ಶಿಲ್ಪಾ ಮಾತಾಡು ಪ್ಲೀಸ್..!

ಶಿಲ್ಪಾ ಮಾತಾಡು ಪ್ಲೀಸ್..!

ಶಿಲ್ಪಾ. ಈ ಹೆಸರು ಕೇಳಿದರೆ ಈಗಲೂ ಮನಸ್ಸು ಕಲಕುತ್ತದೆ. ಕಣ್ತುಂಬಿಕೊಳ್ಳುತ್ತದೆ. ಅವಳ ಆಕಸ್ಮಿಕ ಸಾವು ಇನ್ನು ಅರಗಿಸಿಕೊಳ್ಳುವ ಮನಸ್ಸಾಗುತ್ತಿಲ್ಲ. ಯಾಕೆಂದರೆ, ಅವಳು ಅವಳ ಸಾವಿನ ಹಿಂದಿನ ದಿನವಷ್ಟೆ ನನಗೆ ಎಸ್ಎಂಎಸ್ ಮಾಡಿ ಗುಡ್ ನೈಟ್ ಹೇಳಿದ್ದಳು. ಆದರೆ ಮರುದಿನವೇ ಗುಡ್ ಬೈ ಹೇಳಿಬಿಟ್ಟಳು. ದೇವರು ಅವಳನ್ನು ಬಲವಂತವಾಗಿ ಈ ಜಗತ್ತಿನಿಂದ ಕರೆದುಕೊಂಡು ಬಿಟ್ಟ. ಅವನಿಗೆ ಸ್ವಲ್ಪವಾದರೂ ಕರುಣೆ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲವೇನೋ...
ಶಿಲ್ಪಶ್ರೀ ನನಗೆ ಗೊತ್ತಿರುವುದು ಶಿಲ್ಪ ಎಂದಷ್ಟೆ. ಅವಳು ರಾತ್ರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ನನ್ನ ಸ್ನೇಹಿತೆಯೊಬ್ಬಳು ಹೇಳಿದಾಗಿ ನನಗೆ ನಂಬಲಾಗಲಿಲ್ಲ. ಇಲ್ಲ, ನೀವು ಕನ್ ಪ್ಯೂಸ್ ಆಗಿರಬೇಕು. ಆಕೆ ಊರಲ್ಲಿದ್ದಾಳೆ .ನಿನ್ನೆ ತಾನೇ ನನಗೆ ಮೆಸೇಜ್ ಮಾಡಿದ್ದಾಳೆ ಎಂದೇ. ಆಕೆ, ಇಲ್ಲ ಆ ಹುಡುಗಿನೇ ಅಂತೇ ನಿಮ್ಮ ಜೊತೆ ಆಗ ಡೆಸ್ಕ್ ನಲ್ಲಿ ಇರುತ್ತಿದ್ದಳಲ್ಲ ಎಂದರು.
ಇಲ್ಲ ! ಎಂದು ಪೋನಿಟ್ಟೆ. ಕೂಡಲೇ "ಶಿಲ್ಪಾ ಎಲ್ಲಿದ್ದೀಯಾ" ಎಂದು ಮೆಸೆಜ್ ಮಾಡಿದೆ. ಆ ಕಡೆಯಿಂದ ಅಷ್ಟೇ ವೇಗವಾಗಿ ಉತ್ತರ ಬಂತು ಮನದಲ್ಲಿ ನನಗೆ ಏನೋ ಸಮಧಾನ ಅದೇ ಸಮಯಕ್ಕೆ ಆತಂಕವೂ. ಅದಕ್ಕೆ ಕೂಡಲೇ ಕರೆ ಮಾಡಿದೆ. ಶಿಲ್ಪಾ ಯಾರೋ ಹೀಗೆ ಹೇಳಿದರು ನನಗೆ ತುಂಬಾ ಶಾಕ್ ಆಯ್ತು ಎಂದೆ. ಅವಳು ಹೌದು ಸಾರ್‍, ಅದು ನಿಜ ಶಿಲ್ಪಶ್ರೀ ನಮ್ಮ ಸೀನಿಯರ್‍, ಅಕ್ಸಿಡೆಂಟ್ ಆಗಿದ್ದು ನಿಜ ಎಂದಳು. ನಾನು ಒಂದು ಕ್ಷಣ ಕುಗ್ಗಿಹೋದೆ. ಮನಸ್ಸಿಗೆ ಇನ್ನಿಲ್ಲದ ಆಘಾತವಾಯಿತು. ಹಾಗಾದರೆ ಇಂಟರನ್ ಶಿಪ್ ಬಂದಿದ್ದು ನೀವಲ್ಲವೇ ಎಂದೆ. ಆಕೆ ಅಲ್ಲಾ ಸಾರ್‍ ನಾವು ಮೊನ್ನೆ ಬಂದಿದ್ದು, ಅವರು ಸುವರ್ಣ ಚಾನೆಲ್ ಆರಂಭದಲ್ಲೇ ಬಂದಿದ್ದರು. ಎಂದು ಹೇಳುತ್ತಿದ್ದಂತೆ ಆ ಮುಗ್ಧ ಮುಖ ದಾರುಣ ಸಾವು ಕಂಡ ದೃಶ್ಯ ಭೀಕರವಾಗಿ ಕಣ್ಣು ಮುಂದೆ ಸರಿದುಹೋಯಿತು. ಎಂತಹ ಹುಡುಗಿ ಅವಳು, ನನಗೆ ನಮ್ಮ ಮನೆಯ ಬಸ್ ಸ್ಟಾಪ್ ನಲ್ಲಿ ಕಳೆದ ಬಾರಿ ಸಿಕ್ಕಾಗ ನಕ್ಕ ಅವಳ ಮೊಗ ಇನ್ನು ನೆನಪಿದೆ. ಅಂದು ಅವಳು ಬಸ್ ನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ವರೆಗೆ ಬಂದು, ಅವಳ ಬಾಯ್ ಫ್ರೇಂಡ್ ಬಗ್ಗೆ ಎಲ್ಲಾ ಹೇಳಿದ್ದಳು. ಯಾಕ್ರಿ ಸುವರ್ಣಗೆ ಬರಲ್ವ ಎಂದೆ. ಇಲ್ಲ ಸಾರ್‍, ಈ ಟಿವಿಯಲ್ಲೂ ಜಾಬ್ ಸಿಕ್ಕಿದೆ ಆದರೆ ನಾನು ಪ್ರೀಂಟಲ್ಲಿ ಕೆಲಸಮಾಡಬೇಕು. ಇನ್ನು ಭಾಷೆ ಕಲಿಬೇಕು, ಹೆಚ್ಚು ಹೆಚ್ಚು ಬರೆಯಬೇಕು ಎಂದಿದ್ದಳು. ನನ್ನೊಂದಿಗೆ ಅದೇ ಅವಳ ಕೊನೆ ನಗೆಯಾಗುತ್ತದೆಂದು ನನಂದುಕೊಂಡಿರಲಿಲ್ಲ. ನಾನು, ಅವಳೇ ಮೆಸೇಜ್ ಮಾಡುತ್ತಿದ್ದೇಳೆ ಎಂದು ಕನ್ ಪ್ಯೂಸ್ ಮಾಡಿಕೊಂಡು, ಅವಳ ಮೆಸೇಜ್ ಗಳಿಗೆ ಉತ್ತರಿಸಿ ಸುಮ್ಮನಾಗುತ್ತಿದ್ದೆ. ಮಾತನಾಡುತ್ತಿರಲಿಲ್ಲ. ಆದರೆ ಮಾತನಾಡುವ ವೇಳೆಗೆ ಅವಳು ಅವಳಾಗಿರಲಿಲ್ಲ. ಅವಳು ಇರಲು ಇಲ್ಲ. ವಿಧಿಯಾಟ ಅಂದರೆ ಇದೇ ಇರಬೇಕು.
ಶಿಲ್ಪಾಶ್ರಿ ಸುವರ್ಣ ಬಂದಾಗ ನಮ್ಮೇಲ್ಲರ ಮೆಚ್ಚುಗೆ ಕಾರಣವಾಗಲು ಎರಡು ಕಾರಣಗಳಿವೆ.
ಮೊದಲನೆದಾಗಿ ಅವಳು ಬಂದ ಎರಡು ಮೂರು ದಿನಗಳಲ್ಲೆ ಸ್ಕ್ರಿಪ್ಟ್ ಬರೆಯೋದರಲ್ಲಿ ತೋರಿದ ಆಸಕ್ತಿ ಹಾಗೂ ಅದರಲ್ಲಿರುತ್ತಿದ್ದ ಒಂದು ಸೃಜನಶೀಲತೆ ನನಗೆ ಇಷ್ಟವಾಯಿತು. ಆ ಸಂದರ್ಭದಲ್ಲಿ ಡೆಸ್ಕ್ ನಲ್ಲಿ ಸ್ಕ್ರಿಪ್ಟ್ ಬರೆಯುವವರ ಕೊರತೆ ಹೆಚ್ಚಾಗಿತ್ತು. ಅದರಲ್ಲೂ ಹುಡುಗಿಯರಲ್ಲಿ ಬಹುತೇಕರು ಪೆನ್, ಪೇಪರ್‍ ಮೇಲಿಟ್ಟಿದ್ದೇ ಅಪರೂಪ. ಇನ್ನು ಅವರು ಬರದದ್ದು ದೇವರಿಗೆ ಪ್ರೀತಿ. ಆದರೆ "ಎಲ್ಲರು ಕಾಲೇಜು ದಿನಗಳನ್ನು ಮುಗಿಸಿಬಂದವರು ಪಾಪ " ಎಂಬ ಭಾವನೆ ನಮಗೆ ಮೂಡಿತ್ತು. ಆದರೆ ಕೆಲವೊಮ್ಮೆ ಅವರಿಗೆ ಕಲಿಯಬೇಕೆಂಬ ಆಸಕ್ತಿಯೂ ಇಲ್ಲದ್ದನ್ನು ಕಂಡು ಬೇಸರವಾಗುತ್ತಿತ್ತು. ಇನ್ನು ಕೆಲವರು ನೈಸ್ ಮಾಡಿ ಬರೆಸಿಕೊಳ್ಳುವವರು ಇದ್ದರು ಬಿಡಿ, ಅದು ಬೇರೆ ವಿಷಯ. ಅಂತಹದರಲ್ಲಿ ಶಿಲ್ಪಾ ಸ್ವಲ್ಪ ಭಿನ್ನ. ಆಕೆಯೇ ಮೊದಲು ಬರೆಯುತ್ತಿದ್ದಳು. ನ್ಯಾಷನಲ್, ಇಂಟರ್‍ ನ್ಯಾಷನಲ್ ಸ್ಕ್ರಿಪ್ಟ್ ನನ್ನ ಬಳಿ ಕೇಳಿ ಪಡೆದು ಬರೆದದ್ದು ನನಗೆ ಖುಷಿ ಕೊಟ್ಟಿತ್ತು.

ಹಾಗೆಯೇ ಅವಳ ಮುಗ್ಧ ನಗು, ಮತ್ತು ಅವಳ ಮೃದು ಮಾತು ಎಲ್ಲರಿಗೂ ಇಷ್ಟವಾಗುತ್ತಿತ್ತು. ಇನ್ನೊಂದು ಆಸಕ್ತಿಕರ ಅಂಶ ಎಂದರೆ ಅವಳಲ್ಲಿ ಒಂದು ತುಂಟತನವಿತ್ತು. ಬಹುಶಃ ಅದು ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ ಅನ್ಸುತ್ತೆ. ಟೈಮ್ ಮತ್ತು ನಮ್ಮ ಮೂಡ್ ನೋಡಿ ಆಕೆ ನಗೆ ಚಟಾಕಿ ಹಾರಿಸಿಬಿಡುತ್ತಿದ್ದಳು. ಕೆಲವೊಮ್ಮೆ ನನ್ನನ್ನೂ ರೇಗಿಸಿಬಿಟ್ಟಿದ್ದಳು ಕೂಡಾ.
ಹೀಗೆ ಒಮ್ಮೆ ಸಾಂದರ್ಭಿಕವಾಗಿ, ನಾವಿಬ್ಬರು ಜೊತೆಯಾಗಿ ಊಟಕ್ಕೆ ಹೋಗಿದ್ದೇವು. ಅವಳು ಮಾತಾನಾಡುತ್ತಾ, ಜೋಕ್ ಮಾಡುತ್ತಾ ಊಟ ಮಾಡುತ್ತಾ, ಇನ್ನೆನು ಊಟ ಮುಗಿಸಬೇಕು ಎನ್ನೋವಷ್ಟರಲ್ಲಿ ಒಂದು ಬಾಂಬ್ ಸಿಡಿಸೇಬಿಟ್ಳು. ಸಾರ್‍, " ಹೀಗೆ ಹುಡುಗಿಯರಿಗೆ ಊಟ ಕೊಡಿಸ್ತಾ ಇದ್ರೆ, ನಿಮಗೆ ಫುಲ್ ಬ್ಲೇಡ್ ಹಾಕಿಬಿಡ್ತಾರೆ ಅಷ್ಟೆ ! ನೀವು ಪಾಪರ್‍ ಆಗೋದ್ ಗ್ಯಾರಂಟಿ ಸಾರ್‍ ಅಂದುಬಿಡೋದಾ ನನಗೆ ಫುಲ್ ಶಾಕ್ ! ಇಲ್ಲ ರೀ, ಏನೊ ಪಾಪ ಊರಿಗೆ ಹೋಗ್ತಾ ಇದೀರಾ ಆದ್ದರಿಂದ ಒಂದು ಸೆಂಡ್ ಆಫ್ ಪಾರ್ಟಿ ಅಷ್ಟೆ ಎಂದೆ. ಮತ್ತೇ ಅದೇ ಬಾಯಿ ತುಂಬಾ ನಗು. ಅಂದಿನಿಂದ ಅವಳ ಸಾವಿನವರೆಗೆ ಅವಳು ಊರಲ್ಲಿ ಇದ್ದಳೆಂದೆ ನಾನು ಭಾವಿಸಿದ್ದೇ ಆದರೆ ಅವಳು ಈ ಟ್ರಾಫಿಕ್ ಮಹಾನಗರಿಗೆ ಬಂದು ಯಾವುದೋ ವಾಹನಕ್ಕೆ ಸಿಕ್ಕಿ ಜೀವಬಿಟ್ಟಳಲ್ಲ ಎಂದು ನೆನೆದಾಗ ಬಹಳ ನೋವಾಗುತ್ತೆ ಪ್ರತಿದಿನ ನಾನು ಆಫೀಸಿಗೆ ಹೊರಟು ಆ ಬಸ್ ನಿಲ್ದಾಣದಲ್ಲಿ ನಿಂತಾಗ ನನಗೆ ಅವಳ ನೆನಪಾಗುತ್ತದೆ.
ಎಲ್ಲಿ ಹೋಯಿತು ಆ ಮುಗ್ಧ ನಗು... ಎಲ್ಲಿ ಆ ಸಿಹಿ ಮಾತು..???

- ಜಿ ಸುರೇಶ್ ಬಾಬು (ಗೋಸುಬಾ)

Rating
No votes yet

Comments