ವಂದಿಪೆನು ರೈತ ನಿನ್ನ ಪಾದಗಳ ನಾ ...
ನಮಗನ್ನ ನೀಡಿ ತಾ ಗಂಜಿ ಕುಡಿವನು
ಒಪ್ಪತ್ತು ಗಂಜಿಗೆ ದಿನವೆಲ್ಲಾ ದುಡಿವನು;
ಆರು ತುಂಬಿಹುದು ಮಕ್ಕಳಿಬ್ಬರಿಗೂ
ಹಣ್ಣ ಸವಿದಿಲ್ಲ, ಶಾಲೆ ಕಂಡಿಲ್ಲ;
ಹಗಲಲ್ಲಿ ಕೆಲಸ ರಾತ್ರಿಯಲಿ ಚಿಂತೆ
ಹೆಂಡತಿಯೂ ಸೋತಿಹಳು ಅವನಂತೆ;
ಸಂಕ್ರಾಂತಿ-ಯುಗಾದಿಗೊಮ್ಮೆ ಹಬ್ಬ
ಆಗ ಅಕ್ಕಿಪಾಯಸ ಸಿಕ್ಕರೆ ಅಬ್ಬಬ್ಬ !
ಬಡತನವೇ ಅವನಿಗೆ ಪಿತ್ರಾರ್ಜಿತ ಆಸ್ತಿ
ಬಡತನವೇ ಮಕ್ಕಳಿಗೂ ಕಟ್ಟಿಟ್ಟ ಬುತ್ತಿ;
ನೀವಿಂತು ಬಳಲುತಿರೆ ಪೇಟೆಯೊಳು ಶೋಕಿ
ಸರ್ಕಾರವು ಎಂದೂ ನಗರಿಗಳ ಪೈಕಿ;
ನೀನೀಡಿದನ್ನ ಸೇವಿಸುವ ಮುನ್ನ
ವಂದಿಪೆನು ರೈತ ನಿನ್ನ ಪಾದಗಳ ನಾ
ಅನುಪ್ ಮಲೆನಾಡು
[೭ ಸೆಪ್ಟೆಂಬರ್ ೨೦೦೮]
Rating
Comments
ಉ: ವಂದಿಪೆನು ರೈತ ನಿನ್ನ ಪಾದಗಳ ನಾ ...
In reply to ಉ: ವಂದಿಪೆನು ರೈತ ನಿನ್ನ ಪಾದಗಳ ನಾ ... by Jayalaxmi.Patil
ಉ: ವಂದಿಪೆನು ರೈತ ನಿನ್ನ ಪಾದಗಳ ನಾ ...
ಉ: ವಂದಿಪೆನು ರೈತ ನಿನ್ನ ಪಾದಗಳ ನಾ ...
ಉ: ವಂದಿಪೆನು ರೈತ ನಿನ್ನ ಪಾದಗಳ ನಾ ...
ಉ: ವಂದಿಪೆನು ರೈತ ನಿನ್ನ ಪಾದಗಳ ನಾ ...
ಉ: ವಂದಿಪೆನು ರೈತ ನಿನ್ನ ಪಾದಗಳ ನಾ ...