B-A-D ಹಾಗೂ ರಾಜಕಾರಣ

B-A-D ಹಾಗೂ ರಾಜಕಾರಣ

ದೆಹಲಿಯಲ್ಲಿ ಮೊನ್ನೆ ಬಾಂಬ್ ಬ್ಲಾಸ್ಟ್ ಆಗಿರೋದು ನಮ್ಮೆಲ್ಲರಿಗೂ ಗೊತ್ತೇ ಇದೆ.... ಆದರೆ ನನಗ್ಯಾಕೋ ಕೆಲವರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅಂತ ಅನಿಸ್ತಿದೆ...

೧. ಬೆಂಗಳೂರಿನಲ್ಲಿ ಸ್ಫೋಟವಾದಾಗ ಮಾನ್ಯ(?) ಕೇಂದ್ರ ಗೃಹಮಂತ್ರಿಯವರು ಒಂದು ಹೇಳಿಕೆ ಕೊಟ್ಟಿದ್ದರು : "ಇದರಬಗ್ಗೆ ನಾವು ಕರ್ನಾಟಕ ಸರ್ಕಾರಕ್ಕೆ ಮೊದಲೇ ಸೂಚನೆ ನೀಡಿದ್ದೆವು, ಆದರೆ ಕರ್ನಾಟಕ ಸರ್ಕಾರ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು".
=> ಕರ್ನಾಟಕ ಸರ್ಕಾರ ಅದನ್ನು ನಿರ್ಲಕ್ಷಿಸಿದ್ದರೂ ಕೇಂದ್ರ ಸರ್ಕಾರದ ಜವಾಬ್ದಾರಿ ಏನೂ ಇಲ್ಲವೇ? ಬರೀ ಮಾಹಿತಿ ನೀಡುವುದು ಕೇಂದ್ರ ಸರ್ಕಾರದ ಕೆಲಸವೇ? ಆದ ಅನಹುತಕ್ಕೆ ಯಾರು ಹೊಣೆ?

೨. ಈಗ ದೆಹಲಿಯಲ್ಲಿ ಆದ ಸ್ಫೋಟ, ಮಾನ್ಯ(?) ಗೃಹಮಂತ್ರಿಯವರ ಗುಪ್ತಚರ ಇಲಾಖೆಗೆ ಮುಂಚೆಯೇ ಗೊತ್ತಾಗಿರಲಿಲ್ಲವೇ? ಅಥವಾ ಕೇಂದ್ರ ಸರ್ಕಾರ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತೋ?
೩. ಕರ್ನಾಟಕದಲ್ಲಿ ಸ್ಫೋಟವಾದಾಗ ಕಾಂಗ್ರೆಸ್ ನಾಯಕರುಗಳೆಲ್ಲಾ ಒಂದೇ ರಾಗ... "ಕರ್ನಾಟಕ ಸರ್ಕಾರದ ಮಾನ್ಯ(?) ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು" : ಸ್ವಾಮಿ ಈಗ ತಾವು ಕೇಂದ್ರ ಸರ್ಕಾರದ ಗೃಹಮಂತ್ರಿಯವರಿಗೆ ಇದೇ ಪ್ರಶ್ನೆ ಯಾಕೆ ಕೇಳುತ್ತಿಲ್ಲ? ತಪ್ಪುಮಾಡಿದವರು ತಮ್ಮಪಕ್ಷದವರಾದರೆ ರಾಜೀನಾಮೆ ಕೊಡುವ ಅಗತ್ಯವಿಲ್ಲವೇ?

ನಾನು ಯಾವುದೇ ಪಾರ್ಟಿ ಪರವಾಗಿ ಇಲ್ಲಿ ವಾದಿಸುತ್ತಿಲ್ಲ.. ನಮ್ಮ ರಾಜಕಾರಣಿಗಳು ಮಾಡುತ್ತಿರುವ "ದರಿದ್ರ" ರಾಜಕಾರಣದ ಬಗ್ಗೆ ಹೇಳುತ್ತಿದ್ದೇನೆ ಅಶ್ಟೇ....

Rating
No votes yet

Comments