ಬಾಂಬು ತಯಾರಿಸುವ ವಿಧಾನ

ಬಾಂಬು ತಯಾರಿಸುವ ವಿಧಾನ

ಛೇ..ನೀವು.. ನೀವು!!..ಬಾಂಬು ತಯಾರಿಸುವುದು ಹೇಗೆ ಎಂದು ಕಲಿಯಲು ಹೊರಟಿರಾ?
ದೇವರೇ..
ಬೇಡಾ ಸ್ವಾಮಿ,
ಕಣ್ಣಿಗೆ ಕಣ್ಣು, ಬಾಂಬಿಗೆ ಬಾಂಬು ಇದೆಲ್ಲಾ ನಮ್ಮ ಮಣ್ಣಿನ ಗುಣಕ್ಕೆ ಹೇಳಿಸಿದ್ದಲ್ಲ.
ಬಾಂಬಿಗೆ ತಲೆ ಕೊಟ್ಟೇವು ಹೊರತು ಭಯೋತ್ಪಾದಕರ ಮೇಲೆ ಮಾತಿನ ಬಾಂಬು ಸಹ ಎಸೆಯೆವು.

ಮುಂದಿನ ಸಲ ಬಾಂಬ್ ಸ್ಫೋಟಕ್ಕಿಂತ ಮೊದಲು ಸರಕಾರವೇ ಏನಾದರೂ ಮಾಡೀತೆಂದು ಕಾಯುವ ಕೆಲಸ ನಮ್ಮದು.
ಬಲ್ಲನೋ,ಬಲನೋ,ಎಡನೋ ಮೂಲಗಳ ಪ್ರಕಾರ ಸರಕಾರ ಬಹಳಷ್ಟು ಕ್ರಮಗಳನ್ನು ಕೈಗೊಳ್ಳುವ ಆಲೋಚನೆಯಲ್ಲಿದೆಯಂತೆ. ಅವುಗಳಲ್ಲಿ ಕೆಲವು:

-‘ಉಗ್ರವಾಗಿ ಖಂಡಿಸಿದರು’, ‘ಸಾರ್ವಜನಿಕರು ಶಾಂತಿಯಿಂದಿರಬೇಕು’ ಎಂಬ ಹೇಳಿಕೆಗಳ ಬದಲು “ಉಗ್ರವಾಗಿ,ಬಲವಾಗಿ ಖಂಡಿಸಿದರು”, “ಸಾರ್ವಜನಿಕರು ಶಾಂತಿಯಿಂದ ಕಣ್ಣುಮುಚ್ಚಿಕೊಂಡಿರಬೇಕು” ಎಂಬ ಹೇಳಿಕೆಗಳನ್ನು ಕೊಡಲಾಗುವುದು. ಇದರಿಂದ ಭಯೋತ್ಪಾದಕರಿಗೆ ಭಯವೂ, ಸಾರ್ವಜನಿಕರಿಗೆ ಧೈರ್ಯವೂ ಬರುವುದು.

-ಬಾಂಬು ಸ್ಫೋಟಕ್ಕಿಂತ ಕೆಲವೇ ಕ್ಷಣಗಳ ಮೊದಲು ಇ-ಮೈಲ್ ಮಾಡಿ ಟಿ.ವಿ., ಪತ್ರಿಕೆಗಳಿಗೆ ತಿಳಿಸುವ ಬದಲು ೧-೨ ದಿನವಾದರೂ ಮೊದಲು ತಿಳಿಸಬೇಕೆಂದು ಭಯೋತ್ಪಾದಕರಲ್ಲಿ ಮನವಿ ಮಾಡಲಾಗುವುದು.

-ದೆಹಲಿ ಸುರಕ್ಷಿತವಾಗಿಲ್ಲ ಎಂಬ ಅರಿವಾಗಿದೆ. ಅದಕ್ಕೆ ಮುಂದಿನ ಅಧಿವೇಶನವನ್ನು ಸುರಕ್ಷಿತತೆಯ ದೃಷ್ಟಿಯಿಂದ, ಪಾರ್ಲಿಮೆಂಟ್ ಭವನದ ಬದಲು ಅಂಡಮಾನ್ ಜೈಲಲ್ಲಿ ನಡೆಸಲಾಗುವುದು.

-ದೇಶದ ಮಹಾನಗರಗಳ ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಬಾಂಬು ನಿರೋಧಕಗಳನ್ನು ಧರಿಸಿರಬೇಕು ಎಂಬ ಕಾನೂನು ಜಾರಿಗೆ ತರಲಾಗುವುದು.

- 'ಅಲ್ಲಾ' ಭಯೋತ್ಪಾದಕರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸುವುದೇ ಕೊನೆಯ ಪ್ರಯತ್ನ.

...ಗಣೇಶ.

Rating
Average: 3 (2 votes)

Comments