ಚಂದ್ರಯಾನ 1

ಚಂದ್ರಯಾನ 1

ಚಂದ್ರಯಾನ 1 ಉಪಗ್ರಹ ಹೊತ್ತ ಪಿ.ಎಲ್.ಎಲ್.ವಿ- ಸಿ 11 ನೌಕೆ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ ಸರಿಯಾಗಿ 6:22 ನಿಮಿಷಯಕ್ಕೆ ಬಾನಂಗಳಕ್ಕೆ ಚಿಮ್ಮಿತು. ವಿಜ್ಞಾನಿಗಳ ಪ್ರಕಾರ ಭಾರತದ ಚೊಚ್ಚಲ ಚಂದ್ರಯಾನದ ಆರಂಭ ಪರ್ಪೆಕ್ಟ್ ಎಂದಾಯಿತು. 1,380 ಕೆ.ಜಿ ತೂಕದ ಚಂದ್ರಯಾನ ಉಪಗ್ರಹವನ್ನು ಆಗಸಕ್ಕೆ ಹೊತ್ತೈದ ಪಿ.ಎಲ್.ಎಲ್.ವಿ ರಾಕೆಟ್ಟು ೪೪ ಮೀಟರ್ ನಷ್ಟು ಎತ್ತರ ಹಾಗೂ 316 ಟನ್ ತೂಕ ಹೊಂದಿದೆ. ಭೂಮಿಯಿಂದ 3.87 ಲಕ್ಷ ಕಿ.ಮೀಟರ್ ದೂರವಿರುವ ಚಂದ್ರನತ್ತ ಹೊರಟಿದೆ. ಇದು ಚಂದ್ರಗ್ರಹದಲ್ಲಿ ಸುಮಾರು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಇದು ಚಂದ್ರನ ಮೇಲ್ಮೈ ಹಾಗೂ ಅಲ್ಲಿನ ಖನಿಜಗಳ ಕುರಿತು ಮಾಹಿತಿ ಸಂಗ್ರಹಿಸಲಿದೆ. ಚಂದ್ರನ ಸುತ್ತ 100 ಕಿ.ಮೀ ಅಕ್ಷಾಂಶದಲ್ಲಿ ಈ ಉಪಗ್ರಹ ಸುತ್ತಲಿದೆ. ಚಂದ್ರನಲ್ಲಿ ನೀರು ಮತ್ತು ಖನಿಜ ನಿಕ್ಷೇಪಗಳ ಬಗ್ಗೆ ವಿಶೇಷವಾಗಿ ಈ ನೌಕೆ ಅಧ್ಯಯನ ನಡೆಸಿ ಮಾಹಿತಿ ನೀಡಲಿದೆ. "ಚಂದ್ರನ ಕಕ್ಷೆಗೆ ಉಪಗ್ರಹಗಳನ್ನು ಕಳುಹಿಸಿ ಚಂದ್ರಗ್ರಹದ ಮೇಲ್ಮೈಗುಣಲಕ್ಷಣಗಳು ಹಾಗೂ ಖನಿಜಗಳ ಮಾಹಿತಿ ಸಂಗ್ರಹಿಸುವುದು ಭಾರತೀಯ ವಿಜ್ಞಾನಿಗಳ ಕನಸಾಗಿದೆ" ಈ ಚಂದ್ರಯಾನದ ವೆಚ್ಚ ಸುಮಾರು 386 ಕೋಟಿ ರೂ.

ಈಗಾಗಲೇ ಚಂದ್ರನ ಮೇಲೆ ಸೈಟುಗಳನ್ನು ಪರ್ಚೇಸ್ ಮಾಡಲು ಜನರು ಮುಂದಾಗಿದ್ದಾರೆ. ನಮ್ಮ ಬೆಂಗಳೂರಿನ ನಿವಾಸಿಯೊಬ್ಬರು 3000 ರೂಗಳಿಗೆ 2 ಎಕರೆ ಜಮೀನನ್ನು ಖರೀದಿಸಿದ್ದಾರೆ. ನಮ್ಮ ಭಾರತಕ್ಕಿಂತ ಅಮೆರಿಕಾದಲ್ಲಿ ಹೆಚ್ಚು ಬೇಡಿಕೆ ಇದೆಯಂತೆ.
ಈ ಉಪಗ್ರಹದಿಂದ ನಮ್ಮ ಭಾರತಕ್ಕೆ ಗೌರವ ಬಿಟ್ಟರೆ ಸಾಮಾನ್ಯ ಜನರಿಗೆ ಏನು ಉಪಯೋಗವಾಗತ್ತೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಇದರ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿರುವುದು ಬೆಳಿಗ್ಗೆ ಕಂಡು ಬಂದವು.

Rating
No votes yet

Comments