ಬ್ರಹ್ಮಾಂಡ ಸೃಷ್ಠಿ!!
ಬ್ರಹ್ಮಾಂಡ ಸೃಷ್ಠಿ ಹೇಗಾಯಿತು ಎಂಬ ಒಗಟನ್ನು ನಮ್ಮಂತಹ ಸೈಂಟಿಸ್ಟ್ಗಳನ್ನು ಬಿಟ್ಟು ಮಾಡಿದರೆ ನೀರಲ್ಲಿ ಹೋಮ ಮಾಡಿದಂತೆ. ಆದರೆ ನಾವೂ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ.
೫೦ ಬಿಲಿಯನ್ ಡಾಲರುಗಳ ಯೋಜನೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಅದರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆನು:-
ನಮ್ಮ ಪುರಾಣದಲ್ಲಿ ಬ್ರಹ್ಮಾಂಡ ಸೃಷ್ಠಿ ಹೇಗಾಯಿತೆಂದು ವಿವರವಿದೆ. ಆದರೆ ಈಗಿನವರು ಅದನ್ನು ವೈಜ್ಞಾನಿಕವಾಗಿ ಪ್ರೂವ್ ಮಾಡಿ ತೋರಿಸಿದರೇ ನಂಬುವುದು.
ಅದಕ್ಕಾಗಿ-
ಬೆಂಗಳೂರಿಂದ ಪಾಕಿಸ್ತಾನದವರೆಗೆ ೧೦೦ ಅಡಿ ಆಳದಲ್ಲಿ ಸುರಂಗಮಾರ್ಗ ಕೊರೆಯಲಾಗುವುದು. (ಪಾಕಿಸ್ತಾನ ಕಡೆಯಿಂದ ಈಗಾಗಲೇ ಸುರಂಗ ಕೊರೆಯಲು ಸುರುಮಾಡಿಯಾಗಿದೆ. ಅದರ ಮೂಲಕ ಪ್ರಾಯೋಗಿಕವಾಗಿ ಭಯೋತ್ಪಾದಕರು ಒಂದೆರಡು ಬಾರಿ ಬಂದು ಹೋಗಿರುವರು :) )
ನಮ್ಮ ಯೋಜನೆಯಲ್ಲಿ ಆಸಕ್ತರಾದ ಪುರಾಣ,ಸಂಸ್ಕೃತಗಳಲ್ಲಿ ಪರಿಣತರನ್ನು, ಪವಾಡ ಪುರುಷರನ್ನು,ಗ್ರಂಥಗಳೊಂದಿಗೆ ಅಲ್ಲಿ ಸೇರಿಸಲಾಗುವುದು. ವಿವರವನ್ನು ಕಲೆಹಾಕಲು ಕಂಪ್ಯೂಟರ್ ಕಲಿತವರನ್ನೂ,ಕಲಿಯುವವರನ್ನೂ ಅಲ್ಲಿ ಸೇರಿಸಲಾಗುವುದು. ಇನ್ನೊಂದು
ಬ್ರಹ್ಮಾಂಡ ಸೃಷ್ಠಿಸಿಯೇ ಅವರು ಹೊರಬರುವುದು!!
ಇದನ್ನೆಲ್ಲಾ ಭೂಮಿ ಮೇಲೆ ಮಾಡಬಹುದಲ್ವಾ? ಸುರಂಗ ಮಾರ್ಗ ಯಾಕೆ? ಅಂತ ತಾನೆ ನಿಮ್ಮ ಪ್ರಶ್ನೆ?
-ಈ ಸಂಸ್ಕೃತ ದ್ವೇಷಿಗಳ,ವಿರೋಧಿಗಳ ಕಾಟ ತಪ್ಪಿಸಲು! ಸುರಂಗ ಮಾರ್ಗಕ್ಕೆ ಅವರಿಗೆ ಪ್ರವೇಶವಿಲ್ಲ.
-ಏನಾದರೂ ಗಿಮಿಕ್ ಮಾಡಿದರೆ ಅದಕ್ಕೆ ಜಾಸ್ತಿ ಪ್ರಚಾರ ಸಿಗುವುದು. ಹಣ ಹರಿದು ಬರುವುದು.
-ಸುರಂಗ ನಿರ್ಮಾಣವನ್ನು ಸಹ ನಮ್ಮ ರಸ್ತೆ ನಿರ್ಮಾಣ ಮಾಡಿದ ಕಂಟ್ರಾಕ್ಟರ್ಗಳಿಗೇ
ಗುತ್ತಿಗೆ ಕೊಡಲಾಗುವುದು. ಇದರಿಂದ ೧೦೦ ವರ್ಷದ ಯೋಜನೆ ೨೦೦ ವರ್ಷಕ್ಕೆ ಹೋಗುವುದು. ೫೦ ಬಿಲಿಯನ್ ಡಾಲರ್ ಯೋಜನೆ ೧೦೦ ಬಿಲಿಯನ್ಗೆ ಏರುವುದು.
ಹಣದ ಹೊಳೆಯೇ ಹರಿಯುವುದು.
ನಿಮಗೂ ಯೋಜನೆಯಲ್ಲಿ ಆಸಕ್ತಿ ಇದ್ದರೆ, ಮೇಲಿನ ಯಾವುದೇ ವಿಷಯದಲ್ಲಿ ಪರಿಣತರಾಗಿದ್ದರೆ, ಸಂಪರ್ಕಿಸಬೇಕಾದ ವಿಳಾಸ.. ..
-ಗಣೇಶ.
Comments
ಉ: ಬ್ರಹ್ಮಾಂಡ ಸೃಷ್ಠಿ!!
In reply to ಉ: ಬ್ರಹ್ಮಾಂಡ ಸೃಷ್ಠಿ!! by anil.ramesh
ಉ: ಬ್ರಹ್ಮಾಂಡ ಸೃಷ್ಠಿ!!
In reply to ಉ: ಬ್ರಹ್ಮಾಂಡ ಸೃಷ್ಠಿ!! by ಗಣೇಶ
ಉ: ಬ್ರಹ್ಮಾಂಡ ಸೃಷ್ಠಿ!!
ಉ: ಬ್ರಹ್ಮಾಂಡ ಸೃಷ್ಠಿ!!
In reply to ಉ: ಬ್ರಹ್ಮಾಂಡ ಸೃಷ್ಠಿ!! by savithru
ಉ: ಬ್ರಹ್ಮಾಂಡ ಸೃಷ್ಠಿ!!