ಕನ್ವರ್ ಲಾಲ್ ಟೋಪಿವಾಲ
ಎಸ್ಸೆಪ್ಪೆಮ್ ರೇಡಿಯೋ ನಲ್ಲಿ ’ಕನ್ವರ್ ಲಾಲ್ ಟೋಪಿವಾಲ’ ಎಂಬ ಶೀರ್ಶಿಕೆಯಡಿ ಹಾಸ್ಯಪ್ರಸಂಗಗಳನ್ನು ಹೇಳುತ್ತಿರುತ್ತಾರೆ. ಅವರು ನಟರ ಶೈಲಿಯನ್ನು ಅನುಕರಣೆ ಮಾಡಿರುವ ರೀತಿ ಅದ್ಭುತವಾಗಿದೆ. ಅದೇರೀತಿ ಶಂಕರ್ ನಾಗ್ ಧ್ವನಿಯಲ್ಲಿ ಹೇಳುವ ಕಿವಿಮಾತುಗಳು ಕೂಡ ಕೇಳಲು ತಮಾಶೆಯಾಗಿರುತ್ತವೆ. ’ಚಾಮರಾಜ ಪೇಟೆ ಚಾರ್ಲ್ಸ್’ ಕೂಡ ಚೆನ್ನಾಗಿ ವಿಡಂಬನೆ ಮಾಡುತ್ತಾರೆ.
ಇನ್ನು ನಮ್ಮ ಪರಿಚಯಸ್ಥರ ಮನೆಗೆ ವಾರಾಂತ್ಯ ಹೋಗಿದ್ದಾಗ ಅನ್ನಮಯ್ಯ ಹಾಡುಗಳನ್ನು ಕೇಳಿದೆ. ಸಖತ್ತಾಗಿವೆ. ಬಹುತೇಕ ಎಲ್ಲವೂ ತಿರುಪತಿ ತಿಮ್ಮಪ್ಪನ ಕುರಿತಾದವೇ. ಎಸ್ಪಿಬಿಯವರು ಹೈ ಪಿಚ್ ನಲ್ಲಿ ಹಾಡುಗಳನ್ನುಹೇಳಿ ಜೀವ ತುಂಬಿದ್ದಾರೆ. ಅದರಲ್ಲು ’ನಿಗಮ ನಿಗಮಾಂತ...’, ’ಗೋವಿಂದಾಶ್ರಿತ...’, ’ಅಂತರ್ಯಾಮಿ...’ ಇತ್ಯಾದಿ ಹಾಡುಗಳು ನನಗೆ ಬಹಳ ಇಷ್ಟವಾದವು.
ಹಾಗೆಯೇ ರಘು ದೀಕ್ಷಿತ್ ಹಾಡುಗಳ ಕಲೆಕ್ಷನ್ ಕೂಡ ಅಲ್ಲಿತ್ತು. ’ನಿನ್ನ ಪೂಜೆಗೆ ಬಂದೆ..’ ಬಿಟ್ಟರೆ ಬೇರೆಯವು ಸಪ್ಪೆ ಎನ್ನಿಸಿದವು.
Rating
Comments
ಉ: ಕನ್ವರ್ ಲಾಲ್ ಟೋಪಿವಾಲ