ಬರೀ ನೆನಪು
ನಾನು ಕಂಡ ಮೊತ್ತ ಮೊದಲ ಅಪರೂಪದ ಗೆಳತಿಯ ಬಗ್ಗೆ ಇಲ್ಲಿ ಅವಳ ನೆನಪುಗಳನ್ನು ಇಲ್ಲಿ ಹೇಳಿಕೊಳ್ಳುವ ಆಸೆ. ನಾನು ಎಂದೂ ಹುಡುಗಿಯರ ಸ್ನೇಹ ಬೆಳೆಸಿದವನಲ್ಲ, ಈಗ ಇದೆ ಅದೇ ಬೇರೆ ವಿಷಯ ಅದು ನಮ್ಮ ಮನೆಯವರಿಗೆ ತಿಳಿಯದ ಹಾಗೇ. ಅದಕ್ಕೆ ಕಾರಣ ನಾನು ಬೆಳೆದ ಪರಿಸರವಿರಬಹುದು. ಹುಡುಗಿಯರೇ ಯಾಕೇ ಹುಡುಗರಲ್ಲಿಯೂ ಗಾಢವಾದ ಸ್ನೇಹ ಬೆಳೆಸಿದವಲ್ಲ ಅದಕ್ಕೆ ನನ್ನ ಮನೆಯಲ್ಲಿ ಅವಕಾಶ ನೀಡಲೇ ಇಲ್ಲ.
ನಮ್ಮದು ಹಳ್ಳಿ ಅಲ್ಲಿ ಬೇರೆ ಸ್ನೇಹಿತರ ಜೊತೆ ತಿರುಗಾಡಿದರೆ ಸಾಕು ಮನೆಯಲ್ಲಿ ರಾದ್ದಾಂತವಾಗುತ್ತಿತ್ತು. ನೀನು ಅವನ ಜೊತೆ ಸೇರಿ ನೀನು ಹಾಳಾಗುತ್ತೀ ಅಂಥ ಒಂದೇ ಪ್ರಶ್ನೆ? ಇದು ಯಾರ ಜೊತೆ ಸಹವಾಸ ಮಾಡಿದರೂ ಇದೇ ರಾಗ. ನಾನು ಬಿ.ಎ ವರೆಗಿನ ಸ್ನೇಹಿತರೆಲ್ಲಾ ಬರೀ ಮನೆಯವರಿಗೆ ತಿಳಿಯದೇ ನಡೆಯುವ ಸ್ನೇಹವಷ್ಟೇ ಅಲ್ಲಿ ನಮ್ಮ ಸ್ನೇಹವೇನಿದ್ದರೂ ಕಾಲೇಜಿನಲ್ಲಿ ಮಾತ್ರ ಇರುತ್ತಿತ್ತು. ಹುಡುಗಿಯರ ಸ್ನೇಹವಂಥೂ ಹೇಳುವ ಪ್ರಶ್ನೆಯೇ ಇಲ್ಲ. ನಾನು ಬೆಳೆದ ಪರಿಸರ ನನ್ನನ್ನು ನಾಚಿಕೆ ಸ್ವಭಾವದವನಾಗಿ ಬೆಳೆಸಿತ್ತು. ಹುಡುಗಿಯರ ಕಂಡರೆ ನನ್ನಲ್ಲೇ ಯಾಕೋ ಒಂಥರಾ ಭಯ, ನಾಚಿಕೆ ನನ್ನ ಮನದಲ್ಲಿ ಮನೆ ಮಾಡುತ್ತಿತ್ತು. ಎಷ್ಟೋ ಹುಡುಗಿಯರೂ ನನ್ನ ಮಾತನಾಡಿಸಲು ಪ್ರಯತ್ನಿಸಿ ಸೋತು ಹೋದರು.
ನಾನು ಅಂತಿಮ ಬಿ.ಎ ಮುಗಿಸಿ ಬೆಂಗಳೂರಿನ ಜ್ಞಾನ ಭಾರತಿಯಲ್ಲಿ ಸ್ನಾತಕೋತರ ಪದವಿ ವಿಧ್ಯಾಭ್ಯಾಸಕ್ಕೆ ಬಂದ ನಂತರ ನಡೆದ ಮರೆಯದ ಘಟನೆಗಳೇ ಈ ಬ್ಲಾಗ್ ಬರೆಯಲು ಸ್ಪೂರ್ತಿ. ನಾನು ಎಂ.ಎ ತೃತೀಯ ಸೆಮಿಸ್ಟರ್ ನಲ್ಲಿದ್ದಾಗ ಯಾವ ಹುಡುಗಿಯರ ಸ್ನೇಹ ಬೆಳೆಸದವನೂ ಒಂದು ದಿನ ಒಬ್ಬಳು ಹುಡುಗಿಯು ನಾನು ಮಧ್ಯಾಹ್ನ ಊಟ ಮಾಡುವ ಸ್ಥಳಕ್ಕೆ ಬಂದು ಅವಳ ಪರಿಚಯ ಹೇಳಿ, ನನ್ನ ಸ್ವಭಾವವನ್ನು ಪ್ರಶ್ನಿಸಿದಳೂ ಅದಕ್ಕೆ ನಾನು ನಾನು ಬೆಳೆದ ಪರಿಸರದ ಬಗ್ಗೆ ಹೇಳಿದೆ. ನಂತರ ಅವಳು ಪ್ರತಿನಿತ್ಯ ನನ್ನ ಜೊತೆ ಸ್ವಲ್ಪ ಸ್ವಲ್ಪವೇ ಸ್ನೇಹದ ಮೊಳಕೆ ಬಿತ್ತಲು ಸುರುಮಾಡಿದಳು. ಅವಳು ತಂದ ಊಟವನ್ನು ನಾನು ತಿನ್ನುತ್ತಿದ್ದೆ, ನಾನು ತಂದ ಹಾಸ್ಟೆಲ್ ಊಟವನ್ನು ಚೆನ್ನಾಗಿಲ್ಲದಿದ್ದರೂ ಅವಳು ತಿನ್ನುತ್ತಿದ್ದಳೂ ಹೀಗೆ ನಮ್ಮ ಸ್ನೇಹದ ಮರ ಬೆಳೆದು ಗಾಢವಾಗಲೂ ಅಲ್ಲಿ ಒಬ್ಬ ಶತ್ರು ನಮ್ಮ ಸ್ನೇಹಕ್ಕೆ ಅಡ್ಡಿ ಮಾಡಲು ಸುರು ಮಾಡಿದ. ಆದರೂ ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ನಂತರ ಅವನಂಥ ನನ್ನ ಸ್ನೇಹಿತರಿಂದ ನಮ್ಮ ಗಾಢ ಸ್ನೇಹಕ್ಕೆ ಧಕ್ಕೆಯಾಗಿ(ನನ್ನ ಬಗ್ಗೆ ಕೆಟ್ಟ ಭಾವನೆ ಮೂಡಿಸಿದರೂ) ಅವಳು ನನ್ನ ಜೊತೆ ಮಾತಾಡುವುದನ್ನು ಕಡಿಮೆ ಮಾಡಿದಳು ಹೀಗಲೂ ಅವಳು ನಾನು ಪೋನ್ ಮಾಡಿದರೇ ಮಾತಾಡುತ್ತಾಳೆ ಅದು ಬರೀ ಲೆಕ್ಕ ಹಾಕಿಕೊಂಡು ಮಾತಾಡುವಂತೆ ಮಾತಾಡುತ್ತಾಳೆ. ನಾನು ನನ್ನ ಬಗ್ಗೆ ವಿವರವಾಗಿ ಹೇಳಿ ನನ್ನ ಬಗ್ಗೆ ಕೆಟ್ಟ ಭಾವನೆ ತೊಲಗಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆದರೂ ಅವಳ ನೆನಪು ನನಗೆ ಸದಾ ಕಾಡುತ್ತಿರುತ್ತದೆ, ಅವಳ ನೋಡಿ ಸುಮಾರು ಆರು ಏಳು ತಿಂಗಳುಗಳೇ ಕಳೆದಿವೆ ಆದರೂ ಅವಳೊಂದಿಗಿನ ಕಾಲೇಜಿನ ಸಿಹಿ ನೆನಪುಗಳಲ್ಲೇ ನನಗೆ ಅವಳ ನೆನಪು ಮಾಡಿಕೊಳ್ಳಲು ಉಳಿದಿರುವುದು.
ನನಗೆ ಸ್ನೇಹದ ಮೌಲ್ಯ ತಿಳಿಸಿದ ಆ ನನ್ನ ಪ್ರಥಮ ಗೆಳತಿಯ ನೆನಪು ಎಂದೂ ನಾನು ಮರೆಯುವುದಿಲ್ಲ. ಮರೆಯುವುದಾದರೆ ನಾನು ಸತ್ತ ನಂತರವೇ. ನನ್ನ ನಿರ್ಮಲ ಸ್ನೇಹವ ಹಿತ ಸ್ನೇಹಿತರಿಂದ ತಪ್ಪಾಗಿ ತಿಳಿದ ಆ ಗೆಳತಿ ನನ್ನ ಬಗ್ಗೆ ಸರಿಯಾಗಿ ತಿಳಿಯುತ್ತಾಳೆಂಬ ನಂಬಿಕೆ. ಸ್ವಲ್ಪ ದಿನದ ಸ್ನೇಹದ ಸಿಹಿ ತಿನಿಸಿದ ಆ ನನ್ನ ಗೆಳತಿಗೆ ನಾನೆಂದು ಚಿರಋಣಿ.
Comments
ಉ: ಬರೀ ನೆನಪು
ಉ: ಬರೀ ನೆನಪು
In reply to ಉ: ಬರೀ ನೆನಪು by chandu123
ಉ: ಬರೀ ನೆನಪು