ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...

ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...

Comments

ಬರಹ

ಕೆಲವು ದಿನಗಳ ಹಿಂದಷ್ಟೇ 'ಜ್ಯೋತಿಷ್ಯ ವಿಜ್ಞಾನ ಅಲ್ಲ' ಎಂಬ ವಾದವನ್ನು ಹಲವಾರು ಮಂದಿ ಮಂಡಿಸಿದರು...
ಇದನ್ನು ವಿಜ್ಞಾನ ಎಂದು ನಾನಿಲ್ಲಿ ಮಂಡಿಸುವುದಿಲ್ಲ...
ಆದರೆ ನಾವೆಷ್ಟು ಇಬ್ಬಗೆಯಾ ನೀತಿ ಪಾಲಿಸುತ್ತೆವೆಂದು ನೋಡೋಣ...

ಉದಾ:
------------------------------------------------------------------------
ನಾನು ತಲೆ ನೋವೆಂದು ಡಾಕ್ಟರ ಹತ್ತಿರ ಹೋದೆ...
ಒಂದೆರಡು ಪ್ರಶ್ನೆ ಕೇಳಿ, ಏನೋ ಮಾತ್ರೆ ಬರೆದು ಕೊಟ್ಟರು...
ನಾನೆಂದೆ..."ಯಾವಾಗ ಸರಿ ಹೋಗತ್ತೆ ಡಾಕ್ಟರೇ?"
ಅವರೆಂದರು "ನಾಳೆ ಸರಿ ಹೋಗಿಲ್ಲ ಅಂದ್ರೆ ಮತ್ತೆ ಬನ್ನಿ"
ತಲೆ ನೋವು ಸರಿ ಹೋಗಲಿಲ್ಲ...ಮತ್ತೆ ಹೋದೆ...
ಬೇರೆ ಮಾತ್ರೆ ಕೊಟ್ಟರು...ಆದರೂ ತಲೆ ನೋವು ಸರಿ ಹೋಗದು..

ಮನಸಲ್ಲೇ ಬಯ್ದುಕೊಂಡು ಇನ್ನೊಂದು ಡಾಕ್ಟರ ಹತ್ತಿರ ಹೋದೆ...
ಅಲ್ಲೂ ಇದೆ ಗೋಳು...'ಬ್ರೈನ್ ಸ್ಕಾನ್' ಮಾಡ ಬೇಕಂತೆ, ಮಣ್ಣು ಮಸಿ ಇತ್ಯಾದಿ...
ಏನೆಲ್ಲಾ ಮಾಡಿದರೂ ನನ್ನ ತಲೆ ನೋವು ಸರಿ ಹೋಗಿಲ್ಲ...
------------------------------------------------------------------------
ಇಲ್ಲಿ ಗಮನಿಸ ಬೇಕಾದ ಅಂಶ ಇದು...
1. ವೈದ್ಯರೂ ಯಾವಾಗ ಗುಣ ಹೊಂದುವುದೆಂದು ನನಗೆ ಹೇಳಲಿಲ್ಲ
2. ಬೇರೆ ಬೇರೆ ಡಾಕ್ಟರುಗಳು ಕೊಟ್ಟ ಮಾತ್ರೆಗಳು/ ಮದ್ದುಗಳು ನನ್ನ ತಲೆ ನೋವು ಗುಣ ಪಡಿಸಲಿಲ್ಲ...
ಆದರೆ ಡಾಕ್ಟರು ಒಬ್ಬ ವಿಜ್ಞಾನಿಯಾಗೆ (medical science) ತೋರುತ್ತಾನೆ...ಯಾಕೆ?

ಉದಾ ೨:

"India Meteorogical Department" ಇದು ವೈಜ್ಞಾನಿಕ ಸಂಸ್ಥೆಯೋ ಅಲ್ಲವೋ?

ನಿತ್ಯ ಹವಾಮಾನ ವರದಿಯನ್ನು ಕೊಡುವ ಇದೂ ಹೆಚ್ಚೂ ಕಡಿಮೆ ಯಾವಗಲೂ ತಪ್ಪಿರುತ್ತದೆ...
ಆದರೂ Meteorogical Department ಒಂದು ವೈಜ್ಞಾನಿಕ ಸಂಸ್ಥೆ ಎಂದು ಹೆಚ್ಚು ಕಡಿಮೆ ಎಲ್ಲರೂ ಒಪ್ಪಿದಂತಿದೆ...
ಏಕೆ?
----------------------------------------------------------------------------------
ಮೇಲಿನ ಉದಾಹರನೆಗಳಲ್ಲಿ ಒಬ್ಬ ವೈದ್ಯನು ತನ್ನ ಹೊಟ್ಟೆ ಪಾಡಿಗೆ ಮದ್ದು ಕೊಡುವನೇ ಇಲ್ಲ ರೋಗಿಯನ್ನು ಗುಣ ಪಡಿಸಲೆಂದೇ?

ಜ್ಯೋತಿಶಿಯೊಬ್ಬನ prediction ತಪ್ಪಾದಲ್ಲಿ ಅದು ಢೊಂಗಿ ಆದರೆ ನನ್ನ ತಲೆ ನೋವು ಗುಣ ಪಡಿಸದ ವೈದ್ಯ ಏನು?

--ಶ್ರೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet