ಸಿನೆಮಾ ಸಿನೆಮಾ

ಸಿನೆಮಾ ಸಿನೆಮಾ

ನಾನು ಕ್ಯಾಮೆರಾದ ಬಗ್ಗೆ ಅಷ್ಟೇನು ಮಾಹಿತಿ ಪಡೆದಿಲ್ಲ ಆದರೂ ಸಿನೆಮ ಮಾಡಬೇಕು ಎನ್ನುವ ಆದಮ್ಯ ಆಸೆ, ಆಸೆಗಳಿಗೇನು ರೆಕ್ಕೆ ಪುಕ್ಕ ಹಚ್ಚಿಕೊಂಡು ರಂಗು ರಂಗಾಗಿ ಹಾರುತ್ತವೆ, ನನ್ನ ಸಿನೆಮಾ ಗುಂಗು ಶುರುವಾಗಿದ್ದು ಬಾಲಿವುಡ್ ನ ಪ್ಯಾರಲೆಲ್ ಸಿನೆಮಾಗಳನ್ನು ನೋಡುವ ಹುಚ್ಚು ಹಚ್ಚಿಸಿ ಕೊಂಡಾಗಿನಿಂದ ನಿಂದ ಇರಬಹುದು, ಸಣ್ಣವಳಿದ್ದಾಗಲಿಂದಲೂ ನನ್ನ ಅಭಿರುಚಿ ಮರ ಸುತ್ತುವ ಸಿನೆಮಾಗಳಲ್ಲಿರಲಿಲ್ಲ , ಗೋವಿಂದ ನಿಹಲಾನಿ, ಸತ್ಯಜಿತ್ ರೆ, ಮಹೇಶ್ ಭಟ್ಟ್, ಅಮೋಲ್ ಪಾಲೇಕರ್ ಇಂತಹವರ ಸಿನೆಮಾಗಳೇ
ನನ್ನನ್ನು ಜಿಜ್ಞಾಸೆಗೆ ಹಚ್ಚಿದ್ದು, ಬರಬರುತ್ತಾ, ನಾನೂ ಸಿನೆಮಾ ಮಾಡಿಯೇ ತೀರಬೇಕೆಂಬ ದುರಾಸೆಯೊಂದು ಮೊಳೆತು ನನ್ನ ಹುಡುಕಾಟ ಶುರುವಾಯ್ತು, ಈ ಊರಿನಲ್ಲಿ ಸಿನೆಮಾ ಮಾಡುತ್ತಿರುವವರ ಪಟ್ಟಿ ಹಿಡಿದು ಅರ್ಜಿ ಗುಜರಾಯಿಸಿದೆ, ಇಂಟರ್ನ್ಶಿಪ್ ಸಿಗುತ್ತ್ತಾ, ಎಲ್ಲಾದರೂ ಏನಾದರೂ ಸ್ವಲ್ಪ ಕೆಲಸ ಕಲಿಯ ಬಹುದಾ ಅಂಥ
ಯೋಚಿಸಿದೆ. ಕಲಿಕೆ ಕಾಲೇಜ್ ನಲ್ಲಿ ಮಾಡಲು ತುಂಬ ಸಮಯ ಹಾಗು ಹಣದ ವ್ಯತ್ಯಯ ವಾಗುತ್ತದಾದ್ದರಿಂದ ಅಡ್ಡ ದಾರಿ ಹಿಡಿಯ ಬೇಕಾಯ್ತು, ಇನ್ನು ಸಿನೆಮಾ ಕಲಿಯಲು ಹೋದರೆ ಜನ ನಕ್ಕಾರು, ಜನವೇಕೆ ನನ್ನ ಜೋತೆಗಿರುವವರೇ ಸಾಕು ಕೀಚಾಯಿಸಲಿಕ್ಕೆ, ನಿನಗೇನು ಅರಳು ಮರಳು ಈ ವಯಸ್ಸಿಗೆ ಎಂದು ಅನ್ನಿಸಿಕೊಂಡಿದ್ದೂ ಆಗಿದೆ, ಆದರೂ ನನ್ನ ಸಿನೆಮಾ ಪ್ರೀತಿ ದೂರವಾಗಲಿಲ್ಲ ...ಕೊನೆಗೆ ಏನೋ ಹೇಳ್ತಾರಲ್ಲ ನೀವು ಮನಸ್ಸು ಮಾಡಿದರೆ ಪ್ರಪಂಚದ ಸಕಲ ಗ್ರಹಗಳು ನೀವು ಅನ್ನಿಸಿಕೊಂಡಿದ್ದನ್ನ ನಿಜ ಮಾಡಲು ಒಂದಾಗುತ್ತವಂತೆ.
ಹಾಗೆ ನನ್ನ ಸ್ನೇಹಿತೆ ಯೊಬ್ಬಳು ಇಲ್ಲೇ ಇರುವ ಲೋಕಲ್ ಟೆಲಿವಿಷನ್ ಸ್ಟೇಷನ್ ನಲ್ಲಿ ಕೊಡುವ ಟ್ರೈನಿಂಗ್ ಬಗ್ಗೆ ತಿಳಿಸಿದಳು,ಸರಿ ಅಪ್ಲೈ ಮಾಡಿ ಕಾದೆ, ಟ್ರೈನಿಂಗೂ ಸಿಕ್ಕಿತು, ಅದು ಮಹಾ ಟ್ರೈನಿಂಗ್ ಆಗಿರಲಿಲ್ಲ, ಇರುವುದರಲ್ಲಿ ಸ್ವಲ್ಪ ಕ್ಯಾಮೆರಾಗಳ ಬಗ್ಗೆ ಮಾಹಿತಿ ಕೊಡುವ ಪೂರ್ತಿ ತಾಂತ್ರಿಕ ಜ್ಞ್ಯಾನ ವಲ್ಲದಿದ್ದರೂ, ಕ್ಯಾಮೆರಾ ಹಿಡಿಯುವಷ್ಟು ಮಾಹಿತಿ ಸಿಕ್ಕಿತ್ತು, ಮುಂದೆ ಒಂದೊಂದಾಗಿ ಕಲಿಯುತ್ತ ಕಲಿಯುತ್ತ ಈಗ ಸ್ವಲ್ಪ
ಕ್ಯಾಮೆರಾದ ಬಗ್ಗೆ ಧೈರ್ಯ ಬಂದಿದೆ ಮುಂದೆ ಕ್ಯಾಮೆರಾದ ಬಗ್ಗೆ ಮತ್ತಷ್ಟು ತಿಳಿಯುವ ಉತ್ಸಾಹ ಹುಮ್ಮಸ್ಸಿದೆ,
ಮೊನ್ನೆ ನಮ್ಮಲ್ಲಿಗೆ ಸಿನೆಮಾ ಮಾಡುವವರು ಬಂದಿದ್ದರು, ನನಗೋ ಇರಿಸುಮುರಿಸು ಮೊದಲೇ ಕ್ಯಾಮೆರಾಗಳ ಜೊತೆ ಕೆಲಸಮಾಡಲು ಅಷ್ಟು ಚೆನ್ನಾಗಿ ಬರುವುದಿಲ್ಲ ಮತ್ತೆ ಇಂಟರ್ವ್ಯೂ ಮಾಡುವಾಗ ಅನೇಕ ಅಡಚಣೆಗಳು, ಶೂಟ್ ಮಾಡಿದರೆ ವಾಯ್ಸ್ ಇಲ್ಲ , ವಾಯ್ಸ್ ಇದ್ದರೆ ವಿಸುಅಲ್ ಇಲ್ಲ ರಾಮ...ಹುಡುಗಿಯರಿಗಾಗುವ ಕೆಲಸವಲ್ಲ ಅಂದುಕೊಂಡೆ , ಎಷ್ಟೋ ಬಾರಿ ಹೀಗಂದುಕೊಳ್ಳುತ್ತಿದ್ದಾಗಲೇ ಕಲಿಕೆಯ ಹುಡುಕಾಟವೂ ಶುರುವಾಗುವುದು, ಯರುಏನಂದುಕೊಂಡರೆ ಏನು ಎಮ್ಮೆ ನಿನಗೆ ಭಂಗವಿಲ್ಲ ಎಂದು ಕಲಿಕೆ ಮುಂದುವರಿಸಬೇಕು, ಇದನ್ನಲ್ಲವೇ ಸ್ತ್ರೀ ಸ್ವಾತಂತ್ರ್ಯ ಎನ್ನುವುದು ?
ನಮ್ಮಲ್ಲಿ ಬಹಳ ಮಂದಿ ಸ್ತ್ರೀಯರು ಸಿನೆಮಾ ಮಾದುವುದಕ್ಕಿಳಿದಿಲ್ಲ ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು , ಅಪರ್ಣ ಸೇನ್ , ಕನ್ನಡದ ಕವಿತಾ ಲಂಕೇಶ್ , ಅರುಣರಾಜೆ ಅರಸ್ ಅಂಥವರು ಒಬ್ಬಿಬ್ಬರನ್ನು ಬಿಟ್ಟರೆ ಮರ್ಯಾದಸ್ಥ ಹೆಣ್ಣು ಮಕ್ಕಳು ಸಿನೆಮಾ ಮಾಡೋಲ್ಲ ಅನ್ನುವ ಸಮಾಜದ ಅನ್ನಿಸಿಕೆ ಇನ್ನೂ ದೂರವಾಗಿಲ್ಲ..ನಾನು ಕ್ಯಾಮೆರಾ ಹಿಡಿದಂದಿನಿಂದ ನಮ್ಮ ಅಮೇರಿಕಾದ ಕನ್ನಡಿಗರೇ ಮೂಗುತಿರುವಿದ್ದದ್ದಿದೆ , ಆದರೂ ನಾನು ಸಿನೆಮಾ ಮಾಡಿಯೇ ತೀರುತ್ತೇನೆ ಎನ್ನುವ ಗುಂಗಿದೆ, ಒಂದು ಒಳ್ಳೆ ಸಿನೆಮಾ ಮಾಡಿಯೇ ತೀರಬೇಕು ಎನ್ನುವ ಆದಮ್ಯ ಆಸೆಯಿದೆ, ಇನ್ನು ಕಲಿಯುವುದು ಬೆಟ್ಟದಷ್ಟಿದೆ, ಸಣ್ಣಸಣ್ಣ ಹೆಜ್ಜೆಗಳು ಇದೇ ಸ್ತ್ರೀ ಇತಿಹಾಸದ ದೊಡ್ಡ ಸಾಧನೆಗಳಲ್ಲವೇ ?
ಏನಂತೀರಿ?

Rating
No votes yet

Comments