ರೋಗಿಯನ್ನು ನೋಡಲು ಹೋಗುವವರು
ಆಸ್ಪತ್ರೆ ಸೇರಿದವರನ್ನು ವಿಚಾರಿಸಲು ಹೋಗುವ ರೋಗಿ(ಯ ಬಂಧುಮಿತ್ರರು)ಗಳು-
ಮಾಲಿಗಳು :
ಕೆಲವರು ‘ಮಾಲ್’ಗೆ ಹೋಗುವುದಕ್ಕೂ ಆಸ್ಪತ್ರೆಗೆ ರೋಗಿಯನ್ನು ನೋಡಲು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲ. ಅಲ್ಲಿರುವ ಎಲ್ಲಾ ವಸ್ತುಗಳನ್ನು ನೋಡಿ, ಮುಟ್ಟಿ, ತೆಗೆದು, ವಿಚಾರಿಸಿ.. ಇಡುವರು.
ಸೀರಿಯಲ್ ಲವರ್ಸ್ :
ರೂಮಲ್ಲಿ ಟಿ.ವಿ.ಯಿದ್ದರೆ ತಮಗಿಷ್ಟದ ಸೀರಿಯಲ್ ಹಾಕಿ, ಅದರ ಬಗ್ಗೆ ರೋಗಿಯ ತಲೆ ಕೊರೆಯಲು ಸುರುಮಾಡುವರು.
ಆಕ್ಟರ್ಸ್ :
ಸಿನಿಮಾ ನಟ,ನಟಿಯರೇ ಬೆರಗಾಗುವಂತೆ ದುಃಖವನ್ನು ಪ್ರದರ್ಶಿಸುವರು. ಬ್ಯಾಕ್ಗ್ರೌಂಡ್ ಮ್ಯೂಸಿಕ್ ಒಂದು ಇಲ್ಲ ಅಷ್ಟೆ.
ದೊಡ್ಡ ಡಾಕ್ಟ್ರು :
ಡಾಕ್ಟ್ರಿಗಿಂತಲೂ ಜಾಸ್ತಿ ಗೊತ್ತಿದ್ದವರು. ಇವರಿಗೆ ಗೊತ್ತಿಲ್ಲದ ವಿಷಯವೇ ಇರಲಿಕ್ಕಿಲ್ಲ!
ಕಮೆಂಟೇಟರ್ಸ್ :
ಮೊಬೈಲಲ್ಲಿ ಮಾತನಾಡುತ್ತಾ ಬರುವರು, ರೋಗಿಯ ಸ್ಥಿತಿ-ಗತಿ ಬಗ್ಗೆ ಮೊಬೈಲಲ್ಲಿ ತಾಜಾ ವರದಿ ತಮ್ಮವರಿಗೆ ತಿಳಿಸುತ್ತಾ, ನಡುವೆ ಕಾಟಾಚಾರಕ್ಕೆ ರೋಗಿಯನ್ನು ವಿಚಾರಿಸುವರು.
ಎಫ್.ಎಮ್.ಹೈದರು :
ದೇವರಾಣೆಗೂ ಇವರು ರೋಗಿಯನ್ನು ವಿಚಾರಿಸಲು ಬಂದವರಲ್ಲ. ಅಪ್ಪ-ಅಮ್ಮನ
ಒತ್ತಾಯಕ್ಕೆ ಬಂದವರು. ಕಿವಿಗೆ ಮೊಬೈಲ್ ವೈರ್ ಸಿಕ್ಕಿಸಿ, ಹಾಡುಗಳನ್ನು ಗುನುಗುತ್ತಾ ಅವರದೇ ಲೋಕದಲ್ಲಿ ಮುಳುಗಿರುವವರು.
ಪಿಕ್ನಿಕಿಗಳು :
ರೋಗಿಯ ಆಫೀಸಿನಲ್ಲಿ/ಕಂಪನಿಯಲ್ಲಿ ಕೆಲಸ ಮಾಡುವವರು. ಅರ್ಧ ದಿನ ರಜೆ ಸಿಕ್ಕಿದ
ಖುಷಿಯಲ್ಲಿ ಭೇಟಿ ಮಾಡಿದ ಶಾಸ್ತ್ರ ಮಾಡಿ, ನರ್ಸ್ಗಳ ಬಗ್ಗೆ ೨-೩ ಕೊಳಕು ಜೋಕುಗಳನ್ನು ಹೇಳಿ, ರಜೆಯ ಲಾಭ ಪಡೆಯಲು ಓಡುವವರು.
ಜಗದೋದ್ಧಾರಕರು :
‘ಗಾಬರಿಯಾಗುವುದು ಬೇಡ. ನಿಮಗಾಗಿ ದೇವರಲ್ಲಿ ಪ್ರಾರ್ಥಿಸುವೆನು. ಆ ದಯಾಮಯನಾದ ದೇವನು ರಕ್ಷಿಸುವನು.. .. .. ..’ ಪ್ರವಚನ ಸಾಗುವಾಗ,
ಆಸ್ಪತ್ರೆ ಡಾಕ್ಟ್ರ ಮೇಲೆ, ಅವರ ಟ್ರೀಟ್ಮೆಂಟ್ ಮೇಲೆ ರೋಗಿಗೆ ಸಂಶಯ ಬರಲು ಸುರುವಾಗುವುದು.
' ದಯಾಮಯನಾದ ದೇವರು' ಈ ಎಲ್ಲರ ಕಾಟದಿಂದ ರೋಗಿಯನ್ನು ರಕ್ಷಿಸಲಿ.
-ಗಣೇಶ.
Comments
ಉ: ರೋಗಿಯನ್ನು ನೋಡಲು ಹೋಗುವವರು
ಉ: ರೋಗಿಯನ್ನು ನೋಡಲು ಹೋಗುವವರು
In reply to ಉ: ರೋಗಿಯನ್ನು ನೋಡಲು ಹೋಗುವವರು by anil.ramesh
ಉ: ರೋಗಿಯನ್ನು ನೋಡಲು ಹೋಗುವವರು