ಹೀಗೆ ಒಂದು ಮಾತುಕತೆ(ಹೆಂಗಳೆಯರ)

ಹೀಗೆ ಒಂದು ಮಾತುಕತೆ(ಹೆಂಗಳೆಯರ)

ನಾನು ಪ್ರತೀ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡ್ತೀನಿ
ಹಾಗಾಗಿ ಎಂಟು ಮುತ್ತೈದೆಯರನ್ನ ಅರಿಸಿನ ಕುಂಕುಮಕ್ಕೆ ಕರೆಯಬೇಕಾಗುತ್ತದೆ.
ಹೋದ ವಾರ ನಡೆದ ಮಾತು ಕತೆ ಗಮನಿಸಿ
(ಹೆಸರುಗಳನ್ನು ಬದಲಾಯಿಸಲಾಗಿದೆ)

ನಾನು "ಯಾಕೆ ಲೇಟ್ ಆಯ್ತಾ"

ಸರೋಜ" ಹೌದು ಮನೇಲಿ ತುಂಬಾ ಕೆಲಸ ಇತ್ತಲ್ಲ . ಪಾತ್ರೆ ಎಲ್ಲಾ ತೊಳೆದು ಬರೋ ಅಷ್ಟರಲ್ಲಿ ಸಾಕಾಗಿ ಹೋಯಿತು"
ವೇಣಿ "ಯಾಕೆ ನಿಮ್ಮನೇಲಿ ಕೆಲಸದೋಳಿದ್ದಳಲ್ಲಾ"
ಸರೋಜಾ " ಅಯ್ಯೋ ಅವಳ ಧಿಮಾಕೇನು ಗೊತ್ತಾ ತಿಂಗಳಿಗೆ ಎರೆಡು ಸಾವಿರ ಕೊಟ್ಟರೂ ಬರಲ್ಲಾ ಅಂತಾಳೆ"
ವೇಣಿ " ಹೌದೌದು ಈಗೀಗ ಈ ಸಾಫ್ಟ್‌ವೇರ್ ಕಂಪೆನಿಯೋರು ಮಂಥ್ಲಿ ತುಂಬಾ ದುಡ್ಡು ಕೊಟ್ಟೂ ನಮ್ಮಂಥೋರ ಜೀವನಾನ ನರಕ ಮಾಡ್ತಾರೆ" (ನನ್ನ ಮುಖ ನೋಡಿಕೊಂಡು)
ಕಮಲ " ಅಯ್ಯೊ ಅವರದೇನಂತೀರಾ ಬಾಳು ಬರೀ ತಲೆ ನೋವಂತಾರೆ. ಕಂಪೆನೀಲಿ ಬರೀ ಕೆಲಸ ಮನೇಲಿ ಹೆಂಡತಿ ಜೊತೆ ಒಂದು ಸರಸ ಇಲ್ಲ ಸಲ್ಲಾಪ ಇಲ್ಲ . ನಮ್ಮನೇಲಿ ಬಾಡಿಗೆಗೆ ಇದ್ದಾರಲ್ಲಾ ಗಂಡ ವಿಪ್ರೋನಲ್ಲಿ ಕೆಲಸಮಾಡ್ತಾನೆ , ಹೆಂಡತಿ ಯಾವದೋ ಕಾಲೆ ಸೆಂಟರ್ನಲ್ಲಿ ಕೆಲಸ ಮಾಡ್ತಾಳೆ . ಅವನು ರಾತ್ರಿ ಬರ್ತಾನೆ ಇವಳು ರಾತ್ರಿ ಹೋಗ್ತಾಳೆ"
ವೇಣಿ " ಅಯ್ಯೋ ನಿಮಗೆ ವಿಷ್ಯ ಗೊತ್ತಿಲ್ಲ ಅನ್ಸುತ್ತೆ ಅವರಿಬ್ಬರೂ ಗಂಡ ಹೆಂಡತಿ ಅಲ್ಲ . ಸುಮ್ಮನೆ ಒಟ್ತಿಗೆ ಇದಾರಷ್ಟೆ"
ಸರೋಜಾ " ಹೌದಾ . ಅಬ್ಬಾ ಈಗೀಗಂತೂ ಪ್ರಪಂಚ ಏನೇನಾಗುತ್ತೋ ಗೊತ್ತಿಲ್ಲ. ಹೌದು ಅವರಿಬ್ಬರೂ ಮದುವೆ ಆಗ್ದೆ ಒಟ್ತಿಗೆ ಇದಾರಲ . ಅವರ ಅಪ್ಪ ಅಮ್ಮ ಏನೂ ಅನ್ನಲ್ಲ್ವಾ?"
ಪರಿಮಳ" ಅಯ್ಯೋ ಬಿಡ್ರಿ ಇದನ್ನೆಲಾ ಅವರಪ್ಪಮ್ಮನಿಗೆ ಹೇಳ್ತಾರಾ ನೀವೊಳ್ಳೆ"
ವೇಣಿ " ಇನ್ನೆಷ್ಟು ದಿನಾ ರಿ ಇವರ ಆಟ ಆಗ್ಲೇ ಅಮೇರಿಕಾ ಗುಳಮ್ ಅಂತಿದೆ . ಆಮೇಲೆ ಇವರೆಲ್ಲಾ ಬಿಕ್ಷೆ ಬೇಡ್ಬೇಕಾಗುತ್ತೆ"
ಕಮಲ " ಅದೇನೂ ನ್ಯೂಕ್ಲಿಯರ್ ಡೀಲ್ ಮಾಡಿ ಇಂಡಿಯಾನ ಮತ್ತೆ ವಶ ಮಾಡ್ಕೊತ್ತಾರೆ ಅಂತೀದಾರಲಾ ರೀ"
ಸರೋಜಾ "; ಅದಿರಲಿ ಅದೇನೂ ಬ್ರಹ್ಮಾಂಡ್ಸ್ ರಹಸ್ಯ್ಸ ತಿಳ್ಕೊಳ್ಳೊಕೆ ಅದೇನೊ ಎಕ್ಸಪರಿಮೆಂಟ ಮಾಡ್ತಾ ಇದಾರಲ್ಲ. ಅವಾಗ ಪ್ರಪಂಚಾನೆ ಪ್ರಳಯಾ ಅಗುತ್ತಂತೆ "
ವೇಣಿ" ಅಯ್ಯೋ ಇನ್ನು ನಾಲ್ಕ್ಕು ವರ್ಷಕ್ಕೆ ದೊಡ್ಡ ಪ್ರಳಯಾ ಅಗುತ್ತಲ್ಲ .ಅವಾಗ ಯಾರು ಏನೂ ಮಾಡಕ್ಕಾಗಲ್ಲ
ಸರೋಜಾ "ರೂಪ ಸ್ವಲ್ಪ ಬೇಗ ಕೊಡ್ತೀರಾ? ಮನೆಲಿ ಕೆಲ್ಸ ಇದೆ"

ನಾನು "ಆಗ್ಲೆ ರೆಡಿ ಏನೂ ಮಾತಾಡ್ತಾ ಇದೀರಲ್ಲ ಅಂತ ಕೇಳಿಸಿಕೊಳ್ತಾ ಇದ್ದೆ"

(ಅಬ್ಬಾ ಎಷ್ಟೊಂದು ವಿಷ್ಯಗಳು ಕೇವಲ ಹತ್ತು ನಿಮಿಷದಲ್ಲಿ ಹಾದು ಹೋದವು . ನಿಜಕ್ಕೂ ಗಂಡಸರು ಸೇರಿದರೆ ಇಷ್ಟೊಂದು ಮಾತಾಗುತ್ತಿರಲಿಲ್ಲ ಅಲ್ಲವಾ?)

Rating
No votes yet

Comments