ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲಿ ಕೇಳಿದ್ದಕ್ಕೆಲ್ಲ ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದರು. ಅದೂ ಹರಕು ಮುರಕು ಇಂಗ್ಲೀಷು :-) ಯಾಕೆ ಹೀಗೇಂತ ಯೋಚಿಸಿದೆ. ಒಂದು ವಾರದ ಹಿಂದೆ ಯಾರೋ(ಮಹೇಶ?) ಬರೆದಿದ್ದ ಬರಹ ನೆನಪಾಯ್ತು. ಹುಡುಗಿಯರು ಯಾಕೋ ಕನ್ನಡ ಗೊತ್ತಿದ್ದರೂ ಮಾತಾಡುವುದಿಲ್ಲ ಅಂತ ಬರೆದಿದ್ರು. ಆದ್ರೆ, ಇಲ್ಲಿ ವಯಸ್ಸಾದ ಹಿರಿಯರು ಕನ್ನಡ ಗೊತ್ತಿದ್ದರೂ ಮಾತಾಡುತ್ತಾ ಇಲ್ಲ, ಇದಕ್ಕೇನಂತೀರ? "False prestige" ಅನ್ನಬೇಕೋ, ಅಥವ, ಅವರು ಇಂಗ್ಲೀಷು ಕಲಿಯಬೇಕೆಂದು ಪಣತೊಟ್ಟು ಅವಕಾಶ ಸಿಕ್ಕಾಗಲೆಲ್ಲ ಅದರಲ್ಲಿ ಮಾತಾಡುತ್ತಿದ್ದಾರೋ ತಿಳಿಯಲಿಲ್ಲ. ಆದ್ರೆ, ಹುಟ್ಟುವ ಕೂಸಿನ ಜೊತೆಯಾದರೂ ಕನ್ನಡ ಮಾತಾಡಿದರೆ ಒಳಿತು ಎನ್ನಿಸಿತು. ಇಲ್ದಿದ್ರೆ, ಪಾಪ, ಮಗಳು-ಅಳಿಯ ಅಷ್ಟೆಲ್ಲ ದುಡ್ಡು ಖರ್ಚು ಮಾಡಿ ತಮಗೆ traditional Indian ಬಾಣಂತನ ಬೇಕೂಂತ ತಮ್ಮ ತಾಯಿಯನ್ನು ಕರೆಸಿಕೊಂಡಿದ್ದಾರೆ. ಆ ತಾಯಿ ನೋಡಿದ್ರೆ ಭಾಷೆಯಿಂದ ಹಿಡಿದು ಸಂಪ್ರದಾಯದವರೆಗೆ ಇಲ್ಲಿ Americanise ಆಗಿ ಕೂತ್ರೆ, ಈ ಬಡಪಾಯಿಗಳು ಏನು ಮಾಡ್ಬೇಕು ಅಂತೀನಿ? :-D
Comments
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
In reply to ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ! by srivathsajoshi
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
In reply to ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ! by kalpana
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
In reply to ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ! by srivathsajoshi
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
In reply to ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ! by srivathsajoshi
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
In reply to ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ! by kannadakanda
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!