ನೊಬೆಲ್ ಸಮತಿಯು ಭಾರತೀಯರನ್ನು ಪುರಸ್ಕರಿಸಿರುವುದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು!

ನೊಬೆಲ್ ಸಮತಿಯು ಭಾರತೀಯರನ್ನು ಪುರಸ್ಕರಿಸಿರುವುದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು!

ಬ್ರಹ್ಮಾಂಡ ರಹಸ್ಯವನ್ನು ಅರಿಯಲು ವಿಜ್ಞಾನಿಗಳು ಫ್ರಾನ್ಸ್-ಸ್ವಿಸ್ ಗಡಿಯಲ್ಲಿ ನ ಭೂತೋ...ಎಂಬಂತಹ ಪ್ರಯೋಗವನ್ನು ನಡೆಸುತ್ತಿರುವುದು ನಮಗೆಲ್ಲ ತಿಳಿದಿದೆ. ಪ್ರಸ್ತುತ ಬಿಸಿ ಬಿಸಿ ಚರ್ಚೆಯ ವಿಷಯವೂ ಆಗಿದೆ. ಇಂತಹ ಒಂದು ಪ್ರಯೋಗ ಇಂದು ನಡೆಯುವುದಕ್ಕೆ ಕಾರಣ, ಪಶ್ಚಿಮ ಬಂಗಾಳದ ಭೌತಶಾಸ್ತ್ರಜ್ಞ ಹಾಗೂ ಗಣಿತ ಶಾಸ್ತ್ರಜ್ಞರಾಗಿದ್ದ ಶ್ರೀಸತ್ಯೇಂದ್ರನಾಥ್ ಬೋಸ್ ಅವರೂ ಪ್ರಮುಖ ಕಾರಣ ಎಂದು ಜಗತ್ತು ತಿಳಿದಿದೆ.  ಬೋಸ್ ಅವರ ಈ ಸಂಶೋಧನೆಗಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಬರಬೇಕಿತ್ತು. ಆದರೆ ಅವರಿಗೆ ಬರಲೇ ಇಲ್ಲ. ಅದಕ್ಕೆ ಪ್ರಮುಖ ಕಾರಣ ಅವರು ಭಾರತೀಯರು ಎಂಬುದು. ಬಹುಶಃ ಬೋಸ್ ಅವರ ಕಾಣಿಕೆಯ ಬಗ್ಗೆ ಪೂರ್ಣ ತಿಳಿದಿದ್ದ ಐನ್‍ಸ್ಟೀನ್ ಅವರಾದರೂ ನೊಬೆಲ್ ಸಮಿತಿಗೆ ಬೋಸ್ ಅವರ ಹೆಸರನ್ನು ಶಿಫಾರಸನ್ನು ಮಾಡಬಹುದಿತ್ತು ಎಂದು ನನ್ನ ಅನಿಸಿಕೆ.

ನೊಬೆಲ್ ಸಮಿತಿ ಸದಾ ಕಾಲಕ್ಕೂ ಭಾರತೀಯರನ್ನು ಕನಿಷ್ಟವಾಗಿ ಕಂಡಿದೆ. ನಮಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬರಬೇಕಿತ್ತು. ಅದನ್ನು ಪ್ರಜ್ಞಾಪೂರ್ವಕವಾಗಿ ತಡೆಹಿಡಿಯುತ್ತಲೇ ಬಂದಿತು. ಭಾರತದಿಂದ ನೊಬೆಲ್ ಪ್ರಶಸ್ತಿಗೆ ಅತ್ಯಂತ ಹೆಚ್ಚಿನ ನಾಮ ನಿರ್ದೇಶಿತರಾದವರು ಪಂಡಿತ್ ನೆಹರು ಅವರು. ಅವರಿಗೂ ಪ್ರಶಸ್ತಿ ಬರಲಿಲ್ಲ. ಟೆಟ್ರಾಸೈಕ್ಲಿನ್ ನಂತಹ ಪ್ರತಿಜೈವಿಕಗಳನ್ನು ನೀಡಿದ ಯಲ್ಲಾಪ್ರಗಡ ಸುಬ್ಬರಾವ್ ಯಾರ ಕಣ್ಣಿಗೂ ಬೀಳಲಿಲ್ಲ. ಬೆಳಗಿಕಿಗಿಂತ ವೇಗವಾದ ಕಣಗಳಿವೆ ಎಂದಿರುವ ಇಸಿಜಿ ಸುದರ್ಶನ್ ಅವರಿಗೆ, ಅವರ ಜೀವಮಾನ ಕಾಲದಲ್ಲಿ ನೊಬೆಲ್ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆ ನಮ್ಮದಾಗಿದೆ. ನೋಡೋಣ....

Rating
No votes yet

Comments