ಹಾಟ್ಸ್ ಆಪ್ ಇಂಡಿಯಾ
ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ.
'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ.
ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇಖ.
"ಒಂದು ಬಾಣ ಪಕ್ಷಿಗೆ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ...
ನದಿ ನದೆಗಳೇ ಇವಳಿಗೆ ನರ ನಾಡಿ
ಸಾಗರಗಳೇ ಇವಳಿಗೆ ಒಡನಾಡಿ
ಮಹಾ ವೀರರ, ಸಿಕ್ಖರ, ಸಿದ್ದರ , ಬುದ್ದರ
ಜನನಿ ಜನನಿ ನೀ
ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ
ವಿಜಯೋತ್ಸವಕೆ ಬಂಗಾರದ ಮಳೆಗರೆದರು
ವಜ್ರ ವೈಡೂರ್ಯ ನಡು ಬೀದೀಲಿ ಚೆಲ್ಲಾಡಿದರು
ಗೆದ್ದವನಿಲ್ಲಿ ಸೋತವನ ಸನ್ಮಾನಿಸಿದ
ಗೊಮ್ಮಟನಾಗಿ ತ್ಯಾಗದಲ್ಲಿ ರಾರಾಜಿಸಿದ
ರಾಗ ಯೋಗ ನಾದ ವೇದ
ಧರೆಗೆ ತಂದರು ಸುಖಿಸಿ ಎಂದರು
ಇಲ್ಲಿ ಬಾಳಿನ ಚಿಂತೆ ಸಂತರದು
ಇಲ್ಲಿ ನಾಳಿನ ಚಿಂತೆ ದೇವರದು
ತುಂಡು ಬಟ್ಟೆಯ ತಾತನ ಉಪವಾಸ
ಘನ ಗುಲಾಮ ಗಿರಿಯ ಕಳೆಯುವುದೂ
ನಾದ ವೇದ ನಾಟ್ಯ ದೈವ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ಬಡಗಣವೆಲ್ಲ ಧರ್ಮ ಸ್ವರ
ರಾಮ ಕೃಷ್ಣ ವಿವೇಕರ
ಸಂತರ ಸಿದ್ದರ ಜನನಿ ಜನನಿ ನೀ
ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ "
-ರಾಕೇಶ್ ಶೆಟ್ಟಿ :)
Comments
ಉ: ಹಾಟ್ಸ್ ಆಪ್ ಇಂಡಿಯಾ
In reply to ಉ: ಹಾಟ್ಸ್ ಆಪ್ ಇಂಡಿಯಾ by sunilkumara.ms
ಉ: ಹಾಟ್ಸ್ ಆಪ್ ಇಂಡಿಯಾ
ಉ: ಹಾಟ್ಸ್ ಆಪ್ ಇಂಡಿಯಾ
In reply to ಉ: ಹಾಟ್ಸ್ ಆಪ್ ಇಂಡಿಯಾ by anil.ramesh
ಉ: ಹಾಟ್ಸ್ ಆಪ್ ಇಂಡಿಯಾ