ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!

ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!

ನಿಮಗೆ ಖ್ಯಾತ ವ್ಯಂಗ್ಯಚಿತ್ರಕಾರರಾದ ಪ್ರಕಾಶ್ ಶೆಟ್ಟಿಯವರ ಪತ್ರ

(ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.
ಟೈಮ್ಸ್ ಆಫ್ ಡೆಕ್ಕನ್, ಚಿತ್ರತಾರ,ಮುಂಗಾರು,ದ್ ವೀಕ್ ಪತ್ರಿಕೆಗಳಿಗೆ ತಮ್ಮ
ಚಿತ್ರಗಳಿಂದ ಮೆರುಗು ನೀಡಿದ ಪ್ರಕಾಶ್, ಈಟಿವಿಯಲ್ಲಿ "ಪಂಚ್" ಮೂಲಕ ಪ್ರಸಿದ್ಧರು.)

------------------------------------------------------------------------------

ಆತ್ಮೀಯ ಗೆಳೆಯರೇ, prakash

ನಾನು ತರಲೆ ಹುಳುವೊಂದನ್ನು ನನ್ನ ತಲೆಯೊಳಗೆ ಹಾಕಿಬಿಟ್ಟಿದ್ದೇನೆ. ಆ ಕಾರಣ
"ವಾರೆಕೋರೆ" ಎಂಬ ಹಾಸ್ಯ ಪತ್ರಿಕೆಯನ್ನು ಹುಟ್ಟುಹಾಕುವ ಹುಚ್ಚು ಹಿಡಿದೆದೆ.
ಕಚಗುಳಿ,ಚುಚ್ಚು,ಲೇವಡಿಗಳನ್ನು ವ್ಯಂಗ್ಯಚಿತ್ರ,ನಗೆಬರಹ,ಫೋಟೊ ಮತ್ತು ಕ್ಯಾರಿಕೇಚರ್‌ಗಳ
ಮೂಲಕ ನೀಡುವ ದುರುದ್ದೇಶ ಇಟ್ಟುಕೊಂಡಿದ್ದೇನೆ. "ಕಾರ್ಟೂನ್ ಕಲಿ" ಎನ್ನುವ ಮಾಸಿಕದ
ಬೋನಸ್. ನಿಮ್ಮಂತಹ ಹಾಸ್ಯಪ್ರಜ್ಞಾವಂತರು "ವಾರೆಕೋರೆ" ಕುಟುಂಬದಲ್ಲಿ
ಭಾಗಿಯಾಗಬೇಕೆನ್ನುವುದು ನನ್ನ ಆಶಯ. ಯಾಕೆಂದರೆ ಇದು ಚಂದಾದಾರರ ಆಧಾರದ ಮೇಲೆ ಮಾಡಬೇಕಾದ
ಪತ್ರಿಕೆ.
ಚಂದಾದಾರರನ್ನು ಗಳಿಸಲು ಈ ಕೆಳಕಂಡ ಯೋಜನೆಗಳನ್ನು ಹಾಕಿಕೊಂಡಿದ್ದೇನೆ.
*ನಿಮ್ಮ ವ್ಯಂಗ್ಯಚಿತ್ರ ಪ್ರದರ್ಶನ(ನಿಮ್ಮೂರಿನ ಇತರ ವ್ಯಂಗ್ಯಚಿತ್ರಕಾರರನ್ನು ಸೇರಿಸಿ).
*ನನ್ನ ಕ್ಯಾರಿಕೇಚರ್ ಶೋ(ಒಂದು ಗಂಟೆ ಅವಧಿ).prakash shetty
*ವಾರೆಕೋರೆಯ ಪ್ರಾಯೋಗಿಕ ಸಂಚಿಕೆ ಮಾರಾಟಕ್ಕೆ.prakash
*ಉಚಿತ ಕ್ಯಾರಿಕೇಚರ್ಸ್: ವಾರ್ಷಿಕ ಚಂದಾಹಣ ರೂ.200/-ದೊಂದಿಗೆ 2 ಕ್ಯಾರಿಕೇಚರ್ಸ್ ಉಚಿತ.
ಈ ಹುಚ್ಚು ಕನಸು ನನಸಾಗಲು ನಿಮ್ಮ ಮತ್ತು ನಿಮ್ಮೂರಿನ ವ್ಯಂಗ್ಯಚಿತ್ರಕಾರರ ಮುತುವರ್ಜಿ
ಅಗತ್ಯ. ಕ್ಲಬ್,ಸಂಘ-ಸಂಸ್ಥೆಗಳ ಕಿವಿಗೆ ಹಾಕಿ. ಉಚಿತವಾಗಿ "ವಾರೆಕೋರೆ ನಗೆಹಬ್ಬ"
ಕಾರ್ಯಕ್ರಮ ನೀಡುವ ಬಗ್ಗೆ ಹೇಳಿ. ಇಂತಹ ಯೋಜನೆಗೆ ರೂಪ ಕೊಡಲು ನಿಮಗೆ ಸಾಧ್ಯವೇ?
"ವಾರೆಕೋರೆ" ಪತ್ರಿಕೆಗೆ ಇತರ ಯೋಜನೆಗಳಿವೆ.ವ್ಯಂಗ್ಯಚಿತ್ರಕಾರರನ್ನು ಆರ್ಥಿಕವಾಗಿ
ಬೆಳೆಸುವಂತಹ ಈ ಯೋಜನೆಗಳ ಬಗ್ಗೆ ಮುಂದೆ ಮಾಹಿತಿ ನೀಡುವೆ. ಒಟ್ಟಿನಲ್ಲಿ ಈ ಹಾಸ್ಯ
ಪತ್ರಿಕೆ ಕನ್ನಡ
ಪತ್ರಿಕೋದ್ಯಮಕ್ಕೊಂದು ಸುಂಟರಗಾಳಿಯಾಗಬೇಕು.


ಪ್ರಕಾಶ್ ಶೆಟ್ಟಿ,ಕಾರ್ಟೂನಿಸ್ಟ್

--------------------------------------------------------------------------

ಮಿಂಚಂಚೆ: prakashetty@gmail.com

---------------------------------------------------------------------------

prakash

Rating
No votes yet

Comments