ಅನಾಮಿಕೆಯ ಪುರಾಣ
ಬರಹ
ಈ ಹಿಂದೆ ಶಿವಕುಮಾರರವರು ಮಧ್ಯಮ ಬೆರಳಿನ ಬಗ್ಗೆ ಬರೆದಿದ್ದರು. ನನಗೂ ಸಂಸ್ಕೃತದಲ್ಲಿ ಅನಾಮಿಕಾ (ಉಂಗುರ ಬೆರಳಿನ) ಬಗ್ಗೆ ತಿಳಿಸಬೇಕೆನ್ನಿಸಿದೆ.
ಸಂಸ್ಕೃತದಲ್ಲಿ
ಅಂಗುಷ್ಠ=ಹೆಬ್ಬೆರಳು
ತರ್ಜನೀ=ತೋಱುಬೆರಳು (ಕೆರೆಯುವ ಬೆರಳು. ಸಾಮಾನ್ಯವಾಗಿ ಈ ಬೆರಳಿನಿಂದಲೇ ಕೆರೆಯುವುದು).
ಮಧ್ಯಮಾ=ನಡುವಿನ ಬೆರಳು
ಅನಾಮಿಕಾ=ಹೆಸರಿಲ್ಲದವಳು
ಕನಿಷ್ಠಿಕಾ=ಕಿಱುಬೆರಳು.
ಕಾಳಿದಾಸನ ಕಾವ್ಯವೈಶಿಷ್ಠ್ಯ ಹೇೞುವ ಒಂದು ಚಾಟುಪದ್ಯವೊಂದಿದೆ.
ಪುರಾ ಕವೀನಾಂ ಗಣನಾಪ್ರಸಂಗೇ ಕನಿಷ್ಠಿಕಾಧಿಷ್ಟಿತಕಾಲಿದಾಸಾ|
ಅದ್ಯಾಪಿ ತತ್ತುಲ್ಲ್ಯ ಕವೇರಭಾವಾದನಾಮಿಕಾ ಸಾರ್ಥವತೀ ಬಭೂವ||
ಅರ್ಥ: ಹಿಂದೆ ಕವಿಗಳನ್ನು ಲೆಕ್ಕ ಹಾಕುವಾಗ ಮೊದಲಿಗೆ ಕಿಱುಬೆರಳಿನಿಂದ ಪ್ರಾರಂಭಿಸಿದಾಗ ಅದು ಕಾಳಿದಾಸನ ಲೆಕ್ಕಕ್ಕೆ ಸೇರಿತು. ಇಂದಿಗೂ ಅವನಂಥ ಕವಿಗಳು ಸಿಗದಿರುವುದಱಿಂದ ತಱುವಾಯದ ಅನಾಮಿಕೆ (ಉಂಗುರಬೆರಳು) ಹೆಸರಿಗೆ ತಕ್ಕಂತೆ ಹೆಸರಿಲ್ಲದ್ದೇ ಆಯ್ತು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಅನಾಮಿಕೆಯ ಪುರಾಣ
ಉ: ಅನಾಮಿಕೆಯ ಪುರಾಣ
ಉ: ಅನಾಮಿಕೆಯ ಪುರಾಣ
In reply to ಉ: ಅನಾಮಿಕೆಯ ಪುರಾಣ by kannadakanda
ಉ: ಅನಾಮಿಕೆಯ ಪುರಾಣ
ಉ: ಅನಾಮಿಕೆಯ ಪುರಾಣ
In reply to ಉ: ಅನಾಮಿಕೆಯ ಪುರಾಣ by roshan_netla
ಉ: ಅನಾಮಿಕೆಯ ಪುರಾಣ