಧಾರವಾಯಿತು. ಒಂದರಲ್ಲಿ ಸುಮ್ಮನೇ ನಿಂತಿರುವುದು. ಇನ್ನೊಂದರಲ್ಲಿ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ನಗುತ್ತ ನಿಲ್ಲುವುದು ಎಂದು ಮಾತಾಯಿತು. ಆ ದಿನ ನನಗಿನ್ನೂ ನೆನಪಿದೆ. ಮೊದಲನೇ ಫೋಟೊದಲ್ಲಿ, ವಿದೇಶಿ ಅತಿಥಿಯನ್ನು ಸ್ವಾಗತಿಸಲು ನಿಂತ ಸೋನಿಯಾ ಗಾಂಧಿಯಂತೆ ನಿಂತಿದ್ದೆವು. ಮುಖದಲ್ಲಿ ಕಂಡೂ ಕಾಣದಂಥ ಮುಗುಳ್ನಗೆ. ಹಸನ್ಮುಖ. ಅದು ಹೆಚ್ಚಿನ ಗೊಂದಲವಿಲ್ಲದೇ ಒಕೆ ಆಯಿತು.
ಸಮಸ್ಯೆ ಬಂದಿದ್ದೇ ಎರಡನೇ ಫೋಟೊಕ್ಕೆ. ನಗುವುದು ಎಂದರೆ ಹೇಗೆ? ಸುಮ್ಮನೇ ಮುಗುಳ್ನಗುವುದಾ? ಅಥವಾ ಗಹಗಹಿಸಿ ನಗುವುದಾ ಎಂಬ ಗೊಂದಲ ಶುರುವಾಯಿತು. ಮುಗುಳ್ನಗುತ್ತ ನಿಲ್ಲೋಣ ಎಂಬುದು ನನ್ನ ವಾದ. ಅದು ಸರಿಯಾಗಿರಲ್ಲ, ರಿಸೆಪ್ಷನಿಸ್ಟ್ ನಗು ಥರ ಕೃತಕವಾಗಿರುತ್ತದೆ ಎಂಬುದು ಉಳಿದ ಮೂವರ ವಾದ. ಹೆಗಲ ಮೇಲೆ ಕೈಹಾಕಿಕೊಂಡಿರುತ್ತೇವಲ್ಲ, ಆದ್ದರಿಂದ ಜೋಕೊಂದಕ್ಕೆ ನಗುವಂತೆ ನಗುತ್ತ ನಿಲ್ಲೋಣ ಎಂದು ಗೆಳತಿಯರು ವಾದಿಸಿದರು. ಒಪ್ಪದೇ ಬೇರೆ ಮಾರ್ಗ ಇರಲಿಲ್ಲ.
ಹೆಗಲ ಮೇಲೆ ಕೈಹಾಕಿ ನಿಂತೆವು. ನಗ್ರೇ ನಗ್ರೇ ಎಂದು ಪರಸ್ಪರ ಹುರಿದುಂಬಿಸಿಕೊಂಡೆವು. ನಮ್ಮನ್ನು, ನಮ್ಮ ಸಡಗರವನ್ನು ನೋಡಿ ಫೋಟೊಗ್ರಾಫರ್ ಮುಗುಳ್ಗಗುತ್ತ ಸಿದ್ಧನಾಗಿ ನಿಂತಿದ್ದ. ಆದರೂ ಬೇಕಾದ ಪೋಸ್ ದಕ್ಕಲಿಲ್ಲ. ಜೋರಾಗಿ ನಗಿ ಎಂದು ಆತ ಸಲಹೆ ಕೊಟ್ಟ. ಸುಮ್ಸುಮ್ನೇ ಜೋರಾಗಿ ನಗೋದು ಹೇಗೆ?
ಜೋಕ್ ಹೇಳ್ಕೊಳ್ರಿ ಅಂದ. ಕ್ಯಾಮರಾ ಮುಂದೆ ನಿಂತು ಎಂಥಾ ಜೋಕ್ ಹೇಳಿದ್ರೂ ಅದು ಕೃತಕ ನಗುವನ್ನೇ ಹೊಮ್ಮಿಸುತ್ತದೆ. ಅದರಲ್ಲೂ ಫೊಟೊ ಎಂದರೆ ನನಗೆ ಎಂಥದೋ ಸಂಕೋಚ. ಅಷ್ಟು ಜೋರಾಗಿ ನಗುವುದಂತೂ ನನ್ನಿಂದ ಸಾಧ್ಯವಿರಲಿಲ್ಲ.
ಏನು ಮಾಡುವುದು?
ಕೊನೆಗೆ ನನ್ನ ತರಲೆ ಗೆಳತಿಯೊಬ್ಬಳು ಐಡಿಯಾ ಮಾಡಿದಳು. ಒಬ್ಬಳೇ ಹೋಗಿ ಫೋಟೊಗ್ರಾಫರ್ಗೆ ಗುಟ್ಟಾಗಿ ಏನೋ ಹೇಳಿ ಬಂದಳು. ಸಹಜತೆ ನಟಿಸುತ್ತ, ’ಒನ್ ಟೂ ಥ್ರೀ ಅಂತೀನಿ ಎಲ್ಲ ಜೋರಾಗಿ ನಗಬೇಕು’ ಎಂದು ಅಪ್ಪಣೆ ಕೊಟ್ಟು ಮತ್ತೆ ಹೆಗಲಿಗೆ ಕೈ ಏರಿಸಿದಳು.
ಇನ್ನೂ ’ಒನ್’ ಪ್ರಾರಂಭವಾಗಿರಲಿಲ್ಲ. ಇದ್ದಕ್ಕಿದ್ದಂತೆ ಆ ತರಲೆ, ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತೋರಿಸಿ, ’ಪಲ್ಲಿ, ನಿನ್ನ ಗಂಡ ಹಾಗಿರ್ತಾನೆ ನೋಡೇ’ ಅಂದುಬಿಟ್ಟಳು. ಥಟ್ ಅಂತ ಉಳಿದ ಮೂವರು ಅತ್ತ ಕಡೆ ನೋಡಿದೆವು. ಅಲ್ಲೇನಿದೆ? ಅರೆಬರೆಯಾಗಿ ಎಳೆದಿದ್ದ ಪರದೆಯಾಚೆ, ದೊಡ್ಡ ಮೀಸೆಯ, ರುಮಾಲುಧಾರಿ ರೈತನೊಬ್ಬ ಬೀಡಿ ಸೇದುತ್ತ ನಿಂತಿದ್ದ. ಇನ್ನೊಂದು ಕೈಯಲ್ಲಿ ಮಾರಲು ತಂದ ಈಯಲು ಸಿದ್ಧವಾದಂತಿದ್ದ ಗಬ್ಬಾದ ಎಮ್ಮೆ.
ಅದನ್ನು ನೋಡುತ್ತಲೇ ಎಲ್ಲರೂ ಜೋರಾಗಿ ನಕ್ಕುಬಿಟ್ಟೆವು.
ಅಷ್ಟೊತ್ತಿಗೆ ಫ್ಲ್ಯಾಶ್ ಚಳ್ ಅಂದಿತು. ಅರೆರೆ ಅನ್ನುವಷ್ಟರಲ್ಲಿ ಫೊಟೊ ತೆಗೆದಾಗಿತ್ತು.
ರೀರೀರೀ... ನಮ್ಮ ಮುಖ ಆ ಕಡೆ ಇತ್ರೀ ಎಂದು ನಾನು ಜಗಳ ತೆಗೆದೆ. ಆದರೆ, ಫೋಟೊಗ್ರಾಫರ್ ಮುಗುಳ್ಗಗುತ್ತಿದ್ದ. ಸಕತ್ತಾಗಿ ಬಂದಿದೆ ಮೇಡಂ. ನಾಳೆ ಬಂದು ಪ್ರಿಂಟ್ ತಗೊಂಡ್ಹೋಗಿ ಎಂದ.
ಬ್ಯಾಡ ಇನ್ನೊಂದು ತೆಗೀರಿ. ಅದು ಸರಿ ಬರದಿದ್ರೆ? ಎಂದು ತರಲೆಯನ್ನು ಬಿಟ್ಟು ಇತರ ಮೂವರು ಗಂಟುಬಿದ್ದೆವು.
ಫೋಟೊಗ್ರಾಫರ್ ಸಮಾಧಾನದಿಂದಲೇ ಹೇಳಿದ: ಇಲ್ರೀ ಚೆನ್ನಾಗಿ ಬಂದದೆ. ಒಂದು ವೇಳೆ ಚೆನ್ನಾಗಿಲ್ಲ ಅನ್ನಿಸಿದರೆ ನಾಳೆ ಪುಕ್ಕಟೆಯಾಗಿ ಇನ್ನೊಂದು ಫೋಟೊ ತೆಕ್ಕೊಡ್ತೀನಿ.
ಅನುಮಾನದಿಂದಲೇ ವಾಪಸ್ಸಾದೆವು. ದಾರಿಯುದ್ದಕ್ಕೂ ದೊಡ್ಡ ಮೀಸೆಯ, ಬೀಡಿ ಸೇದುತ್ತಿದ್ದ, ಎಮ್ಮೆ ಮಾರಲು ಬಂದ ರೈತನ ಕುರಿತೇ ಜೋಕ್. ಸ್ಕೂಟಿ ಓಡಿಸುತ್ತಿದ್ದ ನನ್ನನ್ನು ಇತರ ಮೂವರೂ ಸಕತ್ತಾಗಿ ರೇಗಿಸಿದರು. ಇಲ್ಲೇ ರಸ್ತೆಯಲ್ಲಿ ಕೆಡವಿಬಿಡುತ್ತೇನೆ ನೋಡು ಎಂದು ಎಚ್ಚರಿಸಿದ ಮೇಲೆಯೇ ಅವರು ಸುಮ್ಮನಾಗಿದ್ದು. ಆದರೂ ಮುಸಿಮುಸಿ ನಗು ಮುಂದುವರಿದೇ ಇತ್ತು.
ಮರುದಿನ ಮತ್ತೆ ಸ್ಟುಡಿಯೋಕ್ಕೆ ಹೋದೆವು. ಫೋಟೊಗ್ರಾಫರ್ನ ಮುಗುಳ್ನಗು ಸ್ವಾಗತಿಸಿತು. ಮೊದಲು ಕೈಗಿಟ್ಟ ಪ್ರಿಂಟ್ ಮುಗುಳ್ನಗುವಿನ ಸೋನಿಯಾ ಗಾಂಧಿ ಫೋಸ್ನದು. ಪರವಾಗಿಲ್ಲ, ಎಲ್ಲಾ ಚೆನ್ನಾಗೇ ಬಂದಿದ್ದೇವೆ ಎಂದು ಮಾತಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದೆವು. ಆಗ ಕೈಗಿತ್ತ ಎರಡನೇ ಫೋಟೊ.
ತರಲೆಯೊಬ್ಬಳನ್ನು ಬಿಟ್ಟು ಉಳಿದ ಮೂವರು ಕೂತೂಹಲದಿಂದ ದಿಟ್ಟಿಸಿದೆವು. ವಾಹ್. ಏನಂತ ಹೇಳಲಿ! ಎಲ್ಲರೂ ಎಡಕ್ಕೆ ಕತ್ತು ತಿರುಗಿಸಿ ಜೋರಾಗಿ ನಗುತ್ತಿದ್ದೇವೆ. ಫ್ಲ್ಯಾಶ್ನ ಬೆಳಕು ನಮ್ಮ ಕಣ್ಣುಗಳನ್ನು ನಕ್ಷತ್ರಗಳಂತೆ ಮಿಂಚಿಸಿದೆ. ಓಲೆ ಮಿಂಚಾಗಿ ನಲಿಯುತ್ತಿವೆ. ಹಲ್ಲುಗಳು ಪಳಪಳ ಹೊಳೆಯುತ್ತಿವೆ. ಜಗದ ಚಿಂತೆ ಮರೆತ ಸ್ವಚ್ಛಂದ ನಗು ಅದು.
ನಮ್ಮ ಮುಖಭಾವ ಕಂಡು ಫೋಟೊಗ್ರಾಫರ್ ಕೂಡಾ ಮುಗುಳ್ಗುತ್ತಿದ್ದ. ’ಚೆನ್ನಾಗಿ ತೆಗೆದಿರೀ’ ಎಂದು ಶಾಭಾಷ್ಗಿರಿ ಕೊಟ್ಟೆವು. ನಿಮ್ಮ ಗೆಳತಿಯೇ ಐಡಿಯಾ ಹೇಳಿದ್ದು ಎಂದು ಆತ ತರಲೆಯತ್ತ ಕೈ ಮಾಡಿ ತೋರಿಸಿದ. ಭಾರಿ ಐಡಿಯಾ ಕಣೆ ಎಂದು ಆಕೆಗೆ ಅಭಿನಂದನೆ ಹೇಳಿದೆವು. ನನಗೆ ಆ ಫೊಟೊ ಎಷ್ಟು ಇಷ್ಟವಾಯ್ತೆಂದರೆ, ಇದರ ಇನ್ನೊಂದು ಪ್ರತಿ ಮಾಡಿ, ಒಳ್ಳೇ ಕಟ್ಟು ಹಾಕಿ ಕೊಡಿ ಎಂದು ಹೇಳಿ ಬಂದೆ.
ಈಗ ನನ್ನ ಕೈಲಿರುವುದು ಆ ಫೋಟೊ. ಎಡಕ್ಕೆ ಕತ್ತು ವಾಲಿಸಿ ಸ್ವಚ್ಛಂದವಾಗಿ ಮುಗುಳ್ನಗುತ್ತಿರುವ ಫೋಟೊ. ಆ ಪಲ್ಲವಿ ಎಷ್ಟು ಖುಷಿಯಾಗಿದ್ದಳು. ಎಷ್ಟೊಂದು ಸಂತಸವಿತ್ತು. ಲಕ್ಷ್ಮೀನಾರಾಯಣಭಟ್ಟರು ಹೇಳುವಂತೆ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೆ?
ಮಂಕು ಕವಿದಾಗೆಲ್ಲ ಈ ಫೋಟೊ ನೋಡುತ್ತೇನೆ. ಮತ್ತೆ ಮತ್ತೆ ನೋಡುತ್ತ ನೆನಪಿಸಿಕೊಳ್ಳುತ್ತೇನೆ. ಮೌನವಾಗಿ ಪ್ರಶ್ನಿಸಿಕೊಳ್ಳುತ್ತೇನೆ: ’ಹೀಗೆ ಮುಕ್ತವಾಗಿ ನಗುವುದು ಮತ್ತೆ ನನಗೆ ಸಾಧ್ಯವಾದೀತೆ?’
ಉತ್ತರ ಸಿಗುವುದಿಲ್ಲ. ಒಂದು ವಿಷಾದದ ಮುಗುಳ್ನಗು ನಕ್ಕು, ಫೊಟೊವನ್ನು ಮತ್ತೆ ಗೂಡಿಗೆ ಸೇರಿಸುತ್ತೇನೆ.
- ಪಲ್ಲವಿ ಎಸ್.
Comments
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by kalpana
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by hamsanandi

In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by ranjith
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by kalpana
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by ಮನಹ್ಪಠಲ
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by savithasr
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by ASHOKKUMAR
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by savithasr
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by anil.ramesh
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by pallavi.dharwad
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by anil.ramesh
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by muralihr
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by dhanu.vijai
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by ಸಂಗನಗೌಡ
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by girish.rajanal
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
In reply to ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ... by anantshayan
ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...