ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
ಗೆಳೆಯರೇ ಈವತ್ತು ಹಿಂದಿ ಹೇರಿಕೆ ವಿರೋದಿ ದಿನ - ಸರಕಾರ ಹಿಂದಿ ಹೇರಿಕೆಗಾಗಿ ಅನೇಕ ಕೋಟಿ ರುಪಾಯಿಗಳನ್ನು ಮೀಸಲಿಡುತ್ತದೆ. ನಾವು ಕಷ್ಟ ಪಟ್ಟು ಸಂಪಾದಿಸಿ ತೆರಿಗೆಯಂತೆ ಕಟ್ಟುತ್ತಿರುವ ಅದೆಷ್ಟೋ ಕೋಟಿ ರೂಪಾಯಿಗಳು ಹಿಂದಿ ಹೇರಿಕೆಗಾಗಿ ಬಳಸಲ್ಪಡುತ್ತದೆ. ಅಲ್ಲ ಹೇಳಿ ಕೇಳಿ ಹಿಂದಿ ಅಬ್ಬಬ್ಬ ಅಂದ್ರೆ ೧೦೦ - ೧೫೦ ವರ್ಷದ ಹಿಂದಿನ ಭಾಷೆ. ಯಾಕೆ ಸ್ವಾತಂತ್ರದ ಮುಂಚೆ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಪ್ರಗತಿ ಸಾದಿಸಿರಲಿಲ್ಲವೇ. "ಅನೇಕದಲ್ಲಿ / ವೈವಿಧ್ಯತೆಯಲ್ಲಿ ಏಕತೆ" ಎನ್ನುವದೇ ನಮ್ಮ ದೊಡ್ಡ ಹೆಗ್ಗಳಿಕೆ. ಹಿಂದಿ ಅನ್ನೋದು ಬೇರೆ ಭಾಷೆ ಜೊತೆ "ಊಟದಲ್ಲಿ ಉಪ್ಪಿನಕಾಯಿ" ತರ ಇದ್ರೆ ಚೆನ್ನ. ಅದು ಬಿಟ್ಟು ಬರಿ ಹಿಂದಿಮಯ ಆದ್ರೆ ಅದು ಊಟದ ತುಂಬ ಉಪ್ಪಿನಕಾಯಿ ಆಗಿ ತನ್ನ ರುಚಿ ಬೆಲೆಯನ್ನು ಕಳೆದುಕೊಂಡು ಬಿಡುತ್ತೆ ಅಷ್ಟೆ. ಕೊನೆಗೆ ನೀತಿ ಇಷ್ಟೇ ನಮಗೆ ಬೇಕಿಲ್ಲದ ಹಿಂದಿ ನಮಗೆ ಬೇಡ. ಹಿಂದ್ಯಿಂದ ರಾಷ್ಟ್ರೀಯತೆ, ಭಾವೈಕ್ಯತೆ ಸಾದಿಸುತ್ತೇವೆ ಅನ್ನೋದು ಶುದ್ದ ಸುಳ್ಳು.
ಏನಂತಿರ ಗೆಳೆಯರೇ ? . ನಾವೆಲ್ಲ ಹಿಂದಿ ಹೇರಿಕೆಯನ್ನ ಬಲವಾಗಿ ವಿರೋದಿಸೋಣ.
- ಕರುಣಾ ಬಾ ಶಂ .
Comments
ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ