ಸಪ್ತಸ್ವರಗಳು
ನಿಷಾದರ್ಷಭಗಾಂಧಾರಷಡ್ಜಮಧ್ಯಮಧೈವತಾಃ|
ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ||
ಸರಿಗಮಪದನಿ ಇವು ಏೞುಸ್ವರಗಳು
ನಿಷಾದ= ಸಂಕೇತ ’ನಿ’
ಋಷಭ=’ರಿ’
ಗಾಂಧಾರ=’ಗ’
ಷಡ್ಜ=’ಸ’
ಮಧ್ಯಮ=’ಮ’ (ಸರಿಗಮಪದನಿಯಲ್ಲಿ ನಡುವಿನದು (ಮಧ್ಯದ್ದು))
ಧೈವತ=’ಧ’
ಪಂಚಮ=’ಪ’ (ಸರಿಗಮಪದನಿಯಲ್ಲಿ ಐದನೆಯದು)
ಇವು ತಂತಿ ಮತ್ತು ಕೊರಲಿಂದ ಹೊಱಬರುವ ಏೞು ಸ್ವರಗಳು.
ಇಲ್ಲೂ ಎಲ್ಲಾ ಸ್ವರಗಳನ್ನು ಹೆಸರಿಸಲು ತೋಚದಾದಾಗ ಮಧ್ಯಮ ಮತ್ತು ಪಂಚಮವನ್ನು ಹಾಗೇ ಹೆಸರಿಸಿರಬಹುದು. ಅಲ್ಲದೇ ಈ ಎರಡು ಸ್ವರಗಳು ಎಲ್ಲಾ ಕಾಲಕ್ಕೂ ಕೇಳಲು ಸಿಗದಿರುವ ಕಾರಣಕ್ಕೂ ಅವಕ್ಕೆ ಹೆಸರಿಡಲು ತೋಚದೆ ’ಮಧ್ಯಮ’ ಮತ್ತು ’ಪಂಚಮ’ ಎಂದು ಹೆಸರಿಸಿರಬಹುದು. ಯಾಕೆಂದರೆ ಕೋಗಿಲೆ ’ಪಂಚಮ’ವನ್ನು ಹೂಬಿಡುವ ಕಾಲಕ್ಕೆ ಹಾಗೂ ನವಿಲು ಮುಂತಾದುವುಗಳು ಮತ್ತವಾದಾಗ ಮಾತ್ರ ಪಂಚಮವನ್ನು ಹಾಡುತ್ತವಂತೆ. ನೋಡಿ: ಪುಷ್ಪಸಾಧಾರಣೇ ಕಾಲೇ ಪಿಕಃ ಕೂಜತಿ ಪಂಚಮಮ್||
ಮಯೂರಾದಯ ಏತೇ ಹಿ ಮತ್ತಾ ಗಾಯಂತಿ ಪಂಚಮಮ್|| ಆದರೆ ಉೞಿದ ಸ್ವರಗಳನ್ನು ಈ ಪ್ರಾಣಿ ಪಕ್ಷಿಗಳ ಸ್ವಾಭಾವಿಕ ಧ್ವನಿಯಾಗಿದೆ.
ಷಡ್ಜ(ಸ)=ನವಿಲು
ಋಷಭ(ರಿ)=ಎತ್ತು
ಗಾಂಧಾರ(ಗ)=ಮೇಕೆ
ಮಧ್ಯಮ(ಮ)=ಕ್ರೌಂಚಪಕ್ಷಿಗಳು
ಪಂಚಮ(ಪ)=ಕೋಗಿಲೆ (ಹೂಬಿಟ್ಟಾಗ)
ಧೈವತ(ಧ)=ಕುದುರೆ
ನಿಷಾದ(ನಿ)=ಆನೆ
ಷಡ್ಜಂ ಮಯೂರೋ ವದತಿ ಗಾವಸ್ತ್ವೃಷಭಭಾಷಿಣ:
................ಧೈವತಂ ಹೇಷತೇ ವಾಜೀ ನಿಷಾದಂ ಬೃಂಹತೇ ಗಜಃ||
(ಯಾರಾದರೂ ಗೊತ್ತಿದ್ದವರು ಇದನ್ನು ಪೂರ್ತಿ ಮಾಡಬಹುದು)
Comments
ಉ: ಸಪ್ತಸ್ವರಗಳು
In reply to ಉ: ಸಪ್ತಸ್ವರಗಳು by nsbhushan
ಉ: ಸಪ್ತಸ್ವರಗಳು
ಉ: ಸಪ್ತಸ್ವರಗಳು
In reply to ಉ: ಸಪ್ತಸ್ವರಗಳು by Rajeshwari
ಉ: ಸಪ್ತಸ್ವರಗಳು