ಒಂದು ಬುಧವಾರ.
’ಎ ವೆಡ್ನೆಸ್ಡೇ’ - ಒಂದು ಪರ್ಫೆಕ್ಟ್ ಥ್ರಿಲ್ಲರ್. ಕೇವಲ ಒಂದೂವರೆ ಘಂಟೆಯಲ್ಲಿ ಮುಗಿದು ಹೋಗುವ ಸಿನಿಮಾ. ಯಾವುದೇ ಅನಗತ್ಯ ಹಾಡು, ಕುಣಿತ, ಮಸಾಲೆಗಳಿಲ್ಲದೆ ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಒಂದು ಕಥೆಯನ್ನು ಹೆಣೆಯಲಾಗಿದೆ. ಹಿನ್ನೆಲೆಯ ಸೌಂಡ್ ಎಫೆಕ್ಟ್ಸ್ ಬಹಳ ಚೆನ್ನಾಗಿದೆ. ಮುಂಬೈನಲ್ಲಿ ನಡೆದ ರೈಲು ಸ್ಪೋಟದ ಸುತ್ತ ಹೆಣೆದಿರುವ ಕಥೆ ಇದು. ಸರಣಿ ಸ್ಫೋಟಗಳಿಂದ ಬೇಸತ್ತ ವ್ಯಕ್ತಿಯೊಬ್ಬ ಪೋಲೀಸರಿಗೆ ಬುದ್ಧಿಕಲಿಸಲೋಸುಗ ತಾನೇ ಬಾಂಬ್ ಇಟ್ಟು ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾನೆ. ತನ್ನ ಪ್ಲಾನನ್ನು ಕ್ಷಣಕ್ಷಣಕ್ಕೂ ತಿಳಿದುಕೊಳ್ಳಲು ಟಿ.ವಿ ವಾಹಿನಿಯವರನ್ನೂ ಪೋಲೀಸರ ಹಿಂದೆ ಬಿಡುತ್ತಾನೆ. ಅವನನ್ನು ಪತ್ತೆ ಮಾಡುವಲ್ಲಿ ಪೋಲೀಸ್ ಇಲಾಖೆ ಕಡೆಗೂ ವಿಫಲವಾಗುತ್ತದೆ. ಆದರೆ ಆ ವ್ಯಕ್ತಿ ಒಂದು ಸಾಮಾಜಿಕ ಕಳಕಳಿಗಾಗಿ, ಪೋಲೀಸರಿಗೆ ಸಂದೇಶ ನೀಡುವ ಸಲುವಾಗಿ ಇಷ್ಟೆಲ್ಲಾ ಮಾಡುತ್ತಿರುತ್ತಾನೆ. ನಾಸಿರುದ್ಧೀನ್ ಷಾ ಮತ್ತು ಅನುಪಮ್ ಖೇರ್ ಇವರುಗಳ ಅಭಿನಯ ಚೆನ್ನಾಗಿ ಮೂಡಿಬಂದಿದೆ.
Rating
Comments
ಉ: ಒಂದು ಬುಧವಾರ.
ಉ: ಒಂದು ಬುಧವಾರ.
ಉ: ಒಂದು ಬುಧವಾರ.