ಸಿಹಿ ಕಹಿ

ಸಿಹಿ ಕಹಿ

ನಮ್ಮ ರಾಜ್ಯ , ಸಂಸ್ಕೃತಿ ಇವೆರಡನ್ನು ನೋಡಿದರೂ ತುಂಬಾ ಖುಷಿಯಾಗುತ್ತೆ , ನಾವು ಕನ್ನಡಿಗರು ಅಂತ ಹೇಳಿಕೊಳ್ಳಕ್ಕೆ ಹೆಮ್ಮೇನೂ ಆಗುತ್ತೆ. ಆದರೆ ಇದನ್ನ ಇನ್ನೊಂದು ರೀತಿಯಿಂದ ನೋಡಿದರೆ ಸ್ವಲ್ಪ

ಬೇಜಾರೂ ಆಗೋದು ಅಷ್ಟೇ ನಿಜ. ಹೇಳುವುದಕ್ಕೆ ಬಹಳಷ್ಟಿದೆ ಆದರೆ ಸದ್ಯಕ್ಕೆ ಮನಸ್ಸಿಗೆ ಹೊಳೆದಿದ್ದನ್ನ ಬರೆಯುತ್ತಾ ಇದ್ದೀನಿ -

೧. ನಮ್ಮ ಹೊಂದಾಣಿಕೆ:
ನಾವು ತುಂಬಾ ಉದಾರಿಗಳು - ಯಾರೇ ಯಾವುದೇ ದೇಶ/ರಾಜ್ಯ ದಿಂದ ಬಂದರೂ ಅವರ ಜೊತೆ ಸಲೀಸಾಗಿ ಹೊಂದಿಕೊಳ್ತೀವಿ. ಅವರು ನಮ್ಮ ಮನೆಯವರೇನೋ ಅನ್ನೋ ಅಷ್ಟರ ಮಟ್ಟಿಗೆ ಬೆರೆತು

ಹೊಗುತ್ತೀವಿ.
ಆದರೆ ಇದು ಅಲ್ಲೀಗೇ ನಿಲ್ಲೊದಿಲ್ಲ , ಅವರಿಗೆ ನಮ್ಮ ಭಾಷೆ ಸಂಸ್ಕೃತಿಯನ್ನು ಪರಿಚಯ ಮಾಡಿಸೋದು ಬಿಟ್ಟು ಅವರ ಭಾಷೆಯನ್ನ ನಾವು ಕಲೀತಿವಿ!! ಈ ವಿಚಿತ್ರ ನಾನು ನೋಡಿರೋದು ಇಲ್ಲಿ ಮಾತ್ರ. ಅದಕ್ಕೆ

೭೫% ಬೆಂಗಳೂರಿಗರಿಗೆ ತಮಿಳು, ತೆಲುಗು ಬರೋದು!!!!
ನಾವು ಯಾರಾದ್ರೂ ಉತ್ತರ ಭಾರತೀಯ ಸ್ನೆೇಹಿತರನ್ನ ನೋಡಿದ್ರೆ ನಮ್ಮ ಬಾಯಲ್ಲಿ "ಏನಪ್ಪಾ ಹೆಂಗಿದ್ದೀಯಾ?" ಅಂತಾ ಬರೊಲ್ಲ. ನಮ್ಮ ಬಾಯಲ್ಲಿ ಬರೋದು "ಕೈಸೇ ಹೋ ಭಾಯಿ?"

೨. ನಮ್ಮ ವೈಚಾರಿಕತೆ :
ತಮಿಳು ನಾಡು, ಆಂಧ್ರ ಕ್ಕೆ ಹೋಲಿಸಿದರೆ ನಮ್ಮ ಜನ ಸುಲಭವಾಗಿ ಮರುಳು ಆಗೋದಿಲ್ಲ!!. ಇದಕ್ಕೆ ಸಾಕ್ಷಿ ನಮ್ಮ ರಾಜಕೀಯದಲ್ಲಿ ಇನ್ನೂ ಯಾವ ಸಿನಿಮಾ ನಟನೂ ಮುಖ್ಯಮಂತ್ರಿ ಆಗಿಲ್ಲ!!!
ಸಿನಿಮಾ ಡೈಲಾಗ್ ಹೊಡೆದು ಜನರನ್ನ ಗೂಬೆ ಮಾಡಕ್ಕೆ ನಾವು ಬಿಡೋದಿಲ್ಲ.
ಆದರೆ ಅದೇ ನಮಗೆ ಶಾಪ ಸಹ - ನಮ್ಮಲ್ಲಿ ಯಾವುದೇ ಒಬ್ಬ ನಾಯಕ ಇಲ್ಲ. ಅದಕ್ಕೇ ನಮ್ಮದೇ ಆದ ಪ್ರಾದೇಶಿಕ ರಾಜಕೀಯ ಪಕ್ಷ ಇಲ್ಲ. ನಮ್ಮ ಎಲ್ಲಾ ಮುಖ್ಯಮಂತ್ರಿಗಳು ಕೇಳೋದು ಹೈ-ಕಮ್ಯಾಂಡ್

ಮಾತನ್ನೇ ಹೊರೆತು ನಮ್ಮ ಮಾತನ್ನಲ್ಲ. ಸೆಂಟ್ರಲ್ ಗವರ್ನಮೆಂಟನ್ನ ಅಲ್ಲಾಡಿಸಿ ಕೆಲಸ ತೊಗೊಳ್ಳೋ ಶಕ್ತಿ ನಮ್ಮ ರಾಜ್ಯಕ್ಕಿಲ್ಲ.
ತಮಿಳಿನಷ್ತೇ ಯಾಕೆ ಅದಕ್ಕಿಂತಲೂ ಪ್ರಾಚೀನ, ಸಮೃಧ್ಧವಾದ ಕನ್ನಡಕ್ಕೆ ಶಾಸ್ತ್ರೀಯ ಸ್ಠಾನ ಇನ್ನೂ ಸಿಗದೇ ಇರೋದು!!!.

ಇನ್ನೂ ಇದೆ..ಮುಂದೆ ಬರೆಯುತ್ತೇನೆ ...

ಮುಗಿಸುವುದಕ್ಕೆ ಮುನ್ನ -
ಏಳು ಜ್ಣಾನಪೀಠ ಪ್ರಶಸ್ತಿ ಪಡೆದ ಕನ್ನಡದ ಸಾಹಿತ್ಯ ಎಲ್ಲಿ ನಿಂತ ನೀರಾಯಿತೋ, ಐ.ಟಿ , ಬಿ.ಟಿ, ಜಾಗತೀಕರಣ ಎಲ್ಲಿ ನಮ್ಮ ಸಾಹಿತ್ಯವನ್ನೂ , ಸಂಸ್ಕೃತಿಯನ್ನೂ ನುಂಗಿ ಹಾಕುತ್ತೋ ಅನ್ನೋ ಭಯದಲ್ಲಿದ್ದಾಗ ಸಂಪದವನ್ನು ನೋಡಿ ತುಂಬಾ ಸಂತೋಷ ಆಯಿತು. ಇಲ್ಲಿ ಇರುವ ಲೇಖನ , ಚರ್ಚೆ, ಕವನ ನೋಡಿದಾಗ ಅನ್ನಿಸುತ್ತೆ , ಇದೇ ಐ.ಟಿ ನಮ್ಮ ಸಾಹಿತ್ಯವನ್ನ ಪುನರ್ಚೇತನಗೊಳಿಸೋ ಶಕ್ತಿ ಅಂತ!!. ಕೇವಲ ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ "ಒದುಗರ ಕಾಲಂ"ನ ಎರಡು ಮೂರು ಪ್ಯಾರಾ ಬಿಟ್ಟರೆ ಬಹಳಷ್ತು ಜನ ಏನು ಹೇಳ್ತಾರೆ , ಏನು ಯೊಚಿಸ್ತಾರೆ, ಅವರ ಅಭಿರುಚಿ ಏನು ಅನ್ನೋದು ತಿಳಿದೇ ಇರಲಿಲ್ಲ. ನಾನು ಕನ್ನಡದಲ್ಲಿ ಕೊನೆಯದಾಗಿ ಬರೆದಿದ್ದು ನನ್ನ ೧೦ನೇ ಕ್ಲಾಸಿನ ಕನ್ನಡ ಪರೀಕ್ಷೆಯನ್ನ!!! . ಅದಾದ ಮೇಲೆ ಇಂಜಿನಿಯರಿಂಗ್ - ಅಲ್ಲಿ ಕನ್ನಡವೇ ಇಲ್ಲ.
ನಾನು ಪತ್ರಿಕೆಗೆ ಬರೆದು ಅದು ಪ್ರಕಟ ಆಗೋದು ದೂರದ ಮಾತು...ಕೆಲಸದ ಸಲುವಾಗಿ ಪರದೇಶಕ್ಕೆ ಬಂದ ಮೇಲೆ ಮತ್ತೆ ಕನ್ನಡದಲ್ಲಿ ಬರೆಯೋದಕ್ಕೆ, ಓದುವುದಕ್ಕೆ ಸಾಧ್ಯವಾದದ್ದು ಸಂಪದದಂಥಾ ವೇದಿಕೆಯಿಂದ.
ಕನ್ನಡದಲ್ಲಿ ಓದಿ,ಬರೆದು ವಿಚಾರ ಮಾಡಿ ನಮ್ಮ ಸಾಹಿತ್ಯವನ್ನೂ ಸಂಸ್ಕೃತಿಯನ್ನೂ ಎಲ್ಲೆಡೆ ಹರಡುತ್ತಿರುವ ನನ್ನ ಎಲ್ಲಾ ಕನ್ನಡ ಮಿತ್ರರಿಗೂ ನನ್ನ ಪ್ರೀತಿಯ ವಂದನೆಗಳು.....

Rating
No votes yet

Comments