ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

ಸ್ನೇಹಿತರೆ,

ಇತ್ತಿಚೆಗೆ ಗಮನಿಸಿದ್ದಿರಾ? ಬೆಂಗಳೂರಿನಲ್ಲಿ ಪುಟ್ಟ ಕಂದಮ್ಮರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲಿವೆ. ಈ ಎಲ್ಲ ಘಟನೆಗಳಲ್ಲಿ, ದಿನಕ್ಕೆ ೪ ಕನ್ನಡ ಪತ್ರಿಕೆ ಓದೋ ನನಗೆ ಕಂಡ ಎರಡು ಕಾಮನ್ ಅಂಶಗಳು ಏನಂದ್ರೆ,

೧> ಅತ್ಯಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಕಂದಮ್ಮಗಳೆಲ್ಲರೂ, ಬೆಂಗಳೂರಿನಲ್ಲಿ ಬಹು ಮಹಡಿ ಕಟ್ಟಡ ನಿರ್ಮಾಣದಲ್ಲಿ ಕೂಲಿ ಕೆಲಸ ಮಾಡುತ್ತಿರುವ ನಮ್ಮ ಗುಲ್ಬರ್ಗಾ, ಬಿಜಾಪುರ, ರಾಯಚೂರು ಸೀಮೆಯ ಗಾರೆ ಕೆಲಸದವರ ಮಕ್ಕಳು

೨> ಈ ಎಲ್ಲ ಪ್ರಕರಣಗಳಲ್ಲೂ, ಇಂತ ಹೇಯ ಕೆಲಸ ಮಾಡಿದವರು, ಇದೇ ಸ್ಥಳದಲ್ಲಿ, ಕೂಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ, ಬಿಹಾರದ ಮೂಲದ ಘಾತುಕರು.

ನಿನ್ನೆಯ ವಿ.ಕ ದಲ್ಲಿ ಬಂದ ಪ್ರಕರಣ ಓದಿ ರಕ್ತ ಕುದಿತಿದೆ. ಏಳು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಈ ಸಮಾಜ ಘಾತುಕರು. ನಮಗೂ ಇಗೀಗ ಅರಿವಾಗ್ತಿದೆ, ಮುಂಬೈನಲ್ಲಿ ಯು.ಪಿ/ಬಿಹಾರಿಗಳನ್ನ ಅಲ್ಲಿನ ಸ್ಥಳೀಯರು ಯಾಕೆ ವಿರೋಧಿಸುತ್ತಾರೆ ಅಂತ.ಯಾವ ಪಾಪ ಮಾಡಿತ್ತು ಅಂತ ಈ ಹಸುಳೆಗೆ ಇಂತ ಶಿಕ್ಷೆ ??

ಅವ್ಯಾವಹತ, ಅನಿಯಂತ್ರಿತ ವಲಸೆಯಿಂದ ಆಗ್ತಿರೋ ಕೆಡುಕುಗಳಲ್ಲಿ ಇದು ಒಂದು. ಬೆಂಗಳೂರು ಅನ್ನೋ ತೋಟದಪ್ಪನ ಛತ್ರಾನಾ ಆ ದೇವರೆ ಕಾಪಾಡಬೇಕು.
ಇಂತ ಪ್ರಕರಣಗಳ ಬೆನ್ನು ಹತ್ತಿ ಹೋಗೊ ಪೋಲಿಸರ ಮೇಲೆಯೇ ಹಲ್ಲೆ ಮಾಡುವಷ್ಟು ದರ್ಪ ಈ ಪುಂಡರದ್ದು !!

ಇವತ್ತಿನ ವಿ.ಕ ವರದಿ ಪ್ರಕಾರ ನಿನ್ನೆ ರಾಮ ಮೂರ್ತಿನಗರದಲ್ಲಿ, ರಾತ್ರಿ ಕುಡಿದು, ಅಬ್ಬರದ ಸಂಗೀತ ಹಾಕಿ ಕುಣಿಯುತ್ತಿದ್ದ ಈ ಹಲ್ಕಾ ನನ್ ಮಕ್ಕಳನ್ನು ಪ್ರಶ್ನಿಸಿದ ಪೋಲಿಸರ ಮೇಲೆ ಹಲ್ಲೆ ಮಾಡಿದ್ದಾರಂತೆ. ಎಲ್ಲಿಗೆ ಬಂತು ನೋಡಿ ಪರಿಸ್ಥಿತಿ !!

ಸಂಪದದಲ್ಲಿರುವ ನಮ್ಮ ಮಾಧ್ಯಮ ಮಿತ್ರರು,, ಇಂತ ದುಂಡಾವರ್ತಿಯ ಬಗ್ಗೆ, ಇಂತ ಹೇಯ ಕ್ರತ್ಯಗಳ ಬಗ್ಗೆ ದ್ರಶ್ಯ ಮಾಧ್ಯಮದಲ್ಲಿ ವರದಿ ಮಾಡಲಿ, ಆ ಮೂಲಕ ನಾಡಿನ ಜನರಲ್ಲಿ ಇಂತ ಕ್ರತ್ಯಗಳ ಬಗ್ಗೆ ಅರಿವಾಗಲಿ, ನಾಡಿಗರ ಆಕ್ರೋಶ ಒಮ್ಮೆ ಸರ್ಕಾರದ ಕಿವಿ ಮುಟ್ಟಿದರೆ, ಇಂತ ಸಮಾಜ ಘಾತುಕರ ಮೇಲೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತಗೋಬೌದು ಅನ್ನೊದು ನನ್ನ ಅನಿಸಿಕೆ.

Rating
No votes yet

Comments