ಕನ್ನಡ ಸಿನಿಮಾ ನೋಡಬೇಕೆ?

ಕನ್ನಡ ಸಿನಿಮಾ ನೋಡಬೇಕೆ?

Comments

ಬರಹ
ಕನ್ನಡದಲ್ಲಿ ಕತೆಗಳೇ ಇಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಬರೆಯುವವರಿಲ್ಲ. ಹೀಗೆ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತಾ ಹೋಗುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಸಿನಿಮಾಗಳಿಗೆ ಅಗತ್ಯವಿರುವ ಕತೆಗಳ ಕೊರತೆ ಇದೆಯೇ? ಗಾಂಧಿನಗರದ ದೊಡ್ಡ ಸಮಸ್ಯೆ ಎಂದರೆ ಯಶಸ್ಸಿನ ಹಿಂದೆ ಸಾಗುವುದು. ಪ್ರತೀ ಯಶಸ್ಸೂ ತನ್ನಷ್ಟಕ್ಕೇ ವಿಶಿಷ್ಟ ಎನ್ನುವುದನ್ನು ಗಾಂಧಿನಗರ ಒಪ್ಪುವುದಿಲ್ಲ. ತೆಲುಗು ರಿಮೇಕ್ ಸಿನಿಮಾ ಒಂದು ಯಶಸ್ವಿಯಾದರೆ ಕನ್ನಡದ ನಿರ್ಮಾಪಕರೆಲ್ಲಾ ದಂಡು ದಂಡಾಗಿ ಆಂಧ್ರಪ್ರದೇಶ ಯಾತ್ರೆ ಆರಂಭಿಸುತ್ತಾರೆ. ಕೊನೆಗೊಮ್ಮೆ ಅವೆಲ್ಲಾ ಸೋಲುತ್ತವೆ. ಆಗ ಜ್ಞಾನೋದಯವಾದಂತೆ ವರ್ತಿಸುವ ಈ ನಿರ್ಮಾಪಕರು ಕನ್ನಡದಲ್ಲಿ ಕತೆಗಳನ್ನು ಹುಡುಕುವುದಿಲ್ಲ ಬದಲಿಗೆ ಸೀದಾ ತಮಿಳು ಸಿನಿಮಾಗಳನ್ನು ನೋಡತೊಡಗುತ್ತಾರೆ. ಹೀಗೆ ಮಲೆಯಾಳಂ, ಹಿಂದಿ ಎಲ್ಲಾ ಮುಗಿಯುವ ವೇಳೆಗೆ ಕೆಲವು ನಿರ್ಮಾಪಕರು ಚಿತ್ರ ನಿರ್ಮಿಸಲಾರದ ಮಟ್ಟಕ್ಕೆ ತಲುಪಿರುತ್ತಾರೆ. ಈ ಹಂತದಲ್ಲಿ ಕೆಲವರು 'ಸ್ಟ್ರೇಟ್ ಸಬ್ಜೆಕ್ಟ್' ಮಹಾನುಭಾವರು ಪ್ರವೇಶಿಸುತ್ತಾರೆ. ಇವರು ತಮಿಳು, ಮಲೇಯಾಳಂ ಇಲ್ಲವೇ ತೆಲುಗು ಸಿನಿಮಾಗಳ ಸಿ.ಡಿ. ನೋಡಿ ಒಂದು ಚಿತ್ರಕತೆ ರಚಿಸುತ್ತಾರೆ. ಇದಕ್ಕೆ ಪ್ರಶಸ್ತಿ ಬರಬೇಕೆಂದು ಆಶಿಸುತ್ತಾರೆ. ಇಷ್ಟೆಲ್ಲಾ ಆದ ಮೇಲೇ ಕನ್ನಡದ ಪ್ರೇಕ್ಷಕನನ್ನು ಬಯ್ಯುವ ಕಾರ್ಯಕ್ರಮ ಇರುತ್ತದೆ. ಕನ್ನಡಿಗರು ಸದಭಿರುಚಿಯ ಸಿನಿಮಾ ನೋಡುವುದಿಲ್ಲ ಎಂಬ ಪಲ್ಲವಿಯನ್ನು ಆಲಾಪಿಸಲಾಗುತ್ತದೆ. ಕನ್ನಡದಲ್ಲಿ ಸೋತ ಸದಭಿರುಚಿಯ ಚಿತ್ರಗಳನ್ನು ನೋಡಿದರೆ ಅವೇಕೆ ಸೋತಿವೆ ಎಂಬುದು ಅರ್ಥವಾಗುತ್ತದೆ. ಕೂದುವಳ್ಳಿ ಚಂದ್ರಶೇಖರ್ ಅವರು ಎಂ.ಕೆ. ಇಂದಿರಾ ಅವರ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಪೂರ್ವಾಪರ ಎಂಬ ಚಿತ್ರ ನಿರ್ಮಿಸಿದ್ದರು. ಇದು ಯು. ಎಸ್ ಗೆ ಹೊಸತಾಗಿ ಹೋಗುವವರಿಗೆ ತೋರಿಸಲು ನಿರ್ಮಿಸಿದ ಡಾಕ್ಯುಮೆಂಟರಿಯಂತೆ ಇತ್ತು. ಕನ್ನಡ ಸಿಂಹವೊಂದು ನಟಿಸುವ ಚಿತ್ರಗಳಂತೂ ಸದಭಿರುಚಿಯ ಮೌಲ್ಯಗಳನ್ನಷ್ಟೇ ಇಟ್ಟು ಕೊಂಡಿರುತ್ತದೆ. ಇದರಲ್ಲಿ ಸಿನಿಮಾವೇ ಇರುವುದಿಲ್ಲ. ಇಂಥ ಚಿತ್ರಗಳನ್ನು ಕನ್ನಡಿಗರೇಕೆ ಪ್ರೋತ್ಸಾಹಿಸಬೇಕು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet