ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ

ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ

ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ಗಲಾಟೆ ನಡೀತಾ ಇದೆ.... ಹೌದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಲ್ಲಿ ದಾಳಿ ನಡೆಯುತ್ತಿತ್ತು. ಸುವರ್ಣ ಚಾನೆಲ್ ನವರು ಕ್ಷಮೆ ಕೇಳಬೇಕು ಅಂತ ಬಂದಿದ್ದವರು ಒತ್ತಾಯಿಸ್ತಾ ಇದ್ರು.

ಆದದ್ದು ಇಷ್ಟೇ, ಕಳೆದ ವಾರ ನಮ್ಮ ಚಾನೆಲ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಸಂದರ್ಶನವೊಂದು ಪ್ರಸಾರವಾಗಿತ್ತು. ಆ ಕಾರ್ಯಕ್ರಮಕ್ಕೆ ಸಂಭಂದಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನುವ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಆಕ್ಷೇಪ ಎತ್ತಿದ್ದರು. ಪ್ರಮೋದ್ ಮುತಾಲಿಕ್ ಹೇಳಿದ್ದು ಅವರ ವೈಯುಕ್ತಿಕ ಅಭಿಪ್ರಾಯ, ಅದಕ್ಕೂ ನಮ್ಮ ಚಾನೆಲ್ ನ ನಿಲುವಿಗೂ ಯಾವುದೇ ಸಂಬಂಧವಿಲ್ಲ ಅಂತ ನಾವು ಎಷ್ಟೇ ಹೇಳಿದರು ಅದನ್ನು ಕೇಳುವ ತಾಳ್ಮೆ ಅವರಲ್ಲಿರಲಿಲ್ಲ. ಅವರು ಮಾತನಾಡುತ್ತಿದ್ದ ರೀತಿ ನೋಡಿದರೆ, ಅನುಚಿತವಾಗಿ ವರ್ತಿಸಲೆಂದೇ ಬಂದವರಂತಿತ್ತು. ಮುತಾಲಿಕ್ ವಾದಗಳನ್ನು ತಳ್ಳಿ ಹಾಕುತ್ತೀರಾ ? ನಿಮ್ಮ ಸ್ಟ್ಯಾಂಡ್ ಬಗ್ಗೆ ಹೇಳ್ತೀರಾ ? ಹಾಗಾದ್ರೆ, ಅದಕ್ಕೂ ನಾವು ಅವಕಾಶ ಕೊಡುತ್ತೇವೆ. ಅರ್ಧ ಗಂಟೆಗಳ ಕಾಲ ನಿಮಗೆ ಅವಕಾಶ ಕೊಡುತ್ತೇವೆ, ಮಾತನಾಡಿ ಅಂದ್ರೆ ಅದನ್ನೂ ಅವರು ಕೇಳಲಿಲ್ಲ. ಅನುಚಿತವಾಗಿ ವರ್ತಿಸಿದರು, ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ವಿಡಿಯೋ ಚಿತ್ರಣ ತೆಗೆದರು, ಸೆಲ್ ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ಪೊಲೀಸರು ಮಧ್ಯ ಪ್ರವೇಶಿಸಿ ಹೆಚ್ಚಿನ ಅನಾಹುತವನ್ನು ತಡೆದರು. ಈಗ ಆಫೀಸಿನ ಮುಂದೆ ಪೋಲಿಸ್ ರು ಇದ್ದಾರೆ. ವಾಹಿನಿಯು ಮುಲಕ ತಮ್ಮ ವಾದ ಮಂಡಿಸಲು ಅವಕಾಶ ನೀಡಿದ ಬಳಿಕವು ನಡೆಸಿದ ಇವರ ದುರ್ನಡತೆಯನ್ನು ಏನೆನ್ನಬೇಕು.

ಇಂತಹವರಿಗೆಲ್ಲ ಬುದ್ಧಿ ಬರೋದು ಯಾವಾಗ ?

Rating
No votes yet

Comments