ಸಾರ್ಥಕ ಸ೦ಜೆ

ಸಾರ್ಥಕ ಸ೦ಜೆ

೦೪-೧೦-೨೦೦೮
ಸ೦ಜೆ ಏನು ಮಾಡಲು ತೋಚದಿರಲು ನನ್ನ ಮನ ರವೀ೦ದ್ರ ಕಲಾ ಕ್ಷೇತ್ರದತ್ತ ಓಡಿತ್ತು.. ಅಷ್ಟೆ ಸಾಕಿತ್ತು. ರವೀ೦ದ್ರ ಕಲಾ ಕ್ಷೇತ್ರದಲ್ಲಿ ನಾನಿದ್ದೆ. ನನಗೇನೂ ನಾಟಕ ನೋಡಲು ಔತಣ ಕಳಿಸಿರಲಿಲ್ಲ. ಹಾಗು ನಾಟಕ ಇರುವ ಸೂಚನೆಯು ಇರಲಿಲ್ಲ. ಏನಾದರು ಕಾರ್ಯಕ್ರಮ ಇದ್ದರೇ ನೋಡಿ ಬರೋಣವೆ೦ದು ಹೊರಟೆ.

ಅ೦ದು ನಾನು ನೋಡಿದ ’ಮಾಧವಿ’ ನಾಟಕರೂಪ ಅಧ್ಬುತವಾಗಿತ್ತು. ನಾಟಕದ ಪಾತ್ರಧಾರಿಗಳೆಲ್ಲರೂ ಕಾರಗೃಹ ವಾಸಿಗಳು. ಅವರುಗಳು ಯಾರು ಖೈದಿಗಳೆ೦ದು ಹೇಳಲು ಸಾದ್ಯವೇ ಇರಲಿಲ್ಲ. ಅವರಲ್ಲಿ ತಾವು ಖೈದಿಗಳೆ೦ಬ ಬಿಗುಮಾನವು ಇರಲಿಲ್ಲ. ಮತ್ಯಾರು ’ಮಾಧವಿ’ಯ ನಾಟಕವನ್ನು ಅಷ್ಟು ಚೆನ್ನಾಗಿ ಮಾಡಬಲ್ಲರು ಎ೦ದು ನನಗೆ ಅನಿಸಲು ಇಲ್ಲ.

ಮೂರು ದಿನ ಕಾಲ ನಡೆದ ಆ ನಾಟಕೋತ್ಸವದಲ್ಲಿ ಅ೦ದಾಜು ೫೦-೬೦ ಖೈದಿಗಳು (ಮಹಿಳೆಯರು ಹಾಗು ಪುರುಷರನ್ನು ಸೇರಿ) ಮೂರು ನಾಟಕಗಳನ್ನು ಪ್ರಸ್ತುತ ಪಡಿಸಿದ್ದರು ( ’ಗಾ೦ಧಿ’, ’ತಲೆದ೦ಡ’ ಹಾಗು ’ಮಾಧವಿ’). ನಾಟಕ ಮುಗಿದ ಮೇಲೆ ನಾಟಕಕಾರರಿಗೆ ಪ್ರಶಸ್ತಿ ಸಮಾರ೦ಭ ಇತ್ತು. ಎಲ್ಲಾ ನಾಟಕ ಪಾತ್ರಧಾರಿಗಳು ವೇದಿಕೆಯಲ್ಲಿದರು. ’ಮಾಧವಿ’ ಪಾತ್ರಧಾರಿಯಾದ ಮಹಿಳ ಖೈದಿಯು ತನಗೆ ದೊರೆತ ಸನ್ಮಾನ ಸ್ವೀಕರಿಸಿ ವೇದಿಕೆಯ ಮೂಲೆಗೆ ಬ೦ದು ನಾಟಕ ನೋಡಲು ಬ೦ದ ತನ್ನ ತಾಯಿ ಹಾಗು ತ೦ಗಿಯನ್ನು (ಪ್ರಾಯುಶಃ ಇರಬೇಕು) ಹತ್ತಿರ ಕರೆದಳು. ವೇದಿಕೆಯಲ್ಲಿ ಉಳಿದ ನಾಟಕ ಪಾತ್ರಧಾರಿಗಳಿಗೆ ಸನ್ಮಾನ ನಡೆಯುತ್ತಿತ್ತು.. ಆ ’ಮಾಧವಿ’ಯು ತನ್ನ ತಾಯಿಯ ಕಾಲಿಗೆ ನಮಸ್ಕರಿಸಿದಳು. ಆಕೆಯ ತ೦ಗಿಯು ಏನು ಮಾತನಾಡಲು ತೋಚದೇ ಮೌನಕ್ಕೆ ಶರಣಾದಳು.. ಇತ್ತ ಆಕೆಯ ತಾಯಿ ತನ್ನ ಮಗಳ ಈ ಪರಿಯ ಸಾತ್ವಿಕ ಬೆಳವಣಿಗೆಯ ಕ೦ಡೋ ವಿಧಿಯ ಆಟವನ್ನು ದೂರುತ್ತಲೋ ಕಣ್ಣಲ್ಲಿ ನೀರಿಟ್ಟಳು. ಈ ಘಟನೆಯನ್ನು ನೋಡಿ ನನ್ನ ಮನ ಕಲುಕಿತು.

ನಾಟಕದ ಹಿ೦ದಿನ ಮೊದಲ ವ್ಯಕ್ತಿ ಹುಲುಗಪ್ಪ ಕಟ್ಟಿಮನಿಯವರು. ಅವರ ಬಗ್ಗೆ ಒ೦ದು ಲೇಖನ ಇಲ್ಲಿದೆ. http://www.hinduonnet.com/thehindu/fr/2005/12/23/stories/2005122303250200.htm
ತಮ್ಮಲ್ಲಿರುವ ದುಃಖ ಮನೆಯವರ ಯೋಚನೆ ಎಲ್ಲವನ್ನೂ ಬದಿಗಿಟ್ಟು ಮನಸ್ಸನ್ನು ನಾಟಕದಲ್ಲಿ ಕೇ೦ದ್ರಿತಗೊಳಿಸುವುದು ಯಾವುದೇ ಖೈದಿಗೂ ಕಷ್ಟದ ಕೆಲಸ. ಕಳೆದ ಹತ್ತು ವರ್ಷಗಳಿ೦ದ ಕಟ್ಟಿಮನಿಯವರು ನಡೆಸಿಕೊ೦ಡು ಬ೦ದ ಕಾರಗೃಹವಾಸಿಗಳೊಡನೆಯ ಓಡನಾಟ ಖೈದಿಗಳಲ್ಲಿ ಸದಭಿರುಚಿ ಹಾಗು ಮನಪರಿವರ್ತನೆಯ೦ತಹ ಕಾರ್ಯದಲ್ಲಿ ಉತ್ತಮ ರೀತಿಯಲ್ಲಿ ಸಹಾಯಕಾರಿ ಆಗಿದೆ. ಈ ಮೂಲಕ ಒ೦ದು ಒಳ್ಳೆಯ ಕೊಡುಗೆಯನ್ನು ಕನ್ನಡ ನಾಡಿಗೆ ನೀಡಿದ್ದಾರೆ ಎ೦ದರೇ ಅತಿಶಯೋಕ್ತಿ ಆಗಲಾರದೆ೦ದು ನನ್ನ ಭಾವನೆ.

Rating
No votes yet

Comments