"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋರಿಸಿದರು. ಸಿಕ್ಕಿದ್ದೇನು? "www.leavingbangalore.com" ಅಭಿಯಾನ! ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳ ಅವಹೇಳನ. ಎಷ್ಟೋ ಜನರಿಗೆ ಬೆಂಗಳೂರು ಕಲ್ಪವೃಕ್ಷವಿದ್ದಂತೆ; ಮೊದಲ ನೌಕರಿ, ಮೊದಲ ಸಂಬಳ, ಮೊದಲ ಕಾರು, ಮೊದಲ ಮನೆ, ಎಲ್ಲಕ್ಕಿಂತ ಮಿಗಿಲಾಗಿ ತಾಳ್ಮೆಯುಳ್ಳ ಕನ್ನಡಿಗರ ಸ್ನೇಹ-ವಿಶ್ವಾಸಗಳೆಲ್ಲ ದೊರೆತದ್ದು ವಲಸಿಗರ ಸೌಭಾಗ್ಯವಲ್ಲವೇ? ಇದನ್ನು ಮರೆತ ಕೆಲ ಕಿಡಿಗೇಡಿ ವಲಸಿಗರು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ತಿರಸ್ಕೃತ ಮನೋಭಾವನೆಯಿಂದ ನೋಡುತ್ತಿರುವುದು ಅವರ ಸಂಕುಚಿತ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

"ದೇಸೀ ಮಾತು" ಬ್ಲಾಗಿನಲ್ಲಿರುವ "ಹೋಗುವುದಿದ್ದರೆ ಬೇಗ ತೊಲಗಿ ಪೀಡೆಗಳೆ" ಎಂಬ ಲೇಖನದ ಶಿರ್ಷಿಕೆ ಹೇಳುವುದನ್ನು ನೇರವಾಗಿ, ಪರಿಣಾಮಕಾರಿಯಾಗಿ ಹೇಳುತ್ತದೆ. ಬೆಂಗಳೂರಿನಲ್ಲಿ ಸುಮಾರು 60%ಗಿಂತ ಹೆಚ್ಚು ಜನ ವಲಸೆ ಬಂದವರು. ಅವರೆಲ್ಲ ಇಲ್ಲಿ ಬಿಡಾರ ಹಾಕಿದ್ದರಿಂದಲೇ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಶುರುವಾಗಿದ್ದು. ಅದನ್ನು ಮರೆತ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ರಸ್ತೆಗಳು ಸರಿಯಿಲ್ಲ, ಟ್ರಾಫಿಕ್ ಮಿತಿಮೀರಿದೆ, ಪರಿಸರ ಮಾಲಿನ್ಯವಾಗುತ್ತಿದೆ, ಜನರಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ’ಗರ್ವ’ವಿದೆ, "IT Hub" ಹೋಗಿ "Begger hub" ಆಗುತ್ತಿದೆ ಎನ್ನುವುದು ಸರಿಯೇ? ಅಷ್ಟೇ ಅಲ್ಲ, "ಎಲ್ಲ ಭಾಷೆಗಳನ್ನು ಪ್ರೀತಿಸಿ, ಕನ್ನಡವನ್ನು ಪೂಜಿಸುವ" ಕನ್ನಡಿಗರಿಗೆ, ಕನ್ನಡದ ಬಗ್ಗೆ ದುರಭಿಮಾನವಿದೆಯೆನ್ನುವುದು ನ್ಯಾಯವೇ? "ಉಪ್ಪು ತಿಂದ ಮನೆಗೆ ಎರಡು ಬಗೆಯುವ" ಈ ಕಿಡಿಗೇಡಿ "ಕುನ್ನಿಗಳು" ಇದ್ದರೆಷ್ಟು ಬೆಂಗಳೂರು ಬಿಟ್ಟು ತೊಲಗಿದರೆಷ್ಟು, ಹೋದರೆ ಹೋಗಲಿ, ಬೆಂಗಳೂರಿನ ಉಪ್ಪಿನ ಋಣ ಅವರನ್ನು ಅನ್ನ ಸಿಗದ ನಗರದಿಂದ ಪುನಃ ಕೈಬೀಸಿ ಕರೆದಾಗ ಗೊತ್ತಾಗುತ್ತದೆ ಈ ನೆಲದ ಘನತೆ.

ಭಾರತದಲ್ಲಿ "ವಿವಿಧತೆಯಲ್ಲಿ ಏಕತೆ" ಇದೆ ಎಂದು ಎದೆತಟ್ಟಿ ಹೇಳುವ ನಾವೆಲ್ಲರು(ಕನ್ನಡಿಗರು+ಕನ್ನಡೇತರರು), ವಿವಿಧ ಭಾಗಗಳಲ್ಲಿರುವ ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವುದನ್ನು ಕಲಿಯಬೇಕು. ಮತ್ತೊಂದು ಪ್ರದೇಶದ/ಭಾಗದ ಭಾಷೆ ಸಂಸ್ಕೃತಿಯನ್ನು ಗೌರವಿಸುವುದರಿಂದ ನಮ್ಮ ಮಾತೃಭಾಷೆಗೇನು ಧಕ್ಕೆಯಾಗವುದಿಲ್ಲ; ಬದಲಾಗಿ ಇನ್ನೂ ಲಾಭವೇ ಎನ್ನಿ. ಬೇರೆ ಭಾಷೆ/ಸಂಸ್ಕೃತಿಯನ್ನು ಕಲಿಯುದರಿಂದ/ಗೌರವಿಸುವುದರಿಂದ ಎರಡು ಸಂಸ್ಕೃತಿಗಳ ಮಿಲನವಾಗುತ್ತದೆ, ಮಾತೃಭಾಷೆಯ ಸಾಹಿತ್ತಿಕ ಉದ್ದಗಲಗಳು ಹಿಗ್ಗುತ್ತವೆ. ಉದಾಹರಣೆಗೆ, ಮಹಾರಷ್ಟ್ರದಲ್ಲಿ ಹೋಗಿ ಅಲ್ಲಿನ ಸಂಸ್ಕ್ರತಿಯನ್ನು ಗೌರವಿಸುವುದರಿಂದ ಕನ್ನಡಕ್ಕೇನು ಧಕ್ಕೆಯಿಲ್ಲ, ಆದರೆ ಆ ಸಂಸ್ಕೃತಿಯ "ಒಳ್ಳೆತನವನ್ನು" ಕನ್ನಡಿಸಿದರೆ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆ. ಅದೇ ರೀತಿ, ಮರಾಠಿಗರು ಕರ್ನಾಟಕಕ್ಕೆ ಬಂದು ಇಲ್ಲಿನ ಸಂಸ್ಕೃತಿಯ "ಒಳ್ಳೆತನವನ್ನು" ಮರಾಠಿಗೆ ಕೊಂಡೊಯ್ದರೆ ಮರಾಠಿಗಷ್ಟೇ ಲಾಭವೇ? ಕನ್ನಡದ ಹೆಸರು ಮತ್ತಷ್ಟು ಹರಡುವುದಿಲ್ಲವೇ? ಇದನ್ನರಿಯದು ಮೂರ್ಖರು "www.leavingbangalore.com" ನಂತಹ ಕಿಡಿಗೇಡಿ ಕೆಲಸ ಮಾಡಿದ್ದು ನಿಜಕ್ಕೂ ಶೋಚನೀಯ. ಸದ್ಯಕ್ಕೆ, www.leavingbangalore.com ವೆಬ್ ಸೈಟಿನ ಎತ್ತಂಗಡಿ ಕಾರ್ಯ ಮುಗಿದಿದೆ. ಆದರೆ ವಲಸಿಗರಲ್ಲಿರುವ ಸಂಕುಚಿತ ಮನೋಭಾವ ಭೂದಿ ಮುಚ್ಚಿದ ಕೆಂಡದಂತಿದೆ. ಅದನ್ನು ಆರಿಸಲು ಕನ್ನಡದಲ್ಲಿ ಒಬ್ಬ ರಾಜ್ ಥ್ಯಾಕ್ರೆ ಹುಟ್ಟಬೇಕೋ ಏನೋ...
ಸೂ: ಈ ಲೇಖನದ ಶಿರ್ಷಿಕೆ ಕುಮಾರಸ್ವಾಮಿ ಕಡಾಕೊಳ್ಳರವರ ಟೀಕೆಯಿಂದ ಆಯ್ದುಕೊಂಡದ್ದು.

Rating
Average: 1 (1 vote)

Comments