ವಿಜ್ಞೇಶ್ವರನನ್ನು ಚಿತ್ರಿಸುವ ಕಲೆ

ವಿಜ್ಞೇಶ್ವರನನ್ನು ಚಿತ್ರಿಸುವ ಕಲೆ

Comments

ಬರಹ

ಸರಿಯಾಗಿ ಒಂದು ವರ್ಷದ ಹಿಂದೆ ಚಿತ್ರಕಲೆ, ಕಂಪ್ಯೂಟರ್ ಗ್ರಾಫಿಕ್ಸಿಗೆ ಸೂರೆ ಹೋಗಿ 'ಕಂಜ್ಯೂರರ್' ಎಂಬ ಹೆಸರಲ್ಲಿ [:http://conjurer.deviantart.com/|ಡೀವಿಯೆಂಟ್ ಆರ್ಟ್ ತಾಣದಲ್ಲಿ ಖಾತೆಯೊಂದನ್ನು ತೆರೆದಿದ್ದೆ]. ಆಗ ಪರಿಚಯವಾದವರು ಹಲವು ಚಿತ್ರಕಾರರು, ಕಲಾಕಾರರು, ಗ್ರಾಫಿಕ್ಸ್ ಪಂಡಿತರು. ನನ್ನ ಇದೆಲ್ಲದರ ತಿಳುವಳಿಕೆ ಎಷ್ಟರ ಮಟ್ಟಿಗೆ (ಕಳಪೆಯಾಗಿ) ಇರುವುದೆಂಬ ಪರಿಚಯ ಮಾಡಿಕೊಟ್ಟದ್ದು ಅದೇ ಸಮುದಾಯವೆ!

ಆಗೊಮ್ಮೆ ಮಲೇಶಿಯಾದ ಥಿನೇಶ್ವರಿ ಗೋವಿಂದಸಾಮಿ ಎಂಬುವರ ಪರಿಚಯವಾದಾಗ ಅವರ ಗ್ಯಾಲರಿ ನೋಡುತ್ತ ಹೊರಟಿದ್ದೆ. ಆಗ ಸಿಕ್ಕದ್ದು [:http://www.deviantart.com/deviation/10555864/|ಗಣೇಶನ ಈ ಗ್ರಾಫಿಕ್]. ಎಷ್ಟು ಸುಂದರವಾದ ಗ್ರಾಫಿಕ್ ಇದು ಎನ್ನುವುದನ್ನು ಒಂದು ವರ್ಷ ಕಾಲ ನನ್ನ ಡೆಸ್ಕ್ ಟಾಪಿನ ವಾಲ್ ಪೇಪರ್ ಆಗಿ ಉಳಿದದ್ದು ಎಂಬುದರಿಂದ ಗ್ರಹಿಸಬಹುದು. :)

ಸ್ವತಃ ಚಿತ್ರಕಲೆಯಲ್ಲಿ ಆಸಕ್ತನಾದ ನಾನೂ ಕೂಡ ಹಲವು ರೀತಿಯಲ್ಲಿ ವಿಜ್ಞೇಶ್ವರನನ್ನು ಬಿಡಿಸಲು ಪ್ರಯತ್ನಿಸಿದ್ದೇನೆ, ಆದರೆ ಕಂಪ್ಯೂಟರಿನಲ್ಲಿ ಇಷ್ಟರಮಟ್ಟಿಗೆ ಬಿಡಿಸುವ ಕಲೆ ಬಹುಶಃ [:http://trixinc.deviantart.com/|ಥಿನೇಶ್ವರಿಯಂತವರಿಗೆ] ಮಾತ್ರ ಒಲಿದದ್ದೇನೊ :)

ವಾಲ್ ಪೇಪರ್ ಪ್ರೇಮಿಗಳಿಗೆ ಸುಲಭವಾಗುವಂತೆ ಇಲ್ಲಿಯೂ ಅದರ ಪ್ರತಿ ಲಗತ್ತಿಸಿರುವೆ, ಬೇಕಾದರೆ ಡೌನ್ಲೋಡ್ ಮಾಡಿಕೊಳ್ಳಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet