ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
ಕ.ರ.ವೇ. ಜನರನ್ನು ಈ ನೇಮಕಾತಿ ಬಗ್ಗೆ ಎಚ್ಚರಿಸುವುದರಲ್ಲಿ ಅದ್ಭುತ ಕೆಲಸ ಮಾಡಿದೆ ಆದರೂ ಇದು ಹಲವಾರು ನಿಟ್ಟಿನಲ್ಲಿ ಸೋತಿದೆ.
ಕ.ರ.ವೇ, ಒಂದೇ ಅಲ್ಲ, ಎಲ್ಲ ಕನ್ನಡ ಸಂಘಗಳೂ, ನಮ್ಮ ಸರ್ಕಾರ, ಎಂ.ಪಿ. ಗಳೂ, ಒಟ್ಟಾಗಿ ಎಲ್ಲ ಕನ್ನಡಿಗರೂ ಎಂದರೂ ತಪ್ಪೇನಿಲ್ಲ...
೧. ನಮ್ಮ ಎಂ.ಪಿ.ಗಳು ಕನ್ನಡಿಗರಿಗಾಗಿ ಆಗುತ್ತಿರುವ ಅನ್ಯಾಯದ ಬಗ್ಗೆ ಲೋಕ ಸಭೆಯಲ್ಲಿ, ಬಿಸಿ ತಟ್ಟುವಂತೆ ಇದುವರೆಗೂ ಗಲಾಟೆ ಮಾಡಿಲ್ಲ.
೨. ಕರ್ನಾಟಕದ ಎಂ.ಪಿ.ಗಳಿಗೆ, ಇಡೀ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಒಟ್ಟಾಗಿ ದನಿ ಏರಿಸುವ ಒಗ್ಗಟ್ಟಿಲ್ಲ.
ಓ, ಬಿ.ಜೆ.ಪಿ, ಸರ್ಕಾರನಾ? ಹಾಗಾದ್ರೆ, ಬಿಹಾರಿಗಳಿಗೇ ಕೆಲಸ ಸಿಗಲಿ, ನಮಗೆ ಮುಂದಿನ ಚುನಾವಣೆಗೆ ಚೆನ್ನಾಗಿ ಬಳಸ ಬಹುದು ಅನ್ನೋ ಧೋರಣೆ.
ಹಾಗೇ, ಕಾಂಗ್ರೆಸ್’ಆ? ಹಾಳಾಗಲಿ ಅನ್ನೋ ಧೊರಣೆ ಮತ್ತೊಂದು ಪಕ್ಷದ್ದು!
ಕಾವೇರಿ ಆಗಲಿ ರೈಲ್ವೇ ನೇಮಕಾತಿ ಆಗಲಿ ಯಾವುದೇ ವಿಷಯ ಆಗಲಿ, ನಮ್ಮ ಎಂ.ಪಿ.ಗಳಲ್ಲಿ ಒಗ್ಗಟ್ಟು ಇಲ್ಲ.
೩. ಕರ್ನಾಟಕದಲ್ಲಿ ವಕೀಲರಿಗೆ ಬರವಾ? ಅಥವಾ ನಿರ್ಲಕ್ಷ್ಯವಾ?
ಈ ರೈಲ್ವೆ ವಲಯಕ್ಕೆ ನೇಮಕಾತಿ ಮಾಡುವಾಗ, ಕನ್ನಡದಲ್ಲಿ ಅರ್ಜಿ ಇಲ್ಲ ಎಂದರೆ,
ನೇಮಕಾತಿ ಪರೀಕ್ಷೆಗೆ stay order ಪಡೆಯೋಕಾಗಲ್ವಾ?
ಈ ನೇಮಕಾತಿ ವಿಷಯದಲ್ಲಿ, ಸರ್ಕಾರದ ನಿಯಮವನ್ನು ಸರ್ಕಾರವೇ ಉಲ್ಲಂಘಿಸಿದೆ.
ಹೈ ಕೋರ್ಟ್, ಸುಪ್ರೀಂ ಕೋರ್ಟ್ ಇರೋದು ಯಾಕೆ?
ಈ stay order ಪಡೆಯೋ ಕೆಲಸ ಕರ್ನಾಟಕ ಸರ್ಕಾರನೇ ಮಾಡಬೇಕು ಅನ್ನೊ ಧೋರಣೆ ಯಾಕೆ?
ಬೇರೆ ಪಕ್ಷದವರು ಮಾಡಿದರೇ, ಅವರ ಪಕ್ಷಕ್ಕೇ ಒಳ್ಳೆ ಹೆಸರಲ್ವಾ?
ಅನ್ಯಾಯ ಆಗುತ್ತಿದೆ ಅಂತ ಅನಿಸಿದ ಯಾವುದೇ ವಕೀಲನಿಂದ stay order ತರಕ್ಕೆ ಆಗಲ್ವಾ?
ಈ ರೀತಿ ದನಿ ಎತ್ತಿದರೆ, ಆ ವಕೀಲನಿಗೆ, ಎಲ್ಲ ಪಕ್ಷಗಳು ತಾ ಮುಂದು ನಾ ಮುಂದು ಅಂತಾ ಮೊದಲು ಸಪೋರ್ಟ್ ಮಾಡಕ್ಕೆ ಬರಲ್ವಾ?
೪. ಕರ್ನಾಟಕದಲ್ಲಿ ಕ.ರ.ವೇ ಅವರು ರೈಲುಗಳನ್ನು ತಡೆಯುವುದರಿಂದ, ಯಾರಿಗೆ ಬಿಸಿ ತಟ್ಟತ್ತೆ?
ಸಾಮಾನ್ಯ ಜನತೆಗೆ (ಅದೂ ಹೆಚ್ಚಾಗಿ ಕನ್ನಡಿಗರಿಗೆ!).
ಕನ್ನಡಿಗರ ವ್ಯಾಪಾರ, ವಹಿವಾಟೇ ನಿಲ್ಲೋದು!
ಇದರಿಂದ ಕೇಂದ್ರದಲ್ಲಿರೋವರಿಗೆ, ರೈಲ್ವೇ ಮಂತ್ರಿಗಳಿಗೆ ಬಿಸಿ ತಟ್ಟತ್ತಾ? ಇಲ್ಲ.
೫. ಇನ್ನು ರೈಲ್ವೇ ಸ್ಟೇಷನ್ ಗೆ ಕಲ್ಲು ತೂರುವುದು! ಈ ರೈಲ್ವೇ ನಿಲ್ದಾಣಗಳು ಯಾವ ರಾಜ್ಯದಲ್ಲಿದೆ? ಹಾಗೂ ಇದು ಜನರ ಆಸ್ತಿಯೇ...
ಇದಕ್ಕೆ ಕಲ್ಲು ತೂರುವುದು, ಹಾಳು ಮಾಡುವುದು ಮಾಡಿದರೆ ನಮ್ಮ ಕನ್ನಡ ಜನತೆಗೇ ಈ ಸೌಲಭ್ಯಗಳು ಇರೋದಿಲ್ಲ...ಹೀಗೆ ಮಾಡುವುದರಿಂದ ಉಪಯೋಗವೇನು?
ನಂಗಂತೂ ಗೊತ್ತಿಲ್ಲ...
೬. ಈಗ ಆಂಧ್ರದಲ್ಲಿ ಪರೀಕ್ಷೆ ನಡೆಸ್ತಾರಂತೆ ಅಂತ ಸುದ್ದಿ.
ಇದಕ್ಕೆ ಪ್ರತಿಯಾಗಿ ಬತ್ತಳಿಕೆಯಲ್ಲಿರುವ ಬಾಣವೇನು?
ಇದನ್ನು ಕನ್ನಡ ನಾಡಿನಲ್ಲಿ, ಕನ್ನಡಿಗರ ಮುಂದೆ ಗಲಾಟೆ ಮಾಡೋದು ಬಿಟ್ಟು, ಏನು ಮಾಡಿದಾರೆ?
೭. ಈ ನೇಮಕಾತಿ ಆಂಧ್ರದಲ್ಲಿ ನಡೆದರೆ, ಇದು ಇನ್ನೊಂದು ಕಾನೂನು ಉಲ್ಲಂಘನೆ ಅಲ್ಲವಾ?
ಇದನ್ನು ವಕೀಲರು ಪರಿಶೀಲಿಸಿದ್ದಾರ? ಮಾಧ್ಯಮಗಳು ಈ ಹುಳುಕನ್ನು ಹೊರಗೆಡವಿಲ್ಲವಾ? ಯಾಕೆ?
೭. ಗ್ರೂಪ್ ಡಿ ಹುದ್ದೆಗಳು ಸಿಕ್ಕಮೇಲೆ, ಕೆಲಸಕ್ಕಾಗಿ ಹಿಂದಿ ಕಲಿಯಬೇಕಾಗಬಹುದು. ಇದಕ್ಕೆ ನಮ್ಮ ಕನ್ನಡಿಗರು ತಯಾರಿದಾರ?
೮. ಕೊನೆಯದಾಗಿ, ಗ್ರೂಪ್ ಡಿ ಹುದ್ದೆಗಳು ಇರೋದು ಬರೀ ೪೭೦೦ ಮಾತ್ರ, ಕರ್ನಾಟಕದಲ್ಲಿ ಕೆಲಸದ ಅವಕಾಶಗಳಿಗೆ ಬರವಿಲ್ಲ.
ಇರುವ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಾ ಇಲ್ಲ...
--ಶ್ರೀ
(ತಪ್ಪು ಅರಿಮೆಗಳಿದ್ದರೆ ತಿದ್ದಿ...ನನ್ನಿ!)
Comments
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by kishoreyc
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by srinivasps
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by Chetan.Jeeral
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by vasant.shetty
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by srinivasps
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by srinivasps
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by srinivasps
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by vasant.shetty
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by srinivasps
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
In reply to ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು... by ಹಿರಣ್ಯಾಕ್ಷ
ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...