ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಇದೀಗ ಬಂದ ವರದಿಯ ಪ್ರಕಾರ ಮುಂಜಾನೆ ೯ ಗಂಟೆಯ ವೇಳೆಗೆ ನಮ್ಮೆಲ್ಲರ ನೆಚ್ಚಿನ ನಗೆ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಜಿನ ಮೇಲೆ ಈ ಟಿಪ್ಪಣಿ ಸಿಕ್ಕಿದೆ:
“ಇದ್ಯಾವುದೂ ಇಲ್ಲದೆ ಬದುಕಬಲ್ಲೆನಾ ಅನ್ನಿಸುತ್ತಿದೆ. ಯಾಕೋ ಬ್ಲಾಗು, ಅಂತರ್ಜಾಲ, ಬರವಣಿಗೆ ಮುಂತಾದುವನ್ನು ವಿಪರೀತ ಹಚ್ಚಿಕೊಂಡ ಭಯವಾಗುತ್ತಿದೆ. ಹೊಸತನ್ನು ಕಲಿಯುವುದಕ್ಕೆ, ಹೊಸ ಅನುಭವವನ್ನು ಪಡೆಯುವುದಕ್ಕೆ, ಹೊಸ ಪುಸ್ತಕ ಓದುವುದಕ್ಕೆ, ಹೊಸ ಹಾಡು ಕೇಳುವುದಕ್ಕೆ, ಹೊಸ ವ್ಯಕ್ತಿಯೊಂದಿಗೆ ಮಾತಾಡುವುದಕ್ಕೆ ಸಾಧ್ಯವೇ ಆಗುತ್ತಿಲ್ಲ ಅನ್ನಿಸುತ್ತಿದೆ.
ಮಾಹಿತಿಯ ರಭಸದಲ್ಲಿ ಸಿಕ್ಕು ಎಲ್ಲೆಲ್ಲಿಗೂ ಕೊಚ್ಚಿ ಹೋಗಿ, ಅದನ್ನೇ ಸಾಧನೆ ಅಂದುಕೊಂಡು ಒಳಗೆ ಇಣುಕಿ ನೋಡಿಕೊಂಡರೆ ಒಂದು ಹನಿಯೂ ಇಳಿದಿಲ್ಲ ಎಂಬುದು ತಿಳಿಯಿತು. ಇನ್ನು ಸಾಕು, ಈ ರೇಸು ಎಂದು ತೀರ್ಮಾನಿಸಿದ್ದೇನೆ. ಇದನ್ನು ಬರ್ನ್ ಔಟ್ ಅನ್ನಬಹುದಾ, ಸ್ಯಾಚುರೇಶನ್ ಅನ್ನಬಹುದಾ ಗೊತ್ತಿಲ್ಲ. ಊಹುಂ, ಇನ್ನು ಮುಂದೆ ಇದು ನನ್ನ ಕೈಲಿ ಸಾಧ್ಯವಾಗುವುದಿಲ್ಲ. ಅಂಗಡಿ ಇಲ್ಲಿಗೆ ಮುಚ್ಚುತ್ತಿದ್ದೇನೆ. ”
ನಮ್ಮೊಡನೆ ಯಾವಾಗಲೂ ನಗು ನಗುತ್ತಾ ಇದ್ದ ಸಾಮ್ರಾಟರು ನಮ್ಮನ್ನಗಲಿರುವ ದುಃಖ ತೀವ್ರವಾಗಿ ಬಾಧಿಸುತ್ತಿದೆ. ಇನ್ನು ಮುಂದೆ ನಗಾರಿ ಸದ್ದು ಮಾಡುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.
Comments
ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
In reply to ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! by anil.ramesh
ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
In reply to ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! by ASHOKKUMAR
ಉ: ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!