ನಾಟಕ ಬೆಂಗ್ಳೂರು 08

ನಾಟಕ ಬೆಂಗ್ಳೂರು 08

ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೆಂದ್ರ ಬೆಂಗಳೂರು ಇವರುಗಳು ರವಿಂದ್ರ ಕಲಾ ಕ್ಷೇತ್ರದಲ್ಲಿ ನಾಟಕ ಬೆಂಗ್ಳೂರು 08 ರಂಗಭೂಮಿ ಸಂಭ್ರಮ ನಡೆಸುತ್ತಿದ್ದಾರೆ. ಇದರಲ್ಲಿ ನಮ್ಮ ಕನ್ನಡದ ಹೆಸರಾಂತ ತಾಟಕ ತಂಡಗಳು ತಮ್ಮ ಅಭಿನಯವನ್ನು ಮಾಡುತ್ತಿದ್ದಾರೆ. ಟಿಕೇಟ್ ದರ 30ರೂ ಮತ್ತು 50ರೂಗಳು ರಂಗಭೂಮಿಯನ್ನು ಬೆಳೆಸಲು ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ನಾಡ ಸಂಸ್ಕ್ರತಿ ಬೆಳೆಯುತ್ತದೆ ಅನ್ನುವ ನನ್ನ ನಂಬಿಕೆ. ಅಂದಹಾಗೆ ಅಕ್ಟೋಬರ್ 11 ರಿಂದ ಈ ನಾಟ್ಕ ಪ್ರದರ್ಶನ ಶುರುವಾಗಿದೆ. ನಾಳೆಯಿಂದ ನಡೆಯುವ ನಾಟಕಗಳು ಈ ರೀತಿ ಇದೆ.
18-10-08 ರಂದು ಹಾಸನದಿಂದ ಬರುವ ತಂಡದಿಂದ ಉಚಿತ ನಾಟಕ ಪ್ರದರ್ಶನ
19-10-೦೮ ರ ಬಾನುವಾರ ಪ್ರಯೋಗರಂಗ ತಂಡದಿಂದ "ಜಂಗಮದ ಬದುಕು" ನಿರ್ದೇಶನ ನಾಗರಾಜ ಮೂರ್ತಿ,
20-10-08 ರ ಸೋಮವಾರ ಅಂತರಂಗ ತಂಡದಿಂದ "ಸದ್ದು! ವಿಚಾರಣೆ ನಡೀತಿದೆ" ನಿರ್ದೇಶನ ಋತ್ವಿಕ್ ಸಿಂಹ .
21-10-08 ರ ಮಂಗಳವಾರ ಅನೇಕ ತಂಡದಿಂದ "ಅರರೇ ಕುಂಞ ರಾಮ" ನಿರ್ದೇಶನ ಸುರೇಶ್ ಅನಗಲ್ಲಿ.
22-10-08 ರ ಬುಧವಾರ ಶಿವರಂಗ ತಂಡದಿಂದ "ಜೀವನ ನಾಟಕ" ನಿರ್ದೇಶನ ಮೈಕೋ ಶಿವಣ್ಣ.
23-10-08 ರ ಗುರುವಾರ ಬೆನಕ ಶೈಲೂಷರು ತಂಡದಿಂದ "ಸಾಹೇಬರು ಬರುತ್ತಾರೆ" ನಿರ್ದೇಶನ ಅರ್ ನಾಗೇಶ್.
24-10-08 ರ ಶುಕ್ರವಾರ ರಂಗ ನಿರಂತರ ತಂಡದಿಂದ "ತುದಿಯಂಬೋ ತುದಿಯಲ್ಲ" ನಿರ್ದೇಶನ ಕೃಷ್ಣ ಮೂರ್ತಿ ಕವತ್ತಾರ್. 25-10-08 ರ ಶನಿವಾರ ಕಲಾಗಂಗೋತ್ರಿ ತಂಡದಿಂದ "ಮಾಯಾವಿ ಸರೋವರ" ನಿರ್ದೇಶನ ಡಾ//ಬಿ.ವಿ. ರಾಜಾರಾಂ. 26-10-08 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಟರಂಗ ತಂಡದಿಂದ "ಮಾಯಾ ಡಂಗೂರ" ನಿರ್ದೇಶನ ನಂದಗೋಪಾಲ್.
26-10-08 ರ ಭಾನುವಾರ ಸಂಜೆ 7 ಗಂಟೆಗೆ ರಂಗಸಂಪದ ತಂಡದಿಂದ "ಕಳವು" ನಿರ್ದೇಶನ ಪ್ರಮೋದ್ ಶಿಗ್ಗಾಂವ್
ಈ ಎಲ್ಲಾ ನಾಟಕಗಳು ಬಾನುವಾರ ಬೆಳಗಿನ ಆಟ ಹೊರತುಪಡಿಸಿ ಸಂಜೆ 7 ಗಂಟೆಗೆ ಸರಿಯಾಗಿ ನಾಟಕ ಪ್ರಾರಂಭವಾಗುತ್ತದೆ. ಅಭಿಮಾನಿಗಳು ಹೆಚ್ಚು ಹೆಚ್ಚು ಹೋಗಿ ನಾಟಕಗಾರರಿಗೆ ಪ್ರೋತ್ಸಾಹ ನೀಡಿ ರಂಗಭೂಮಿಯನ್ನು ಉಳಿಸಿ ಬೆಳೆಸಿ

Rating
No votes yet

Comments