ಉತ್ತಮರ ಸಂಗ ಎನಗಿತ್ತು ಸಲಹೋ!

ಉತ್ತಮರ ಸಂಗ ಎನಗಿತ್ತು ಸಲಹೋ!

ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು  - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸಂಪದಕ್ಕೇ ಬಂದುಬಿಡುತ್ತಿದ್ದರು!

ಸುಮ್ಮನೆ ಹೇಳಿದ್ದಲ್ಲ - ಕೆಲವು ದಿನಗಳ ಹಿಂದೆ ಸಂಗೀತ ಕಲಾನಿಧಿ ಡಾ.ವಸಂತಕುಮಾರಿ ಅವರು ಬರೆದ  ಎರಡು ತಮಿಳು ಬರಹಗಳು ದೊರೆತವು. ನನಗೆ ತಮಿಳು ಓದಿ ಬರೆಯಲು ಬರುವುದಾದರೂ, ಹೆಚ್ಚು ಅಭ್ಯಾಸವಿಲ್ಲದ್ದರಿಂದ ಸಾಲು ಸಾಲನ್ನು ಸೇರಿಸಿಕೊಂಡು ಓದುವುದು ತೀರ ನಿಧಾನವಾಗುತ್ತೆ. ಆದರೂ ಓದಿದೆ - ಏಕೆಂದರೆ ಇಂದಿನ ದಿನಗಳಲ್ಲಿ ಸಂಗೀತ ಕಚೇರಿಗಳಲ್ಲಿ - ಕರ್ನಾಟಕದ ಹೊರಗೂ - ದಾಸರ ಕೃತಿಗಳು ಕೇಳುತ್ತಿರುವುದಕ್ಕೆ ಒಂದು ದೊಡ್ಡ ಕೊಡುಗೆ ನೀಡಿದವರು ಡಾ.ಎಮ್.ಎಲ್.ವಿ. ಮತ್ತು ಅವರ ತಾಯಿ ಲಲಿತಾಂಗಿ ಎನ್ನುವ ಮಾತನ್ನು ಎಲ್ಲರೂ ಒಪ್ಪುತ್ತಾರೆ.  ಈ ಕಾರಣಕ್ಕಾಗಿ, ಈ ಎರಡು ಬರಹಗಳನ್ನೂ ಕನ್ನಡಕ್ಕೆ ತಂದು ಹರಿದಾಸ ಸಂಪದಕ್ಕೆ ಹಾಕಬೇಕೆನ್ನಿಸಿತು. ನನ್ನ ಅನುವಾದವನ್ನೇ ನೆಚ್ಚಿಕೊಂಡರೆ ಇದು ೨೦೦೯ ರ ಯೋಜನೆ ಆದೀತು ಅನ್ನುವ ಭಯವೂ ಆಯಿತು.

ಆದರೆ ಹೇಳಿದೆನಲ್ಲ - ಹರಿಸರ್ವೋತ್ತಮರ :) ಕೃಪೆಯಿಂದ ಸಂಪದವಿದ್ದಮೇಲಿನ್ನೇನು ಭಯ ? ಕೂಡಲೆ ಶೈಲಾ ಸ್ವಾಮಿಯವರನ್ನು ಅನುವಾದಿಸಲು ಸಾಧ್ಯವೇ ಎಂದು ಕೇಳಿದೆ. ಅವರೂ ತಮ್ಮ ಕೆಲಸಗಳ ನಡುವೆಯೂ, ತಕ್ಷಣ ಅದನ್ನು ಅನುವಾದಿಸಿಕೊಟ್ಟರು.

ಆ ಬರಹಗಳನ್ನು ಹರಿದಾಸ ಸಂಪದದಲ್ಲಿ ಹಾಕಿರುವೆ. ಕೆಳಗಿನ ಕೊಂಡಿಗಳನ್ನು ಚಿಟಕಿಸಿ ಆ ಬರಹಗಳನ್ನೋದಿ.

ಎಮ್.ಎಲ್.ವಸಂತಕುಮಾರಿ ಅವರಿಂದ ಪುರಂದರದಾಸರ ಬಗ್ಗೆ ಒಂದು ಕಿರುಬರಹ

ಎಮ್.ಎಲ್.ವಸಂತಕುಮಾರಿ ಅವರಿಂದ ಪುರಂದರದಾಸರ ಕೆಲವು ರಚನೆಗಳ ಬಗ್ಗೆ ಒಂದು ಬರಹ

-ಹಂಸಾನಂದಿ

 

 

Rating
No votes yet

Comments