ಹಲ್ಲು ಕಿತ್ತ ಹಾವು
ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ!
ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ ಔದಾರಿಯಕೆ
ಇಹುದೇನು ಬೆಲೆಯು?
(ಈಗ ತಾನೇ ರಾಮಧಾರಿ ದಿನಕರ್ ಸಿಂಗ್ ಅವರ ಪದ್ಯದ ಬಗ್ಗೆ ಗುರು ಬಾಳಿಗ ಅವರ ಬರಹ "ದಿನಕರ್" ನೋಡಿದೆ; ಅಲ್ಲಿ ಹೀಗೆ ಬರೆದಿದ್ದರು
ಹಿಂದಿಯ ಪ್ರಸಿದ್ಧ ಕವಿ ರಾಮಧಾರಿ ಸಿಂಗ್ "ದಿನಕರ್" ರವರ ನೂರನೇ ಹುಟ್ಟಿದ ಹಬ್ಬ ಅಂತೆ ನಿನ್ನೆ. ಅವನು ಬರೆದ ಕವನ ಒಂದು ಹಿಂಗಿದೆ.
"ಕ್ಷಮಾ ಶೋಭ್ತಿ ಉಸ್ ಭುಜಂಗ್ ಕೋ ಜಿಸ್ ಕೆ ಪಾಸ್ ಗರಲ್ ಹೋ.
ಉಸ್ ಕಾ ಕ್ಯಾ ಜೋ ದಂತ್ ಹೀನ, ವಿಶ್ ರಹಿತ್, ವಿನೀತ್, ಸರಲ್ ಹೋ
ಚೆನ್ನಾಗಿದೆ ಅಲ್ವ? )
ಹೆಚ್ಚು ಕಡಿಮೆ ಇದೇ ತಿಳಿವು ಬರುವ ಸಂಸ್ಕೃತ ಪದ್ಯವೊಂದನ್ನೂ ಓದಿದ ಅನಿಸಿಕೆ ನನಗೆ. ಆದರೆ ಸರಿಯಾಗಿ ನೆನಪಾಗುತ್ತಿಲ್ಲ.
-ಹಂಸಾನಂದಿ
Rating
Comments
ಉ: ಹಲ್ಲು ಕಿತ್ತ ಹಾವು
ಉ: ಹಲ್ಲು ಕಿತ್ತ ಹಾವು
ಉ: ಹಲ್ಲು ಕಿತ್ತ ಹಾವು