ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್

ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್

stellarium

ಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದುತ್ತಿದ್ದಾಗ ಘಂಟೆಗಟ್ಟಲೆ ಕರೆಂಟು ಹೋದರೆ ಅದು ತನ್ನದೇ ರೀತಿಯಲ್ಲಿ ಒಂದು ಒಳ್ಳೆಯ ಕೆಲಸ ಮಾಡುತ್ತಿತ್ತು. ನಮ್ಮೆನ್ನೆಲ್ಲ ಮಹಡಿಗೆ ಓಡಿಸಿ ನಕ್ಷತ್ರಗಳನ್ನು ಗುರುತಿಸುತ್ತ ಕೂರುವ ಕೆಲಸಕ್ಕೆ ಹಚ್ಚುತ್ತಿತ್ತು!

ಆದರೆ ಬೆಂಗಳೂರಿನಲ್ಲಿ ನಕ್ಷತ್ರಗಳನ್ನು ಗುರುತಿರುಸುವುದಿರಲಿ, ಕಾಣುವುದೇ ಕಷ್ಟ! ಅತ್ತ ಸಿಟಿ ಕಡೆಯಿಂದ ಬೆಳಕು ಇಡೀ ಆಕಾಶವನ್ನೇ ಆವರಿಸಿದಂತಿರುತ್ತದೆ. ಕರೆಂಟು ಹೋಗಿದ್ದರೂ ಕಾಣದು - ಬೇರೆಲ್ಲ ಕಡೆ ಇರುತ್ತದಲ್ಲ!

ಆದರೆ ಇಲ್ಲೊಂದು ಚೆಂದದ ತಂತ್ರಾಂಶ ಇದೆ ನೋಡಿ. ಇದರ ಹೆಸರು ಸ್ಟೆಲ್ಲೇರಿಯಮ್. ನಿಮ್ಮ ಕಂಪ್ಯೂಟರ್ ಮೇಲೇ ಒಂದು ಪ್ಲಾನೆಟೇರಿಯಂ ಇದ್ದ ಹಾಗೆ!‌

ಅಷ್ಟೇ ಅಲ್ಲ, ಈ ತಂತ್ರಾಂಶ ಸ್ವತಂತ್ರ ತಂತ್ರಾಂಶ ಕೂಡ ಹೌದು! ನೀವು ಈ ತಂತ್ರಾಂಶವನ್ನು ಬದಲಾಯಿಸಬಹುದು, ಹಂಚಬಹುದು, ಬೇರೆಯವರಿಗೂ‌ ಹಾಕಿಕೊಡಬಹುದು.

ಡೆಬಿಯನ್ ಅಥವ ಡೆಬಿಯನ್ ರೀತಿಯ (ಉಬುಂಟು ಇತ್ಯಾದಿ) ಗ್ನು/ಲಿನಕ್ಸ್ ಸಿಸ್ಟಮುಗಳಲ್ಲಿ ಈ ತಂತ್ರಾಂಶವನ್ನು ಹಾಕಿಕೊಳ್ಳಲು ಮಾಡಬೇಕಾದುದು ಇಷ್ಟೇ:
$apt-get install stellarium

ಗಮನಿಸಿ: ಈ ತಂತ್ರಾಂಶ ವಿಂಡೋಸ್ ಹಾಗು ಮ್ಯಾಕ್ ಬಳಸುವವರಿಗೂ ಲಭ್ಯವುಂಟು!

Rating
No votes yet

Comments