ಸ್ವಲ್ಪ ನಗಿ

ಸ್ವಲ್ಪ ನಗಿ

ಗುಂಡ ಪರೀಕ್ಷೆ ಬರಿಯೋದಕ್ಕೆ ಕಾಲೇಜಿಗೆ ಬಂದ, ಬೆಂಕಿ ಆಕಸ್ಮಿಕ ಸಂಭವಿಸಿ ಪ್ರಶ್ನೆಪತ್ರಿಕೆಗಳಿದ್ದ ಕೊಠಡಿ ಸುಟ್ಟು ಸಂಪೂರ್ಣ ಭಸ್ಮವಾಯಿತು. ಏನು ಮಾಡುವುದೆಂದು ಪ್ರಿನ್ಸಿಪಾಲ್, ಲೇಚ್ರರ್ಸ್ ಗಳು ಮಾತನಾಡುತ್ತಿದ್ದರು, ಗುಂಡ ಅವರ ಹತ್ತಿರ ಬಂದ.
ಗುಂಡ: ಎಂತಾ ಕೆಲ್ಸ ಆಯ್ತು ಸಾರ್......ಪರೀಕ್ಷೆಗೆ ತೊಂದರೆ ಆಗತ್ತೆ ಅಂತ ಟೆನ್ಷನ್ ಮಾಡಿಕೊಳ್ಳಬೇಡಿ. ನನ್ನ ಹತ್ರ ಕೊಠಡಿಯಲ್ಲಿ ಇದ್ದ ಎಲ್ಲಾ ಪ್ರಶ್ನೆಪತ್ರಿಕೆಗಳ ಜೆರಾಕ್ಸ್ ಕಾಪಿ ಇದೆ. ತಗೊಂಡ್ ಬರ್ಲಾ ? :)

ಉಪಾದ್ಯಾಯರು ಸ್ಕೂಲಲ್ಲಿ ಪಾಠ ಮಾಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳು ಗಮನವಿಟ್ಟು ಪಾಠಕೇಳುತ್ತಿದ್ದರು. ಆದರೆ ಕಡೆಯ ಬೆಂಚಿನಲ್ಲಿ ಕೂತಿದ್ದ ಹುಡುಗ ಒಬ್ಬ ನಿದ್ದೆ ಮಾಡುತ್ತಿದ್ದ.
ಉಪಾದ್ಯಾಯ: ಲೇ ಗುಂಡಾ ನಿನ್ನ ಪಕ್ಕದಲ್ಲಿ ಕೂತಿರುವವನು ನಿದ್ದೆ ಮಾಡುತ್ತಿದ್ದಾನೆ..... ಎಬ್ಬಿಸು.....
ಗುಂಡ: ಆಗೋಲ್ಲ ಸಾರ್ ..
ಉಪಾದ್ಯಾಯ: ಯಾಕೋ ಕೊಬ್ಬ ?
ಗುಂಡ: ಮಲಗಿಸೋಕೆ ನೀವು..... ಎಬ್ಬಿಸೋಕೆ ನಾನ ..... :)

ಗುಂಡ: 'ಮದುವೆಯಾದದ್ದೇ ಕೊನೆ, ಸುಖ ಸಂತೋಷ ಮಣ್ಣು ಪಾಲಾಯಿತು
ಸ್ನೇಹಿತ: ಒಂದು ಅಪೇರ್ ಇಟ್ಟುಕೋ ಕಳೆದ ಸುಖ ಮರಳಿ ಸಿಗತ್ತೆ ಅಂದ
ಗುಂಡ: ಹೆಂಡತಿಗೆ ಗೊತ್ತಾದ್ರೆ?
ಸ್ನೇಹಿತ: ಗುಗ್ಗು ಕಣೋ ನೀನು. ಇನ್ನೂ ಯಾವ ಕಾಲದಲ್ಲಿದ್ದಿಯಾ? ಹೆಂಡತಿಗೆ ವಿಷಯ ತಿಳಿಸಿಬಿಡು. ಏನಿದ್ರು ಸ್ಟ್ರೇಟ್ ಅಂಡ್ ಫಾರ್ವರ್ಡ್ ಆಗಿರಬೇಕು ಗೊತ್ತಾ?.....
ಗುಂಡನ ಸ್ನೇಹಿತ ಹೇಳಿಕೊಟ್ಟ ಡೈಲಾಗನ್ನೆ ಚಾಚು ತಪ್ಪದೇ ಹೆಂಡತಿಯ ಮುಂದೆ ಒದರಿ ಹೆಂಡತಿಯ ಮುಖ ನೋಡಿದ ಗುಂಡ.....
ಹೆಂಡತಿ: ಉಪಯೋಗವಿಲ್ಲ ಬಿಡು ಅದನ್ನ ನಾನು ಮೊದಲೇ ಮಾಡಿನೋದಿದ್ದೇನೆ!!! :) ;)

Rating
No votes yet

Comments