ಡೈರಿಯ ಕೆಲವು ಹಾಳೆಗಳು - ಭಾಗ ೧೦

ಡೈರಿಯ ಕೆಲವು ಹಾಳೆಗಳು - ಭಾಗ ೧೦

ದಿನಾಂಕ:೭-ಮಾರ್ಚ್
ಅವನು:
ಇವತ್ತು ನನ್ನ ಜೀವನ ಒಂದು ಮಹತ್ವದ ದಿನ ಅಂತಲೇ ಹೇಳಬಹುದು. ಅವಳನ್ನ ಇವತ್ತು ಮೊದಲ ಬಾರಿಗೆ ಮುಖ ಮುಖಿಯಾಗಿ ಮಾತನಾಡಿಸಿದೆ.:-). ಇದೆಲ್ಲ ಸಾಧ್ಯವಾಗಿದ್ದು ನನ್ನ ಗೆಳೆಯ ರಾಜೇಶನಿಂದ. ರಾಜೇಶನಿಗೆ ಇವತ್ತು ಇಲ್ಲಿ ಕೆಲಸ ಇದ್ದಿದ್ದರಿಂದ ನನ್ನ ಬಸ್ಸಿನಲ್ಲೇ ಪ್ರಯಾಣ ಮಾಡ್ತಿದ್ದ. ಆಶ್ಚರ್ಯ ಅಂದ್ರೆ ಅವನಿಗೆ ಅವಳು ಪರಿಚಯ ಇದ್ಲು!!!
ಅವರಿಬ್ಬರೂ ಕಾಲೇಜಿನಲ್ಲಿ ಸಹಪಾಟಿಗಳು ಆಗಿದ್ರಂತೆ. ನಮ್ಮಿಬ್ಬರನ್ನು ಅನೌಪಚಾರಿಕವಾಗಿ ಭೇಟಿ ಮಾಡಿಸಿದ. ಆಗ ನನಗೆಷ್ಟು ಸಂತೋಷ ಆಯಿತು ಅಂದ್ರೆ,ಕೇವಲ ಕೆಲವೇ ದಿನಗಳ ಹಿಂದೆ ಅವ್ಳು ನನ್ನ ಜೊತೆ ಕೂದಲು ನಿರಾಕರಿಸಿದ್ದಳು ಅನ್ನೋ ವಿಷಯ ಕೂಡ ನನಗೆ ಮರೆತು ಹೋಯಿತು. ನನ್ನ ಮನಸಿನಲ್ಲಿದ್ದ ಆತಂಕ, ಅವಳೆಡೆಗಿದ್ದ ನನ್ನ ದ್ವೇಷ, ಮತ್ತು ನಾನು ಹೇಡಿ ಅನ್ನೋ ಎಲ್ಲ ಭಾವನೆಗಳು ಕೊಚ್ಚಿಕೊಂಡು ಹೋದವು.
ನಾನೆಗ ಅವಳನ್ನ ನಿರ್ಭಯದಿಂದ ನೋಡಬಹುದು, ಈಗ ಸಿಕ್ಕಿರುವ ಈ ಅವಕಾಶವನ್ನ ನನ್ನ ಗುರಿ ಮುಟ್ಟುವತ್ತ ಕೊಂಡೊಯ್ಯಬಹುದು. ಓ ದೇವರೇ ನಿನಗೆ ಕೋಟಿ ವಂದನೆಗಳು. ರಾಜೇಶ್ ನೀನು ಕಳಿಸಿದ ಯಕ್ಷನಂತೆ ಬಂದ.

ಅವಳು:
ದೇವರೇ ನಿಂಗೆ ತುಂಬ ಥ್ಯಾಂಕ್ಸ್.... ನನಗಿವತ್ತು ತುಂಬ ಖುಷಿಯಾಗಿದೆ. ಅವನಿಗೂ ಕೂಡ! ಅದನ್ನ ಅವನ ಮುಖವನ್ನ ನೋಡಿ ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ನನಗಾಗಿ ಅವನಲ್ಲಿ ಇನ್ನು ಭಾವನೆಗಳಿವೆ ಅನ್ನೋ ವಿಷ್ಯಾನೆ ನನ್ನಲ್ಲಿ ರೋಮಾಂಚನ ಉಂಟುಮಾಡುತ್ತಿದೆ. ನಾನವನ್ನ ಕಳೆದುಕೊಂಡೆ ಅಂದುಕೊಂಡಿದ್ದೆ, ದೇವರೇ ನಿನಗೆ ಧನ್ಯವಾದ ಅವನನ್ನ ನನಗೆ ಉಳಿಸಿಕೊಟ್ಟೆ. ನಾವೀಗ ಸ್ನೇಹಿತರು ಯಾರು ಮೊದಲು ಮಾತನಾಡಿಸಿದರು ಅನ್ನೋ ಪ್ರಶ್ನೆ ಇಲ್ಲಿ ಬರೋದಿಲ್ಲ. ದೇವ್ರೇ ನೀನು ನಿಜಕ್ಕೂ ಗ್ರೇಟ್.

ರಾಜೇಶ್:
ಇವತ್ತು ನಾನು ನಿರು ಜೊತೆ ಅವನ ಬಸ್ಸಿನಲ್ಲಿ ಪ್ರಯಾಣಿಸುತಿದ್ದೆ. ಅವ್ನು ನನ್ನ ಸ್ನೇಹಿತ. ಅದೇ ಬಸ್ಸಿನಲ್ಲಿ ನನ್ನ ಕಾಲೇಜಿನ ಸ್ನೇಹಿತೆ ಕೂಡ ಪ್ರಯಾಣಿಸುತ್ತಿದ್ದಳು. ಸುಮಾರು ವರ್ಷಗಳಾದ ಮೇಲೆ ಅವಳನ್ನ ನೋಡಿ ನನಗೆ ತುಂಬ ಸಂತೋಷ ಅನ್ನಿಸ್ತಿದೆ. ನನಗೆ ಇಲ್ಲಿಗೆ ವರ್ಗ ಆಗಿದಕ್ಕೆ ಏನೋ ಒಳ್ಳೆಯದು ಘಟಿಸಬಹುದು ಅನ್ನೋ ಸೂಚನೆ ಸಿಗ್ತಿದೆ. ಅವಳು ಕಾಲೆಜಿನಲ್ಲಿದ್ದಕಿಂತ ತುಂಬ ಚಂದ ಆಗಿದಾಳೆ. ಅವಳಿಗೆ ನನ್ನ ಮೇಲೆ ಕ್ರಶ್ ಇದ್ದಾಗ ನಾನೇಕೆ ಅವಳನ್ನ ನಿರಾಕರಿಸಿದೆ, ನಾನು ಮುಟ್ಠಾಳ ಅಂತ ಈಗ ಅನ್ನಿಸ್ತಿದೆ ನನಗೆ. ಅವಳಿನ್ನು ಯಾರನ್ನು ಪ್ರೀತಿಸುತ್ತಿಲ್ಲ, ಇನ್ನು ಒಂಟಿಯಾಗಿದಾಳೆ ಅಂತ ಅಂದ್ಕೋತೀನಿ. ನನಗೆ ಅಂಥಹ ಹುಡುಗೀನೆ ಬೇಕು. ನಾನೆಗ ಜೀವನದಲ್ಲಿ ನೆಲೆ ಕಂಡುಕೊಂಡಿದ್ದೇನೆ, ಪ್ರೀತಿ ವಿಷಯದಲ್ಲಿ ಮುಂದುವರಿಯಬೇಕು.

ಇವತ್ತು ನಾನು ಅವಳನ್ನ ನಿರುಗೆ ಪರಿಚಯ ಮಾಡಿದಾಗ, ಅವಳ ಮುಖ ದೀಪದಂತೆ ಹೊಳೆಯತೊಡಗಿತು. ಬಹಳ ದಿನದಿಂದ ಅವನನ್ನ ಮಾತನಾಡಿಸಬೇಕು ಅನ್ನೋ ಕಾತುರತೆ ಅವಳ ಮುಖದಲ್ಲಿ ಕಾಣಿಸುತ್ತಿತ್ತು. ನಿರುನ ಸ್ಥಿತಿ ಕೂಡ ಅವಳದ್ದಕ್ಕಿಂತ ಬೇರೆ ಏನು ಆಗಿರಲಿಲ್ಲ. ಅವರಿಬ್ಬರ ನಡುವೆ ಏನಾದ್ರೂ ನಡಿತಿದೇನ? ಅವರಿಬ್ಬರ ಮಧ್ಯೆ ಏನು ಇರಬಾರದು ಅಂದುಕೋತೀನಿ. ಓ ದೇವ್ರೇ ನಿಂಗೆ ಥ್ಯಾಂಕ್ಸ್ ಅವಳನ್ನ ಮತ್ತೆ ಭೀತಿಯಾಗುವ ಹಾಗೆ ಮಾಡಿದೆ. ಅವಳನ್ನ ನನ್ನವಳನ್ನಾಗಿ ಮಾಡಿಕೊಳ್ಳುವುದಕ್ಕೆ ಮತ್ತೊಮ್ಮೆ ಸಹಾಯ ಮಾಡ್ತಿಯ ಅಂತ ಅಂದುಕೊಳ್ತೀನಿ. ನಿರುನ ಇವಳಿಂದ ದೂರ ಇಡು ಪ್ಲೀಸ್.....

ದೇವರು:
ನಿಮಗೆ ಕೇವಲ ಖುಷಿ ಸಿಕ್ಕರೆ ಅದರ ಬೆಳೆ ಏನು ಅಂತ ಗೊತ್ತಾಗುತ್ತ? ಅದಕ್ಕೆ ಇಲ್ಲಿ ಎಲ್ಲದು ಪೂರ್ವನಿಯೋಜಿತವಾಗಿದೆ, ನಿಮಗೆ ಖುಷಿಯಾಗ್ತಿದೆ ಅಂದ್ರೆ ಅದರ ಬೆಳೆ ಏನು ಅಂತ ನಿಮಗೆ ಅರ್ಥವಾಗಿರಬೇಕು. ನಾನೇನು ಇಲ್ಲಿ ವಿಶೇಷವಾದದ್ದೇನು ಮಾಡಿಲ್ಲ. ಇಲ್ಲಿ ಅಗ್ತಿರೋದೆಲ್ಲ ಪೂರ್ವನಿಯೋಜಿತ. :-)

Rating
No votes yet

Comments