ಡೈರಿಯ ಕೆಲವು ಹಾಳೆಗಳು - ಭಾಗ ೨
ದಿನಾಂಕ: ೧೬-ಜನವರಿ
ಅವನು: ನೀನೆ ಅವಳನ್ನ ಹೋಗಿ ಮಾತನಾಡಿಸು ಮತ್ತು ನೀನೆ ಅವಳ್ಳನ್ನ ಪರಿಚಯ ಮಾಡಿಕೊ ಅಂತ ನನ್ನ ಗೆಳೆಯ ಸಲಹೆ ನೀಡಿದ. ಆದ್ರೆ ಅದು ಅಷ್ಟು ಸುಲಭವಲ್ಲ. ಇದೇನು ಕಾಲೇಜ್ ಅಲ್ಲ, ಅವಳೇನಾದ್ರೂ ಮೇಲಧಿಕಾರಿಗಳಿಗೆ ದೂರು ಕೊಟ್ರೆ? ಇಲ್ಲ ನಾನು ರಿಸ್ಕ್ ತಗೊಳಲ್ಲಪ್ಪ. ಓ ದೇವರೇ ನನಗೆ ಸಹಾಯ ಮಾಡಬಾರದ ಪ್ಲೀಸ್?
ಅವಳು: ನೀನು ಅವನಿಗೆ ಏನಾದ್ರೂ ಸೂಚನೆ ಕೊಡು, ನೀನು ಅವನ ಜೊತೆ ಗೆಳೆತನ ಬೆಳೆಸೋಕೆ ತಯಾರಾಗಿದ್ದೀಯ ಅಂತ ಹೇಳೋಕೆ. ನನಗನ್ನಿಸುತ್ತೆ ಅವನು ಮುಂದುವರೆಯೋಕೆ ಹೆದರ್ತಿದಾನೆ ಅಂತ. ನಾಳೆ ಅವನು ಬಸ್ಸಿನಲ್ಲಿ ಕಂಡಾಗ ಒಂದು ಸುಂದರ ನಗೆಯನ್ನ ಕೊಡ್ತೀನಿ. ಇದು ಅವನಿಗೆ ಅರ್ಥ ಆಗುತ್ತೆ ಅಂದುಕೋತೀನಿ. ದೇವರೇ ನನಗೆ ಸಹಾಯ ಮಾಡಬಾರದ ಪ್ಲೀಸ್?
ದೇವರು: ನಾನೀಗ ನಿಜವಾಗ್ಲು ಇಲ್ಲಿ ಬೇಕಾ ನೀವೇ ಹೇಳಿ? ಈ ಎರಡು ಮಾನವರು ತಮಗೇ ಪ್ರಪಂಚದ ಎಲ್ಲಾ ಕಷ್ಟಗಳು ಬಂದವರ ಹಾಗೆ ವರ್ತಿಸ್ತಿದಾರೆ. ನನಗಲ್ದೆ ಇದ್ರೂ ನಾನು ನಿಮ್ಮೆಲ್ಲರ ಜೀವನ ಇಷ್ಟು ಸರಳವಾಗಿ ರೂಪಿಸಿದ್ದೇನೆ, ಜೊತೆಗೆ ಇರ್ಲಿ ಅಂತ ಸ್ವಲ್ಪ ಭಾವನೆಗಳನ್ನು ಬೆರೆಸಿದೆ. ಇವಾಗ ನೋಡಿ ನೀವುಗಳು ಅದನ್ನೆಲ್ಲಾ ಎಷ್ಟು ಜಟಿಲ ಮಾಡಿಕೊಂಡಿದ್ದೀರ. ನಾನು ದೇವರು ಅನ್ನೋ ಕಾರಣಕ್ಕೆ ಇವಾಗ ಮಧ್ಯ ಪ್ರವೇಶಿಸಿ ಏನಾದ್ರೂ ಚಮತ್ಕಾರ ಮಾಡಬಹುದು ಅಂತ ನಿರಿಕ್ಷಿಸುತ್ತಿದ್ದಿರ, ಆದ್ರೆ ಇಲ್ಲ; ನಾನು ಮಧ್ಯ ಪ್ರವೆಶಿಸೋದಿಲ್ಲ. ನಾನೀ ಜಗತ್ತನ್ನ ಕೆಲವು ನಿಯಮಗಳಂತೆ ರೂಪಿಸಿದ್ದೇನೆ ಮತ್ತು ಈ ಜಗತ್ತು ಅದರಂತೆ ನಡೆಯುತ್ತಿದೆ. ಇವಾಗ ನಾನು ಮಧ್ಯ ಪ್ರವೇಶಿಸಿ, ನನ್ನದೇ ನಿಯಮಗಳನ್ನ ಮುರಿದು ಈ ಜಗತ್ತಿನ ಸ್ಥಿತಿಯನ್ನ ಪಲ್ಲಟಿಸಬೇಕೆ? ಇಲ್ಲ ನಾನದನ್ನು ಮಾಡೋಲ್ಲ.
Comments
ಉ: ಡೈರಿಯ ಕೆಲವು ಹಾಳೆಗಳು - ಭಾಗ ೨
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೨ by ASHOKKUMAR
ಉ: ಡೈರಿಯ ಕೆಲವು ಹಾಳೆಗಳು - ಭಾಗ ೨
ಉ: ಡೈರಿಯ ಕೆಲವು ಹಾಳೆಗಳು - ಭಾಗ ೨
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೨ by savithasr
ಉ: ಡೈರಿಯ ಕೆಲವು ಹಾಳೆಗಳು - ಭಾಗ ೨
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೨ by Chetan.Jeeral
ಉ: ಡೈರಿಯ ಕೆಲವು ಹಾಳೆಗಳು - ಭಾಗ ೨
ಉ: ಡೈರಿಯ ಕೆಲವು ಹಾಳೆಗಳು - ಭಾಗ ೨