ಡೈರಿಯ ಕೆಲವು ಹಾಳೆಗಳು - ಭಾಗ ೧
ನಮಸ್ಕಾರ ಸ್ನೇಹಿತರೆ,
ಇತ್ತೀಚಿಗೆ ಒಂದು ಇಂಗ್ಲಿಷ್ ಬ್ಲಾಗ್ ಓದಬೇಕಾದರೆ ಈ ಕಥೆ ಅಲ್ಲಿ ಇತ್ತು. ಇದನ್ನು ಯಾರು ಬರೆದಿದ್ದಾರೆ ಅನ್ನೋದು ಗೊತ್ತಿಲ್ಲ, ಆದ್ರೆ ಈ ಕಥೆ ನಿಮ್ಮ ಮನಸ್ಸಿನ ಭಾವನೆಗಳ ಜೊತೆ ಖಂಡಿತ ಮಾತನಾಡುತ್ತೆ. ಓದುವ ಖುಷಿ ನಿಮಗಿರಲಿ :-)
ದಿನಾಂಕ : ೧೫-ಜನವರಿ
ಅವನು:
ಇವತ್ತು ಕಛೇರಿಯಲ್ಲಿ ಏನು ಕೆಲಸ ಇಲ್ಲದಿದ್ದರೂ ರಾತ್ರಿ ೮ ರ ತನಕ ಅಲ್ಲೇ ಇದ್ದೆ. ನನ್ನೆಲ್ಲ ಸಹೋದ್ಯೋಗಿಗಳು ಏನು ವಿಷಯ ಅಂತ ಹುಬ್ಬು ಹಾರಿಸಿದರು : ನಾನಿಲ್ಲಿ ಕಾಯುತ್ತಿರುವುದು ನನ್ನ ಯಾವುದೇ ಸ್ವಂತ ಕಾರ್ಯ ಅಥವ ಕಛೇರಿಯ ಕೆಲಸಕ್ಕಲ್ಲ. ನಾನು ಇಲ್ಲಿ ಕಾಯುತ್ತಿರುವುದಕ್ಕೆ ಕಾರಣ "ಸೆಕ್ರೆಟರಿ" - ನನ್ನ ೮ ಘಂಟೆ ಚಿಂಚವಾಡಿ ಬಸ್ ನಲ್ಲಿ ಬರುವಾಕೆ. ಸೆಕ್ರೆಟರಿ ಏನು ಅವಳ ನಿಜವಾದ ಹೆಸರೇನಲ್ಲ, ಅದು ನಾನು ಮತ್ತು ನನ್ನ ಗೆಳೆಯರು ಇಟ್ಟಿರುವ ಹೆಸರು. ನಿಜವಾಗಲೂ ನಾನು ಅವಳನ್ನು ಇಷ್ಟಪಡುತ್ತೇನೆ. ಅವಳೇನು ಐಶ್ವರ್ಯ ರೈ ಅಥವಾ ಪ್ರೀತಿ ಅಲ್ಲ, ನನಗೆ ಇಷ್ಟವಾಗಿದ್ದು ಅವಳ ಮುಗ್ಧತೆ ಮತ್ತು ಅವಳ ಸರಳತೆ.
ಕಳೆದ ೬ ತಿಂಗಳಿಂದ ಅವಳನ್ನು ಬಸ್ಸಿನಲ್ಲಿ ನೋಡುತ್ತಿದ್ದೇನೆ, ಕಚೇರಿಗೆ ಹೋಗುವಾಗ ಮತ್ತು ಬರುವಾಗ ಅದೇ ಕೆಲಸ. ನಾನು ಬಸ್ ಹತ್ತಿದ ತಕ್ಷಣ ನನ್ನ ಕಣ್ಣುಗಳು ಅವಳ ಒಂದು ನೋಟಕ್ಕಾಗಿ ಹುಡುಕುತ್ತವೆ. ನಂಗೆ ಯಾವತ್ತಿಗೂ ಗರ್ಲ್ ಫ್ರೆಂಡ್ ಇರಲ್ಲಿಲ್ಲ, ನನಗೆ ಅವರ ಜೊತೆಯೇನು ಸ್ನೇಹ ಮಾಡಬಾರಾದೆನ್ದೆನು ಇರಲಿಲ್ಲ, ಆದ್ರೆ ಅವ್ರು ಸಾಮಾನ್ಯವಾಗಿ tall-dark-handsome ಗುಣಗಳಿರುವ ಹುಡುಗರನ್ನ ಇಷ್ಟಪಡುತ್ತಾರೆ. ಅವುಗಳಲ್ಲಿ ನನ್ನ ಹತ್ತಿರ ಯಾವುದು ಇರಲ್ಲಿಲ್ಲ. ಅವಳ ಜೊತೆ ನನಗೇನು ಪ್ರೀತಿ ಪ್ರೇಮ ಇರಬೇಕು ಅಂತ ಇರಲ್ಲಿಲ್ಲ, ಕನಿಷ್ಠ ಸ್ನೇಹ, ಅದು ಸಾಧ್ಯವ?
ನನಗೆ ಅವಳ ಜೊತೆ ಮಾತಾಡಬೇಕಿದೆ, ಅವಳ ಜೊತೆ ಸ್ನೇಹ ಬೆಳೆಸಬೇಕೆಂದಿದೆ. ನನಗೆ ಅವಳ ಹೆಸರು ಗೊತ್ತು, ಅವಳ ಐ.ಡಿ. ಕಾರ್ಡ್ ನೋಡಿ ಕಂಡುಹಿಡಿದಿದ್ದು. ಆದ್ರೆ ಅವಳ ಜೊತೆ ಮಾತಾಡುವಷ್ಟು ಧೈರ್ಯ ನನ್ನಲ್ಲಿಲ್ಲ. ಅವಳು ನನ್ನ ಮುಖವನ್ನ ನೋಡಿದಾಳೋ ಇಲ್ವೋ ಅದು ಕೂಡ ಗೊತ್ತಿಲ್ಲ. ಇಲ್ಲಿ ನನಗೆ ಯಾರು ಸಹಾಯಕ್ಕೆ ಬರೋದಿಲ್ಲ ಅನ್ನೋದು ಗೊತ್ತು. ಕನಿಷ್ಠ ನಮ್ಮಿಬ್ಬರಿಗೂ ಗೊತ್ತಿರುವ ಯಾರಾದ್ರೂ ಸ್ನೇಹಿತರು ನಮ್ಮ ಪರಿಚಯ ಮಾಡಿಸುವತನಕ ಹೀಗೆ ..........
ಅವಳು:
ನನ್ನ ಕಛೇರಿಯ ಬಸ್ಸಿನಲ್ಲಿ ಒಬ್ಬ ಇದ್ದಾನೆ, ಅವನ ಹೆಸರು ನಿರಂಜನ ಅಂತ. ಅವ್ನು ನನ್ನ ಇಷ್ಟ ಪಡ್ತಾನೆ ಅಂತ ಅನ್ನಿಸುತ್ತೆ, ನಾನಷ್ಟೇ ಅಲ್ಲ ನನ್ನ ಸ್ನೇಹಿತರು ಕೂಡ ಅವ್ನು ನನ್ನ ದುರುಗುಟ್ಟಿಕೊಂಡು ನೋಡೋದನ್ನ ನನಗೆ ಹೇಳಿದ್ದಾರೆ. ಅವ್ನು ಬಸ್ ಹತ್ತಿದರೆ, ಖಾಲಿ ಜಾಗ ಹುಡುಕುವ ಮುನ್ನ ಇಡಿ ಬಸ್ಸಿನಲ್ಲಿ ನನ್ನ ಹುಡುಕುತ್ತಾನೆ. ಏನೋ ಗೊತ್ತಿಲ್ಲ, ಅದ್ರು ಅದು ನಂಗೆ ಇಷ್ಟ ಅನ್ನಿಸುತ್ತೆ. ನಾವು ಯಾರನ್ನೋ ಪ್ರೀತಿಸ್ತೀವಿ ಅನ್ನೋದಕ್ಕಿಂತ ಯಾರೋ ನಮ್ಮನ್ನ ಪ್ರೀತಿಸ್ತಿದಾರೆ ಅನ್ನೋ ಭಾವನೆನೆ ಹೆಚ್ಚು ಸಂತೋಷ ಕೊಡುತ್ತೆ ಅಲ್ವ?
ಇಲ್ಲಿವರೆಗೂ ನಾನು ಯಾರ ಜೊತೆಗೂ ಆಫ್ಫೈರ್ ಇಟ್ಟುಕೊಂಡಿಲ್ಲ. ನಾನು ಯಾರನ್ನು ಪ್ರೀತಿಸಿಲ್ಲ ಅಂತ ಅಲ್ಲ, ನನ್ನ ಕಾಲೇಜಿನಲ್ಲಿದ್ದ ಒಬ್ಬ ಹುಡುಗನನ್ನ ತುಂಬ ಪ್ರೀತಿಸುತ್ತಿದ್ದೆ. ಆದ್ರೆ ಅವ್ನು ನನ್ನ ಕಡೆ ಕಣ್ಣೆತ್ತಿ ಕೂಡ ನೋಡಲ್ಲಿಲ್ಲ, ಅವನಿಗೆ ನಾನು ಇಷ್ಟ ಆಗ್ತಿರ್ಲಿಲ್ಲ, ಕಾರಣ ನಾನು ಅಷ್ಟು ಸುಂದರಿ ಅಲ್ಲ ಮತ್ತೆ ಅವ್ನಿಗೆ ನನಗಿಂತ ಚೆನ್ನಾಗಿರೋ ಹುಡುಗಿ ಬೇಕಾಗಿತ್ತು.
ಈ ಹುಡುಗ ನಿರು, ಅವನ ಗೆಳೆಯರು ಅವನನ್ನ ಹಾಗೆ ಕರೆಯೋದು, ಅದನ್ನ ಒಂದು ಸಾರಿ ಬುಸ್ಸಿನ್ನಲಿ ಕೇಳಿಸಿಕೊಂಡಿದ್ದೆ; ಅವನಿಗೆ ನನ್ನಲ್ಲಿ ಆಸಕ್ತಿ ಇರೋ ಹಾಗಿದೆ, ಅದು ಪ್ರೀತಿನೆ ಅಂತ ಅಲ್ಲದಿದ್ದರೂ ಅವನ ಜೊತೆ ಸ್ನೇಹ ಮಾಡಬಹುದು. ಈ ಹುಡುಗ ಸಂಭಾವಿತನ ತರಹ ಕಾಣಿಸುತ್ತಾನೆ, ನನಗೆ ಅವನ ಜೊತೆ ಸ್ನೇಹ ಮಾಡೋಕೆ ಇಷ್ಟ, ಆದ್ರೆ ಹೇಗೆ ಮುಂದುವರಿಲಿ?
ಎಷ್ಟಾದ್ರೂ ಅವ್ನು ಹುಡುಗ, ಅವನೇ ಮೊದಲಿಗೆ ಮುಂದೆ ಬರಬೇಕು.... ನಾನಲ್ಲ
Comments
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೧ by ASHOKKUMAR
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೧ by anil.ramesh
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೧ by ASHOKKUMAR
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೧ by anil.ramesh
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೧ by Chetan.Jeeral
ಉ: ಡೈರಿಯ ಕೆಲವು ಹಾಳೆಗಳು - ಭಾಗ ೧