ಹಿಗೊ೦ದು ಗಿಣಿಯ ಕಥೆ

ಹಿಗೊ೦ದು ಗಿಣಿಯ ಕಥೆ

ರಾಮು ಒ೦ದು ಗಿಣಿಯ ಕಥೆ.

ಅತೀ ಶ್ರೀಮ೦ತ ಮಹಿಳೆಯೊಬ್ಬಳು ಕಾಲಾಪಹರಣಕ್ಕಾಗಿ ಮಾಡುತ್ತಿದ್ದ ಒ೦ದೇ ಒ೦ದು ಕೆಲಸವೆ೦ದರೆ ಶಾಪಿ೦ಗ್. ಏನಾದರೂ ಹೊಸದನ್ನು ಖರೀದಿಸುವ ಉದ್ದೇಶದೊ೦ದಿಗೆ ಮಾರುಕಟ್ಟೆಗೆ ಬ೦ದವಳಿಗೆ ಕ೦ಡದ್ದು ಒಬ್ಬ ಫುಟ್ಪಾತ್ ವ್ಯಾಪಾರಿ. ಅವನು ತನ್ನ ವಸ್ತುಗಳನ್ನು ಜೋಡಿಸಿಟ್ಟ ಪರಿ ಅವಳನ್ನು ಸೆಳೆಯಿತು. ಸ್ವಲ್ಪ ಹೊತ್ತು ಅಲ್ಲಿಯೇ ನಿ೦ತು ಎಲ್ಲ ಸಾಮಾನುಗಳನ್ನು ಕೂಲ೦ಕುಶವಾಗಿ ನೋಡಿದಳು. ಬಹುತೇಕ ಎಲ್ಲವೂ ಮಧ್ಯ ವರ್ಗೀಯರು ಖರೀದಿಸುವ ದಿನ ನಿತ್ಯದ ಚಿಲ್ಲರೆ ಸಮಾನುಗಳಾಗಿದ್ದವು. ಆವಳ ನೋಟ ಮಧ್ಯದಲ್ಲಿ ಇಟ್ಟಿದ್ದ ಪ೦ಜರದ ಕಡೆ ಹೋಯಿತು. ಅದರಲ್ಲಿದ್ದ ಮುದ್ದಾದ ಗಿಣಿ ಅವಳಿಗೆ ತು೦ಬಾ ಮೆಚ್ಚುಗೆಯಾಯಿತು.

"ಏನಪ್ಪ ಈ ಗಿಣಿ ಖರೀದಿಗೆ ಇದೆಯಾ?"

"ಹೌದು ತಾಯಿ, ಇವನ ಹೆಸರು ರಾಮು, ತು೦ಬ ಮುದ್ದಾಗಿ ಮಾತಾಡ್ತಾನೆ"

"ಏನೆಲ್ಲ ಮಾತಾಡತಾನೆ?"

"ನಿಮ್ಮ ಮನಸ್ಸು ಅರಿತು ನಿಮಗಿಸ್ಟವಾದ ಮಾತುಗಳನ್ನೇ ಅಡುತ್ತಾನೆ, ಆಗಾಗ ಹಾಡೂ ಹೇಳುತ್ತಾನೆ"

ವ್ಯಾಪಾರಿಯ ಮಾತುಗಳನ್ನು ಮೆಚ್ಚಿ ಅವಳು ಗಿಣಿ ರಾಮುವನ್ನು ಖರಿದಿಸಿ ತನ್ನ ಮನೆಗೆ ಕೊ೦ಡೊಯ್ಯುತ್ತಾಳೆ.

ಮರುದಿನ ಆ ಶ್ರೀಮ೦ತ ಮಹಿಳೆ ಮತ್ತೆ ಆ ವ್ಯಾಪಾರಿಯ ಬಳಿಗೆ ಬರುತ್ತಾಳೆ.

"ನೀನು ಸುಳ್ಳು ಹೇಳಿದೆ ನನಗೆ, ನಿನ್ನ ರಾಮು ಒ೦ದು ಶಬ್ದವನ್ನೂ ಮಾತಾಡಲಿಲ್ಲ"

"ಸಾಧ್ಯ ವಿಲ್ಲದ ಮಾತು ತಾಯಿ, ಅವನು ತು೦ಬ ಚೂಟಿ, ಬಹುಶಃ ಹೊಸ ಜಾಗ ಹೀಗಾಗಿ ಸ್ವಲ್ಪ ಸಮಯ ಬೇಕಾಗಿ ಬರಬಹುದು, ನೀವು ಈ ಕನ್ನಡಿಯನ್ನು ಕೊ೦ಡು ಅವನ ಮು೦ದಿಡಿ, ತನ್ನನ್ನು ತಾನೆ ನೋಡಿಕೊಳ್ಳುತ್ತ ಅವನು ಮಾತು ಆರ೦ಭಿಸಬಹುದು"

ಕನ್ನಡಿಯನ್ನು ಕೊ೦ಡ ಅವಳು ಮನೆಗೆ ತೆರಳುತ್ತಾಳೆ, ಮತ್ತೆ ಮರುದಿನ ಮರಳುತ್ತಾಳೆ.

"ನೀನು ಮತ್ತೆ ಸುಳ್ಳು ಹೇಳುತ್ತಿರುವೆ, ಅವನಿಗೆ ಬಹುಶ: ಮಾತುಬರದು, ಕನ್ನಡಿಯಿ೦ದೇನೂ ಪ್ರಯೊಜನವಗಲಿಲ್ಲ. ಇ೦ದು ರಾಮು ಮತನಾಡದೆ ಹೊದರೆ ನಾಳೆ ನಿನಗೆ ವಾಪಸ್ ಮಾಡಿ ಬಿಡುತ್ತೇನೆ ಸರಿಯೋ?"

"ತಾಯಿ ಇ೦ದು ಈ ಚಿಕ್ಕ ಜೋಕಾಲಿ ಕೊ೦ಡು ಕೊ೦ಡು ಹೋಗಿ, ಗಿಣಿಗಳಿಗೆ ಜೀಕುವುದೆ೦ದರೆ ಪ್ರಾಣ, ಜೀಕುತ್ತ ಅವನು ಹಾಡಲೂ ಆರ೦ಭಿಸಬಹುದು"

ಜೋಕಾಲಿ ಕೊ೦ಡ ಅವಳು ಮನೆಗೆ ತೆರಳಿದಳು, ಮತ್ತೆ ಮರುದಿನ ಮರಳಿದಳು. ಆವಳ ಮುಖದಲ್ಲಿ ಕೋಪ ಎದ್ದು ಕಾಣುತಿತ್ತು.

"ನೀನೋ, ನಿನ್ನ ಸುಳ್ಳುಗಳೋ, ಆ ದರಿದ್ರದ ಗಿಣಿ ರಾಮು ಒ೦ದೆ ಒ೦ದು ಸಾರಿ ತುಟಿ ಪಿಟಕ್ಕೆನ್ನಲ್ಲಿಲ್ಲ, ನಾಳೆ ತ೦ದು ಒಪ್ಪಿಸುವೆ ತೆಗೆದುಕೊ೦ಡು ನನ್ನ ಹಣ ಹಿ೦ತಿರುಗಿಸು ಆಯ್ತ? ಈಥರ ಇನ್ನಾರಿಗೂ ಮೋಸ ಮಾಡಬೇಡ ಆಯ್ತಾ?"

"ನನಗು ಅದೇ ಅರ್ಥವಾಗ್ತಿಲ್ಲ ತಾಯಿ, ನನ್ನ ಬಳಿ ಇರುವಾಗ ಬೇಸರ ಮೂಡಿಸುವಸ್ಟು ಮಾತಾಡುತ್ತಿದ್ದ, ಇರಲಿ ಕೊನೆಯ ಯತ್ನವಾಗಿ ಈ ಏಣಿಯನ್ನು ತೆಗೆದುಕೊ೦ಡು ಹೊಗಿ, ಏಣಿ ಹತ್ತಿ ಇಳಿಯುತ್ತ ಮಸ್ತಿಯಲ್ಲಿ ಅವನು ಹಾಡುವುದನ್ನು ನಾನು ತು೦ಬ ಸಲ ಕೇಳಿದ್ದೆನೆ. ದಯವಿಟ್ಟು ಒ೦ದೇ ಕೊನೆಯ ಯತ್ನ ತಾಯಿ ಒಪ್ಪಿಕೊಳ್ಳಿ"

ಹೇಗೂ ಕೊನೆಯ ಯತ್ನವೆ೦ದು ಒಪ್ಪಿಕೊ೦ಡ ಆಕೆ ಏಣಿಯನ್ನೂ ಕೊ೦ಡು ಮನೆಗೆ ತೆರಳಿದಳು.

ಮರುದಿನ ಆ ಹೆ೦ಗಸು ಬರುವುದನ್ನು ಕ೦ಡ ವ್ಯಾಪಾರಿಗೆ ಭಯ ಆವರಿಸಿತು, ಈ ದಿನವು ರಾಮು ಮಾತಾಡಿರದ್ದಿರೆ ಏನಾಗುವುದೋ ಎ೦ದು ಕೊಳ್ಳುತ್ತಲೆ ಹತ್ತಿರ ಬ೦ದವಳನ್ನು ತಾನೆ ಮೊದಲು ಕೇಳಿದ.

"ತಾಯಿ ರಾಮು ಮಾತನಾಡಿದನೆ?"

"ರಾಮು ಸತ್ತು ಹೋದ". ವ್ಯಾಪಾರಿಗೆ ಎಲ್ಲಿಲ್ಲದ ದುಃಖ ಉಕ್ಕಿ ಬ೦ತು, ಸುಧಾರಿಸಿಕೊ೦ಡು ಕೇಳಿದ.

"ತಾಯಿ ಸಾಯುವುದಕ್ಕೆ ಮು೦ಚೆ ಏನಾದರೂ ಹೇಳಿದನೆ?"

"ಇಲ್ಲ, ಮಾರುಕಟ್ಟೆಯಲ್ಲಿ ಹಣ್ಣು ಮಾರುವುದಿಲ್ಲವೆ? ಎ೦ದು ಕೇಳಿ ಕೊನೆಯುಸಿರ ಬಿಟ್ಟ".

ಸ್ನೆಹಿತರೆ ಹಿಗೆಯೇ ನಾವುಗಳೂ ಕೂಡ ಬೇಕು ಹಾಗು ಅಮಿಶಗಳ ವ್ಯತ್ಯಾಸವ ಸರಿಯಾಗಿ ಅರ್ಥೈಸಿಕೊಳ್ಳದೆ ಬಹುತೇಕ ಬಾರಿ ಉದ್ದೇಶವನ್ನು ಕೊಲ್ಲುತ್ತೇವೆ ಎ೦ದೆನಿಸುವುದಿಲ್ಲವೆ?

Rating
No votes yet

Comments