ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
೮ನೇ ತರಗತಿ. ಸ್ಕೂಲ್ಡೇಗೆ ಡ್ರಾಮಾಕ್ಕೆ ನನ್ನನ್ನೂ ಸೇರಿಸಿದರು.
೨ನೇ ನಾಯಕನ ಪಾತ್ರ. ನಾಟಕದ ತಯಾರಿಗೆ ಜಾಸ್ತಿ ದಿನ ಸಿಕ್ಕಿರಲಿಲ್ಲ.
ಸ್ಕೂಲ್ಡೇ ದಿನ ಬೆಳಗ್ಗೆ ನಾಯಕ ನಾ... ಪ..ತ್ತೆ!!
ತರಾತುರಿಯಲ್ಲಿ ನಮ್ಮ ಜತೆ ಇದ್ದ ಒಬ್ಬನನ್ನೇ ನಾಯಕನಾಗಿ ಬದಲಾಯಿಸಲಾಯಿತು.
ಮಧ್ಯಾಹ್ನಕ್ಕೆ ಹಿನ್ನಲೆ ಸಂಗೀತದವರು ಬಂದರು. ಹೊಸ ನಾಯಕನನ್ನು ಕಟ್ಟಿಕೊಂಡು ಮಾಮೂಲೀ ಡಯಲಾಗ್ಗಳೇ ಹೊಂದಾಣಿಕೆಯಾಗುತ್ತಿರಲಿಲ್ಲ. ಇನ್ನೆಲ್ಲಿಯ ಹಿನ್ನಲೆ ಸಂಗೀತ? ಸ್ವಲ್ಪ ಹೊತ್ತು ಕುಳಿತು ನಮ್ಮ ನಾಟಕ ಪ್ರಾಕ್ಟೀಸನ್ನು ನೋಡಿ, ಗುರುಗಳ ಹತ್ತಿರ ಏನೋ ಹೇಳಿ ಹೋದರು.
ಡ್ರಾಮಾಕ್ಕೆ ಇನ್ನೆರಡು ಗಂಟೆ ಇದೆ ಎನ್ನುವಾಗ ತಿಳಿಯಿತು-ಹಿನ್ನಲೆ ಗಾಯಕರು ನನಗೊಂದು ಹಾಡು ಸೇರಿಸುವರೆಂದು! ಮೊದಲೇ ನಾಯಕನೊಂದಿಗೆ ಡಯಲಾಗ್ ಹೊಂದಾಣಿಕೆಯಾಗುತ್ತಿರಲಿಲ್ಲ.
(ಸ್ಕೂಲ್ ಡ್ರಾಮಾದಲ್ಲಿ ನಟಿಸಿದವರಿಗೆ ನನ್ನ ಕಷ್ಟ ಅರ್ಥವಾಗಬಹುದು. ಎದುರಿರುವವನು ಹೇಳಬೇಕಾದ ಕೊನೆಯ ವಾಕ್ಯ ನೆನಪಿರುತ್ತದೆ. ಅದು ಮುಗಿದ ಕೂಡಲೇ ನಮ್ಮ ಡಯಲಾಗ್ ಸುರು-ಇಲ್ಲಾತ ಕೊನೆಯ ವಾಕ್ಯವೇ ಹೇಳುತ್ತಾ ಇಲ್ಲ)
ಹಾಡು ಬೇಡವೆಂದು ಗುರುಗಳ ಬಳಿ ಬೇಡಿಕೊಂಡೆ. “ಯಾಕೆ ಬೇಡ? ಒಂದು ಕೈ ಆಚೆ, ಇನ್ನೊಂದು ಕೈ ಈಚೆ ಮಾಡು, ಈ ಕೊನೆಗೆ ಒಮ್ಮೆ, ಆ ಕೊನೆಗೆ ಒಮ್ಮೆ ಹೋಗು.. .. ..”
ಎಂದು ಹೇಳಿ ಗುರುಗಳು ಬೇರೆ ತಯಾರಿ ನಡೆಸಲು ಹೋದರು.
ಸರಿ. ಡ್ರಾಮಾ ಸುರು..
ನಾಯಕ ಅವನ ಪಾಲಿನ ಮಾತು ಅವನಿಗೆ ನೆನಪಾದ ಹಾಗೆ ಹೇಳುತ್ತಿದ್ದ. ಸೀನಿನ
ಕೊನೆಯಲ್ಲಿ ಹೇಳಬೇಕಾದ ಮಾತು ಮೊದಲೇ ಹೇಳಿ ಬಿಡುತ್ತಿದ್ದ.
(ಸ್ಟೇಜ್ ಬದಿಯಿಂದ ಪ್ರಾಂಪ್ಟ್ ಮಾಡುತ್ತಿದ್ದವನು ತಲೆಬಿಸಿಯಾಗಿ ಪುಸ್ತಕ ಬಿಸಾಕಿ ಸೀದಾ ಹೋದ.)
ಹೀಗೇ ಕೆಲವು ಸೀನುಗಳು ಮುಗಿದವು.
ಗ್ಯಾಪ್ ಮ್ಯೂಸಿಕ್ ಮುಗಿಯುವ ಮೊದಲೇ ಮುಂದಿನ ಸೀನಿನ ಡಯಲಾಗ್ ಒಮ್ಮೆ
ನೋಡಿಕೊಳ್ಳುವೆ ಎಂದಿದ್ದಾಗ-‘ಈಗ ನಿನ್ನ ಹಾಡು’ ಎಂದು ಸ್ಟೇಜ್ಗೆ ದಬ್ಬಿದರು.
ಅದೇ ಮೊದಲು ಆ ಹಾಡು ಕೇಳಿದ್ದು!
ಹಾಡುಗಾರನಿಗೆ ತನ್ನ ಪ್ರತಿಭೆ ತೋರಿಸಲು ಚಾನ್ಸ್ ಸಿಕ್ಕಿತು ಎಂದು ರಾಗ ಎಳೆದದ್ದೇ
ಎಳೆದದ್ದು..
ನಾನೂ ಕೈಯೆತ್ತಿದೆ, ಇಳಿಸಿದೆ, ಸ್ಟೇಜ್ನ ಮೂಲೆ ಮೂಲೆಗೂ ಹೋದೆ. ಒಂದು ಸಲ
ಎರಡು ಸಲ.. ಸಾಕಾಯಿತು..
೩ ನಿಮಿಷದ ಹಾಡು ..ಇಲ್ಲಿ ಸೆಕೆಂಡುಗಳೂ ನನಗೆ ತಾಸಿನಂತೆ ಅನಿಸುತಿತ್ತು.
ಹಾಡು ಕೇಳಿ ಬರುತ್ತಿರುವ ದಿಕ್ಕಿಗೆ ಮುಖಮಾಡಿ ಕೈಮುಗಿದೆ(ಸ್ಟೇಜ್ಗೆ ಫೋಕಸ್ ಬೆಳಕು ಹಾಕಿರುವುದರಿಂದ ಹಾಡುಗಾರ ಕಾಣಿಸುತ್ತಿರಲಿಲ್ಲ) ಹಾಡುಗಾರ ಕಣ್ಣುಮುಚ್ಚಿ ಹಾಡುತ್ತಿದ್ದ ಕಾಣುತ್ತದೆ. ನನ್ನ ಕಷ್ಟ ಅವನಿಗೆ ಗೊತ್ತಾಗಲಿಲ್ಲ. ಕೊನೇ ಲೈನ್ ಆಗುವ ಹೊತ್ತಿಗೆ ನನಗೆ ಕಣ್ಣೀರು ಬರಲು ಸುರುವಾಗಿತ್ತು. ಇನ್ನು ನನ್ನ ಜನ್ಮಕ್ಕೂ ಡ್ರಾಮಾದಲ್ಲಿ ನಟಿಸುವುದಿಲ್ಲ ಎಂದು ತೀರ್ಮಾನಿಸಿದ್ದೆ.
ನಾಟಕ ಮುಗಿದ ಮೇಲೆ ಗುರುಗಳು -‘ನಾಟಕ ಕ್ಯಾನ್ಸಲ್ ಮಾಡಬಹುದಿತ್ತು. ಅದರಲ್ಲೇನಿದೆ? ಈಗ ನೀವು ಮಾಡಿತೋರಿಸಿದ್ದು ನಿಜವಾದ ಸಾಧನೆ. ಕೀಪಿಟಪ್’ ಅಂದರು.
॒॒॒॒॒॒॒॒॒
ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ? ಹೀಗೇನಾದರು ವಿಶೇಷಗಳು ಆಗಿತ್ತೆ?
-ಗಣೇಶ.
Comments
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
In reply to ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ? by shylaswamy
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?
ಉ: ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?